ಮಂಗಳೂರು, ಅಕ್ಟೋಬರ್ 26: ನಿವೇಶನ ತೋರಿಸುವುದಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿ ಬಿಲ್ಡರ್ ತನಗೆ ಲೈಂಗಿಕ ಕಿರುಕುಳ (Sexual Harassment) ನೀಡಿದ್ದಾನೆ ಎಂದು ಸಂತ್ರಸ್ತೆ ಮಂಗಳೂರು ಮಹಿಳಾ ಠಾಣೆಯಲ್ಲಿ (Mangaluru Police Station) ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಬಿಲ್ಡರ್ ರಶೀದ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಿವೇಶನ ನೋಡಲೆಂದು ಮಹಿಳೆ ಅಕ್ಟೋಬರ್ 21ರಂದು ಬಿಲ್ಡರ್ ರಶೀದ್ ಜೊತೆ ಕಾರಿನಲ್ಲಿ ಕುಶಾಲನಗರಕ್ಕೆ ತೆರಳಿದ್ದರು. ಮಹಿಳೆ ಹೊಟೇಲ್‌ನಲ್ಲಿ ಇಬ್ಬರಿಗೂ ಪ್ರತ್ಯೇಕ ರೂಮ್ ಬುಕ್ ಮಾಡಿದ್ದರು. ಆದರೆ ಬಿಲ್ಡರ್ ರಶೀದ್ ಒಂದೇ ರೂಂನಲ್ಲಿ ಇರುವ ಇಂಗಿತ ವ್ಯಕ್ತಪಡಿಸಿದ್ದಾನೆ. ಇದಕ್ಕೆ ಒಪ್ಪದ ಮಹಿಳೆ ವಿರಾಜಪೇಟೆಯಲ್ಲಿನ ತನ್ನ ತಂಗಿಯ ಮನೆಯಲ್ಲಿ ಉಳಿದುಕೊಂಡಿದ್ದಾರೆ.
ಇದನ್ನೂ ಓದಿ: “ಸಹಕರಿಸು, ಇಲ್ಲ 24 ತುಂಡು ಮಾಡುವೆ”, ಬೆದರಿಕೆ ನೊಂದು ಯುವತಿ ಆತ್ಮಹತ್ಯೆಗೆ ಯತ್ನ
ಮರುದಿನ ಬಿಲ್ಡರ್ ರಶೀದ್ ಜೊತೆ ಮಹಿಳೆ ನಿವೇಶನ ನೋಡಲು ಹೋಗಿದ್ದಾರೆ. ಈ ವೇಳೆ ಬಿಲ್ಡರ್ ರಶೀದ್ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೇ, ದಾರಿ ಮಧ್ಯೆ ಹಣದ ಆಮಿಷ ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿದನು ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ, ಈ ವಿಚಾರ ಯಾರಿಗಾದರು ತಿಳಿಸಿದರೇ ಹಲ್ಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಆರೋಪಿ ರಶೀದ್ ವಿರುದ್ಧ ಮಂಗಳೂರು ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ