ಬೆಂಗಳೂರು: ಬ್ಯಾಂಕ್ನಲ್ಲಿ ಡ್ರಾ ಮಾಡಿದ್ದ ಹಣವನ್ನು ಹಾಡಹಗಲೇ ಎಗರಿಸಿ ಕ್ಷಣಮಾತ್ರದಲ್ಲಿ ಖದೀಮರು ಪರಾರಿಯಾಗಿರುವ ಘಟನೆ ವಿಜ್ಞಾನನಗರ ಮುಖ್ಯರಸ್ತೆ ಬಳಿ ನಡೆದಿದೆ. ಮೊದಲೇ ಸಂಚು ನಡೆಸಿ ಬೈಕ್ನಲ್ಲಿಟ್ಟಿದ್ದ ಹಣವನ್ನು ದೋಚಿದ್ದಾರೆ.
ಡಿ.24ರಂದು ಬ್ಯಾಂಕ್ನಿಂದ 4 ಲಕ್ಷ ಹಣವನ್ನು ಸಂಜಯ್ ಕುಮಾರ್ ಎಂಬುವರು ಡ್ರಾ ಮಾಡಿದ್ದರು. 50 ಸಾವಿರ ಹಣವನ್ನ ಜೇಬಿನಲ್ಲಿಟ್ಟುಕೊಂಡು ಉಳಿದ ಹಣವನ್ನ ಬೈಕ್ನ ಡಿಕ್ಕಿಯಲ್ಲಿಟ್ಟಿದ್ದರು. ವಿಜ್ಞಾನ ನಗರದ ಮುಖ್ಯರಸ್ತೆ ಬಳಿ ಬೈಕ್ ನಿಲ್ಲಿಸಿ ಅಂಗಡಿಗೆ ಹೋಗಿ ಬರುವಷ್ಟರಲ್ಲಿ 3.50 ಲಕ್ಷ ರೂ. ಕದ್ದು ಪರಾರಿಯಾಗಿದ್ದಾರೆ.
ಮೂರು ಬೈಕ್ನಲ್ಲಿ ಬಂದ 6 ಜನರು ಸಂಜಯ್ರನ್ನು ಹಿಂಬಾಲಿಸಿದ್ದಾರೆ. ಮೊದಲೇ ಸಂಚು ನಡೆಸಿ ಹಣವನ್ನು ಲಪಟಾಯಿಸಿದ್ದಾರೆ. ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಸಂಜಯ್ ಕುಮಾರ್ ದೂರು ದಾಖಲಿಸಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.