
ಮಂಡಸೌರ್, (ಮೇ 25): ಮಧ್ಯಪ್ರದೇಶದ (madhya pradesh) ಮಂಡಸೌರ್ ಜಿಲ್ಲೆಯ ಬಿಜೆಪಿ ಸದಸ್ಯ ಮನೋಹರ್ ಲಾಲ್ ಧಕಡ್ (Manohar Lal Dhakad) ಎಂಬಾತನ ಆಕ್ಷೇಪಾರ್ಹ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ಮಹಿಳೆಯೊಂದಿಗೆ ಧಕಡ್, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ನಿಲ್ಲಿಸಿದ ಕಾರಿನಲ್ಲೇ ರಾಸಲೀಲೆ ನಡೆಸಿದ್ದಾನೆ. ಸಾಲದಕ್ಕೆ ಕಾರಿನಿಂದ ಇಳಿದು ಹೆದ್ದಾರಿಯಲ್ಲೇ ಸಾರ್ವಜನಿಕವಾಗಿ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದು, ಹೆದ್ದಾರಿಯಲ್ಲಿ ಅಳವಡಿಸಲಾದ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಮನೋಹರ್ ಲಾಲ್ ಧಕಡ್ನ ರಾಸಲೀಲೆ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು, ಜನರು ಛೀ ಥೂ ಎಂದು ಉಗಿಯುತ್ತಿದ್ದಾರೆ.
ವಿಡಿಯೋದಲ್ಲಿ ಮನೋಹರ್ ಲಾಲ್ ಧಕಡ್ ತನ್ನ ಕಾರನ್ನು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ನಿಲ್ಲಿದ್ದಾನೆ. ಮೊದಲು ಆ ಕಾರಿನಿಂದ ಒಬ್ಬ ಮಹಿಳೆ ಬಟ್ಟೆ ಇಲ್ಲದೆ ಹೊರಬರುತ್ತಾಳೆ. ನಂತರ ಧಕಡ್ ಕೂಡ ಅರ್ಧ ಪ್ಯಾಂಟ್ ಬಿಚ್ಚಿಕೊಂಡು ಹೊರಬರುತ್ತಾನೆ. ಬಳಿಕ ರಸ್ತೆಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ್ದಾನೆ. ಈ ವಿಡಿಯೋ 8ನೇ ಲೇನ್‌ನಲ್ಲಿ ಅಳವಡಿಸಲಾದ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ 8 ಲೇನ್‌ನದ್ದಾಗಿದೆ ಹಾಗೂ ಇದು ಹೆದ್ದಾರಿಯಲ್ಲಿ ಅಳವಡಿಸಲಾದ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ಬೆನ್ನಲ್ಲೇ ಆತ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ವಿಡಿಯೋದಲ್ಲಿ ಧಕಡ್ ಕಾಣಿಸಿಕೊಂಡಿರುವ ಬಿಳಿ ಕಾರಿನ ನೋಂದಣಿ ಸಂಖ್ಯೆ ಎಂಪಿ 14, ಸಿಸಿ 4782 ಆಗಿದ್ದು, ಇದು ಮನೋಹರ್ ಲಾಲ್ ಧಕಡ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ. ಈ ನಡುವೆ ಧಕಡ್ ಮಹಾಸಭಾ ಎಂಬ ಸಂಘಟನೆಯಿಂದ ಮನೋಹರ್ ಲಾಲ್ ಧಕಡ್ ನನ್ನು ವಜಾ ಮಾಡಲಾಗಿದೆ.
ಇನ್ನು ಈ ರಾಸಲೀಲೆ ವೈರಲ್ ಆಗುತ್ತಿರುವ ಬಗ್ಗೆ ತನಿಖೆ ನಡೆಸಿದಾಗ ಮೇ 13ರ ರಾತ್ರಿ ಆ ವಿಡಿಯೋ ಭಾನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ಪತ್ತೆಯಾಗಿದ್ದು, ಸದ್ಯ ಇಬ್ಬರ ವಿರುದ್ಧ ಬಿಎನ್ಎಸ್ ಸೆಕ್ಷನ್ 296,285,3(5) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಆರೋಪಿಗಳ ಶೋಧ ನಡೆಸಿದ್ದಾರೆ.
ಇನ್ನು ಮನೋಹರ್ ಲಾಲ್ ಧಕಡ್ ರಾಸಲೀಲೆ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮಂಡಸೌರ್ ಜಿಲ್ಲಾಧ್ಯಕ್ಷ ರಾಜೇಶ್ ದೀಕ್ಷಿತ್ ಪ್ರತಿಕ್ರಿಯಿಸಿದ್ದು, ಧಕದ್ ಅವರ ಪತ್ನಿ ಮಂಡಸೌರ್ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯೆ. ಆದರೆ ಧಕಡ್ ಪಕ್ಷದ ನಾಯಕನಲ್ಲ. ಆತ ಆನ್‌ಲೈನ್‌ನಲ್ಲಿ ಬಿಜೆಪಿ ಸದಸ್ಯತ್ವ ಪಡೆದಿದ್ದ ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸುವುದು ಸರಿಯಲ್ಲ. ಪೊಲೀಸರು ವೀಡಿಯೊ ಚಿತ್ರೀಕರಣಗೊಂಡ ಸ್ಥಳಳವನ್ನು ಗುರುತಿಸುತ್ತಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಉಪ ಮಹಾನಿರೀಕ್ಷಕ ಮನೋಜ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.
ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಚುನಾಯಿತ ಪ್ರತಿನಿಧಿಗಳ ನಡವಳಿಕೆ ಮತ್ತು ಜವಾಬ್ದಾರಿಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:11 am, Sun, 25 May 25