ಬಳ್ಳಾರಿ: ಇಬ್ಬರು ಹೆಣ್ಣುಮಕ್ಕಳ ಜತೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ತಾಲೂಕಿನ ಮೋಕಾ ಬಳಿಯ ತುಂಗಭದ್ರಾ ಕಾಲುವೆಯಲ್ಲಿ ನಡೆದಿದೆ. ಓರ್ವ ಬಾಲಕಿ ರಕ್ಷಣೆ ಮಾಡಿದ್ದು, ಮತ್ತೊಬ್ಬ ಬಾಲಕಿ ಸಾವನ್ನಪ್ಪಿದ್ದು, ತಾಯಿ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳೀಯರಿಂದ (4) ವೆನ್ನಿಲಾ ರಕ್ಷಣೆ ಮಾಡಿದ್ದು, (2) ಶಾಂತಿ ಮೃತಪಟ್ಟಿದ್ದಾಳೆ. ತಾಯಿ ಲಕ್ಷ್ಮೀ ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ. ಬಳ್ಳಾರಿ ತಾಲೂಕಿನ ಗುಗ್ಗರಹಟ್ಟಿ ನಿವಾಸಿಗಳು ಎಂದು ಗುರುತಿಸಲಾಗಿದೆ. ನಾಲ್ಕು ಹೆಣ್ಣುಮಕ್ಕಳು ಹುಟ್ಟಿವೆ ಎಂಬ ಕಾರಣಕ್ಕೆ ಮನೆಯಲ್ಲಿ ನಿತ್ಯ ಗಂಡನ ಜೊತೆ ಜಗಳವಾಗುತ್ತಿದ್ದು, ಬೇಸತ್ತು ಕಾಲುವೆಗೆ ಹಾರಿದ್ದಾರೆ ಎನ್ನಲಾಗುತ್ತಿದೆ. 16 ವರ್ಷದ ಹಿಂದೆ ಗುಗ್ಗರಟ್ಟಿ ನಿವಾಸಿ ವೀರಭದ್ರ ಜೊತೆ ವಿವಾಹವಾಗಿತ್ತು. ಬಳ್ಳಾರಿ ನಗರದ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ತುಮಕೂರು: ಆಕಸ್ಮಿಕವಾಗಿ ಬೆಂಕಿ ತಗುಲಿ ಹಾಸಿಗೆ ತಯಾರಿಕಾ ಘಟಕ ಸುಟ್ಟು ಬೂದಿಯಾದಂತಹ ಘಟನೆ ಜಿಲ್ಲೆ ತುರುವೇಕೆರೆ ಪಟ್ಟಣದ ಹೊರವಲಯದಲ್ಲಿರುವ ಸೂಳೆಕೆರೆ ಬಳಿ ನಡೆದಿದೆ. ಅಪಾರ ಪ್ರಮಾಣದ ಹತ್ತಿ, ನಾರು, ಯಂತ್ರೋಪಕರಣಗಳು ಭಸ್ಮವಾಗಿವೆ. ವಲೀಭಾಷಾ ಎಂಬುವರಿಗೆ ಹಾಸಿಗೆ ತಯಾರಿಕಾ ಘಟಕ ಸೇರಿದೆ. ಸುಮಾರು 18 ಲಕ್ಷ ರೂ. ಮೌಲ್ಯದ ವಸ್ತುಗಳು ನಷ್ಟ ಸಾಧ್ಯತೆ ಎನ್ನಲಾಗುತ್ತಿದೆ. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಹುಕೋಟಿ ವಂಚನೆ ಪ್ರಕರಣ: ಕರಣ್ ಗ್ರೂಪ್ ಬಿಲ್ಡರ್ಸ್ & ಡೆವಲಪರ್ಸ್ ಮುಖ್ಯಸ್ಥನನ್ನು ಬಂಧಿಸಿದ ಇಡಿ
ಧಾರವಾಡ: ಭಿಕ್ಷೆ ಬೇಡುತ್ತ, ಜನ ಕೊಟ್ಟಿದ್ದನ್ನು ತಿಂದು, ಎಲ್ಲೆಂದರಲ್ಲಿ ಮಲಗಿ ಅನಾಥವಾಗಿ ಜೀವನ ಸಾಗಿಸುತ್ತಿದ್ದ ಭಿಕ್ಷುಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಕೊಂದು ಹಾಕಿರುವ ಅಮಾನವೀಯ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಕಳೆದ ರಾತ್ರಿ ಮಲಗಿದ್ದ ಭಿಕ್ಷುಕಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಈ ಪರಿಣಾಮ ಭಿಕ್ಷುಕಿ ಪ್ರಾಣಬಿಟ್ಟಿದ್ದಾರೆ.
ಇದನ್ನೂ ಓದಿ: 15 ವರ್ಷಗಳ ಹಿಂದೆ ಆಡಿದ ಆಟದ ವಿಷಯದಲ್ಲಿನ ದ್ವೇಷ ಸ್ನೇಹಿತನ ಕೊಲೆಯಲ್ಲಿ ಅಂತ್ಯ
ಧಾರವಾಡದಲ್ಲಿ ಬೀದಿ ನಾಯಿಗಳ ಆವಳಿಗೆ ಜನ ಬೆಚ್ಚಿಬಿದ್ದಿದ್ದಾರೆ. ಎಂದಿನಂತೆ ರಸ್ತೆ ಬದಿ ರಾತ್ರಿ ನಿದ್ದೆಗೆ ಜಾರಿದ್ದ ಭಿಕ್ಷುಕಿ ಮೇಲೆ ಬೀದಿ ನಾಯಿಗಳು ಎರಗಿವೆ. ಭಿಕ್ಷುಕಿಯನ್ನು ಕಚ್ಚಿ ಎಳೆದಾಡಿವೆ. ನಾಯಿ ದಾಳಿಯಿಂದ ಭಿಕ್ಷುಕಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಗ್ರಾಮದ ಖಬರಸ್ತಾನ್ ಬಳಿ ಶವ ಪತ್ತೆಯಾಗಿದ್ದು ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಯಿ ದಾಳಿಗೆ ಮೃತಪಟ್ಟ ಭಿಕ್ಷುಕಿ ಹೆಸರು, ವಿಳಾಸ ಪತ್ತೆಯಾಗಿಲ್ಲ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:07 pm, Thu, 12 January 23