ಪ್ರೇಯಸಿಯಿಂದ ಹಣಕ್ಕಾಗಿ ಬ್ಲ್ಯಾಕ್‌ಮೇಲ್, ಡೆತ್‌ನೋಟ್ ಬರೆದಿಟ್ಟು ಪ್ರಿಯಕರ ಆತ್ಮಹತ್ಯೆ

ಮಂಗಳೂರು: ಪ್ರೇಯಸಿಯಿಂದ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಹಿನ್ನೆಲೆ ಡೆತ್ ನೋಟ್ ಬರೆದಿಟ್ಟು ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಹೊರವಲಯದ ಸೋಮೇಶ್ವರ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಬೆಳಗಾವಿಯ ಸಮ್ಮದ್ ರಾಯಗೌಡ(23) ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ. ಈತನ ಪ್ರೇಯಸಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಕೇಳಿದ್ದಳು. ಮನನೊಂದ ಯುವಕ ಡೆತ್‌ನೋಟ್ ಬರೆದಿಟ್ಟು ಸೋಮೇಶ್ವರ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ-ತಾಯಿ ಕಷ್ಟಪಟ್ಟು ದೂರದ ಊರಿಗೆ ಓದಲು ಕಳಿಸಿದರೆ ಪ್ರೀತಿ ಬಲೆಗೆ ಬಿದ್ದು ಜೀವ ಕಳೆದುಕೊಂಡಿದ್ದಾನೆ. ಉಳ್ಳಾಲ […]

ಪ್ರೇಯಸಿಯಿಂದ ಹಣಕ್ಕಾಗಿ ಬ್ಲ್ಯಾಕ್‌ಮೇಲ್, ಡೆತ್‌ನೋಟ್ ಬರೆದಿಟ್ಟು ಪ್ರಿಯಕರ ಆತ್ಮಹತ್ಯೆ
Follow us
ಸಾಧು ಶ್ರೀನಾಥ್​
|

Updated on: Feb 28, 2020 | 10:29 AM

ಮಂಗಳೂರು: ಪ್ರೇಯಸಿಯಿಂದ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಹಿನ್ನೆಲೆ ಡೆತ್ ನೋಟ್ ಬರೆದಿಟ್ಟು ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಹೊರವಲಯದ ಸೋಮೇಶ್ವರ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಬೆಳಗಾವಿಯ ಸಮ್ಮದ್ ರಾಯಗೌಡ(23) ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ. ಈತನ ಪ್ರೇಯಸಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಕೇಳಿದ್ದಳು. ಮನನೊಂದ ಯುವಕ ಡೆತ್‌ನೋಟ್ ಬರೆದಿಟ್ಟು ಸೋಮೇಶ್ವರ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ-ತಾಯಿ ಕಷ್ಟಪಟ್ಟು ದೂರದ ಊರಿಗೆ ಓದಲು ಕಳಿಸಿದರೆ ಪ್ರೀತಿ ಬಲೆಗೆ ಬಿದ್ದು ಜೀವ ಕಳೆದುಕೊಂಡಿದ್ದಾನೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.