ಪುಣೆ: ಟಿವಿ, ಸಿನಿಮಾ, ಯೂಟ್ಯೂಬ್ ಇಂದಿನ ಪೀಳಿಗೆಯ ಮೇಲೆ ಬಹಳ ಪರಿಣಾಮ ಬೀರುತ್ತಿದೆ. ಕೆಲವು ಕ್ರೈಂ ಶೋಗಳನ್ನು ನೋಡಿ ಚಿಕ್ಕ ಮಕ್ಕಳೇ ಕೊಲೆ ಮಾಡುವ ಹಂತಕ್ಕೆ ಹೋಗಿರುವ ಘಟನೆಗಳು ಕೂಡ ನಡೆದಿವೆ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಮಹಾರಾಷ್ಟ್ರದ ಪುಣೆಯಲ್ಲಿ ಕೊಲೆಯೊಂದು ನಡೆದಿದೆ. ಹಿಂದಿಯ ಜನಪ್ರಿಯ ಕ್ರೈಂ ಥ್ರಿಲ್ಲರ್ ಶೋ ಆಗಿರುವ ಸಿಐಡಿಯಿಂದ ಪ್ರೇರೇಪಣೆಗೊಂಡು ಅಪ್ರಾಪ್ತ ಮಕ್ಕಳಿಬ್ಬರು 70 ವರ್ಷದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಅ. 30ರಂದು 14 ಮತ್ತು 16 ವರ್ಷದ ಇಬ್ಬರು ಯುವಕರು 70 ವರ್ಷದ ಮಹಿಳೆಯನ್ನು ಹತ್ಯೆ ಮಾಡಿದ ಭಯಾನಕ ಘಟನೆಗೆ ಪುಣೆ ಸಾಕ್ಷಿಯಾಗಿದೆ. ಈ ಪ್ರಕರಣದಲ್ಲಿ ಆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಪರಾಧವು ಜನಪ್ರಿಯ ಟಿವಿ ಶೋ ಸಿಐಡಿಯಿಂದ ಪ್ರೇರಿತರಾಗಿ ಈ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳ ಹೆಸರು ಶಾಲಿನಿ ಬಾಬನರಾವ್ ಸೋನಾವಾನೆ. ಆಕೆ ಶವವಾಗಿ ಪತ್ತೆಯಾಗಿದ್ದು, ಆಕೆಯ ತಲೆಯ ಮೇಲೆ ಗಾಯವಾಗಿದೆ. ಪುಣೆಯ ಸಯಾಲಿ ಅಪಾರ್ಟ್‌ಮೆಂಟ್‌ನಲ್ಲಿರುವ ಆಕೆಯ ಮನೆಯಲ್ಲಿ ಶವ ಪತ್ತೆಯಾಗಿದೆ. ಆಕೆಯ ಮಗ ವಿರಾಟ್ ಸೋನಾವಾನೆ ಸಿಂಹಗಡ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
70 ವರ್ಷದ ಮಹಿಳೆಯನ್ನು ಕೊಂದು, 1.6 ಲಕ್ಷ ರೂ. ಮೌಲ್ಯದ ಹಣ ಮತ್ತು ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ಆರಂಭದಲ್ಲಿ ಪೊಲೀಸರು ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್ 359 ಮತ್ತು 459ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಮಧ್ಯೆ ಇನ್ಸ್ಪೆಕ್ಟರ್ ದೇವಿದಾಸ್ ಘೇವಾರೆ ಮತ್ತು ಇನ್ಸ್ಪೆಕ್ಟರ್ ಪ್ರಮೋದ್ ವಾಘಮಾರೆ ನೇತೃತ್ವದ ತಂಡ ತನಿಖೆ ಆರಂಭಿಸಿತು. ಘಟನೆ ನಡೆದು 2 ದಿನ ಕಳೆದರೂ ಹಂತಕರು ಯಾರೆಂಬ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ.
ಆರೋಪಿಯು ಅಕ್ಟೋಬರ್ 30ರಂದು ಮಧ್ಯಾಹ್ನ 1.30 ರ ಸುಮಾರಿಗೆ ಆಕೆಯ ಮನೆಗೆ ಪ್ರವೇಶಿಸಿದ್ದನು ಮತ್ತು ಅವಳು ಒಬ್ಬಳೇ ಇದ್ದಳು. ಇಬ್ಬರು ಹುಡುಗರಿಗೆ ಅವಳ ಬಗ್ಗೆ ಚೆನ್ನಾಗಿ ತಿಳಿದಿತ್ತು. ಅವರಿಬ್ಬರೂ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ತಂಡ ತಿಳಿಸಿದೆ. ಜೊತೆಗೆ, 93,000 ರೂ. ನಗದು ಮತ್ತು 67,500 ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಆ ಯುವಕರು ಆ ಮಹಿಳೆ ತನ್ನ ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಮನೆ ದರೋಡೆ ಮಾಡಲು ನಿರ್ಧರಿಸಿದರು. ಅದರಂತೆ, ಇಬ್ಬರು ಅಪ್ರಾಪ್ತ ಬಾಲಕರು ಅಕ್ಟೋಬರ್ 30ರಂದು ಮಧ್ಯಾಹ್ನ ಆಕೆ ಒಬ್ಬಂಟಿಯಾಗಿದ್ದಾಗ ಮತ್ತು ಟಿವಿ ನೋಡುತ್ತಿದ್ದಾಗ ಆಕೆಯ ಮನೆಗೆ ಹೋಗಿದ್ದಾರೆ. ಆಗ ಆಕೆಯನ್ನು ಪ್ಲಾನ್ ಮಾಡಿ ಕೊಂದು, ಹಣ, ಒಡವೆಯೊಂದಿಗೆ ಪರಾರಿಯಾಗಿದ್ದಾರೆ. ಈ ಕೊಲೆಗೂ ಮುನ್ನ ಸಿಐಡಿ ಶೋ ಎಪಿಸೋಡ್ ನೋಡಿದ್ದಾಗಿ ಬಾಲಕರಿಬ್ಬರು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Murder: ಹಾಡಹಗಲೇ ಮಹಿಳೆಯ ಬರ್ಬರ ಹತ್ಯೆ; ಬೆಳ್ಳಿ ಗೆಜ್ಜೆಗಾಗಿ ಕಾಲನ್ನೇ ಕತ್ತರಿಸಿದ ಹಂತಕರು
Published On - 5:09 pm, Thu, 4 November 21