ಮಂಗಳೂರು, ಡಿಸೆಂಬರ್ 29: ಅರಬ್ಬಿ ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವಂತಹ (death) ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲ ಬಳಿ ನಡೆದಿದೆ. ಸಲ್ಮಾನ್(19), ಬಶೀರ್(23) ಮೃತರು. ಯುವಕ ಸೈಫ್ ಆಲಿನನ್ನು ಸ್ಥಳೀಯ ಜೀವರಕ್ಷಕ ತಂಡ ರಕ್ಷಣೆ ಮಾಡಿದೆ. ಚಿಕ್ಕಮಗಳೂರು ಮೂಲದ ಮೂವರು ಉಳ್ಳಾಲ ದರ್ಗಾಗೆ ಬಂದಿದ್ದಾಗ ಘಟನೆ ಸಂಭವಿಸಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ಚಿಂತಾಮಣಿ ಡೇರಿ ಪಕ್ಕದ ಹೆಚ್ಪಿ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ. ಆರ್.ಆರ್.ಬಾರ್ ಕ್ಯಾಷಿಯರ್ ಹೇಮಂತ್ನಿಂದ ರವಿ(31) ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಚಿಂತಾಮಣಿ ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬೆಳಗಾವಿ: ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇಂಚಲ ಬಳಿ ನಡೆದಿದೆ.
ಇದನ್ನೂ ಓದಿ: ಅಪ್ರಾಪ್ತೆ ಪುಸಲಾಯಿಸಿ ಕರೆದೊಯ್ದು ಐವರಿಂದ ಅತ್ಯಾಚಾರ ಆರೋಪ: ಮೂವರ ಬಂಧನ
ಮಂಗಲಾ ಭರಮನಾಯ್ಕರ್(50), ಚಾಲಕ ಶ್ರೀಶೈಲ(40) ಮೃತರು. ನಾಲ್ವರಿಗೆ ಗಾಯ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು: ನೀಲವಂಜಿ ಗ್ರಾಮದ ಬಳಿ ಮನಬಂದಂತೆ ಕೊಚ್ಚಿ ಯುವಕನ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಮದಾರಾಸಾದ ಶಿಕ್ಷಕಿಗೆ ಮತ್ತು ಬರುವ ಔಷಧಿ ನೀಡಿ ನಿರಂತರ ಅತ್ಯಾಚಾರವೆಸಗಿದ್ದ ಆರೋಪಿಯ ಬಂಧನ
ಮಾಕಂಡಯ್ಯ(28) ಮೃತ ಯುವಕ. ಕಾಲು ಮುರಿದು ಮನಬಂದಂತೆ ಕೊಚ್ಚಿ ದುಷ್ಕರ್ಮಿಗಳಿಂದ ಕೊಲೆ ಮಾಡಲಾಗಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದೆ.
ತುಮಕೂರು: ಹೈವೆ ಪಕ್ಕದಲ್ಲಿ ಯುವಕನ ಹತ್ಯೆ ಮಾಡಿರುವಂತಹ ಘಟನೆ ತುಮಕೂರು ತಾಲೂಕು ಬೆಳಧರ ಗ್ರಾಮದಲ್ಲಿ ನಡೆದಿದೆ. ನಿನ್ನೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಹೋಬಲ ಅಗ್ರಹಾರ ಗ್ರಾಮದ ಹನುಮಂತರಾಜು ಮೃತ ದುರ್ದೈವಿ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.