15 ವರ್ಷಗಳ ಹಿಂದೆ ಆಡಿದ ಆಟದ ವಿಷಯದಲ್ಲಿನ ದ್ವೇಷ ಸ್ನೇಹಿತನ ಕೊಲೆಯಲ್ಲಿ ಅಂತ್ಯ
ಸಂತೋಷ್ ಮನೆಯಲ್ಲಿ ಒಬ್ಬನೇ ಇದ್ದಾನೆ ಎಂದು ತಿಳಿದ ಪ್ರಕಾಶ್, ಸಂತೋಷ್ ಮನೆಗೆ ನುಗ್ಗಿ ಆತ ಮಲಗಿದ್ದಾಗ ಅವನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.
ಕೊಲ್ಲಂ: ಕೇರಳದಲ್ಲಿ (Kerala) ವ್ಯಕ್ತಿಯೊಬ್ಬ 15 ವರ್ಷಗಳ ಹಿಂದೆ ಆಡಿದ ಆಟದ ವಿಷಯದಲ್ಲಿ ತನ್ನ ಸ್ನೇಹಿತನನ್ನು ಕೊಂದಿದ್ದಾನೆ. ಕೇರಳದ ಕೊಲ್ಲಂ(Kollam) ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪ್ರಕಾಶ್ ಎಂದು ಗುರುತಿಸಲಾದ ವ್ಯಕ್ತಿ ಸಂತೋಷ್ ಅವರ ಮನೆಗೆ ನುಗ್ಗಿ ಮಧ್ಯಾಹ್ನ ನಿದ್ರೆ ಮಾಡುತ್ತಿದ್ದಾಗ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಸಂತೋಷ್ ಅವರ ಸಂಬಂಧಿಯಾಗಿದ್ದ 17 ವರ್ಷದ ಯುವಕನಿಗೂ ಪ್ರಕಾಶ್ ಚಾಕುವಿನಿಂದ ಇರಿದಿದ್ದಾನೆ. ಸಂತೋಷ್ ಕೊಲೆಯಾದ ದಿನ, ಸಂತ್ರಸ್ತ ಮತ್ತು ಆರೋಪಿಗಳು ಪರಸ್ಪರ ಮಾತನಾಡಿದ್ದರು. ಸಂತೋಷ್ ಮನೆಯಲ್ಲಿ ಒಬ್ಬನೇ ಇದ್ದಾನೆ ಎಂದು ತಿಳಿದ ಪ್ರಕಾಶ್, ಸಂತೋಷ್ ಮನೆಗೆ ನುಗ್ಗಿ ಆತ ಮಲಗಿದ್ದಾಗ ಅವನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಪ್ರಕಾಶ್ ಮತ್ತು ಸಂತೋಷ್ 15 ವರ್ಷಗಳ ಹಿಂದೆ ಮಲಯಾಳಂನಲ್ಲಿ ‘ಮ’ ಅಕ್ಷರವನ್ನು ಹೇಳಿ ಒಬ್ಬರನ್ನೊಬ್ಬರು ಹೊಡೆಯುವ ಆಟವಾಡಿದ್ದರು.
ಸಂತೋಷ್ ಹೊಡೆದಿದ್ದರಿಂದಲೇ ತನ್ನ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಕಾರಣ ಎಂದು ಪ್ರಕಾಶ್ ನಂಬಿದ್ದರು. ಮದುವೆಯ ನಂತರ ಮಕ್ಕಳಾಗದಿರಲು ಇದೇ ಕಾರಣ ಎಂದು ಆತ ಅಂದುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಪತ್ನಿ ತೀರಿಕೊಂಡ ನಂತರ ಪ್ರಕಾಶ್‌ನ ದ್ವೇಷ ಮತ್ತಷ್ಟು ಹೆಚ್ಚಿದ್ದು ಆತ ಏಕಾಂಗಿಯಾಗಿದ್ದ. ಕಳೆದ ಒಂದು ವರ್ಷದಿಂದ ಸಂತೋಷ್‌ನನ್ನು ಕೊಲ್ಲುವ ಅವಕಾಶಕ್ಕಾಗಿ ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ವರದಿ ಪ್ರಕಾರ ಕಳೆದ ಒಂದು ವರ್ಷದಿಂದ ಪ್ರಕಾಶ್ ಕೊಲೆಗೆ ಯೋಜನೆ ರೂಪಿಸಿದ್ದ.ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅಲ್ಲಿ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ