ಕೋಲಾರ: ಮುಳಬಾಗಿಲು (Mulabagilu) ನಗರಸಭೆ ಸದಸ್ಯ (Municipal corporation) ಜಗನ್ ಮೋಹನ್ರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮೋಹನ್ ಬೆಳಗ್ಗೆ ಮುತ್ಯಾಲಪೇಟೆಯ ಗಂಗಮ್ಮ ದೇಗುಲಕ್ಕೆ ತೆರಳುತ್ತಿದ್ದಾಗ ದುಷ್ಕರ್ಮಿಗಳಿಂದ ದಾಳಿ ಮಾಡಿದ್ದಾರೆ. ಕೂಡಲೆ ಜಗನ್ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿಸಿದ್ದಾರೆ. ಕೊಲೆಯಾದ ಜಗನ್, ಕೊತ್ತೂರು ಮಂಜುನಾಥ್ ಬೆಂಬಲಿಗರಾಗಿದ್ದಾರೆ. ಮುಳಬಾಗಿಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ: ಮಠದ ಬಾಗಿಲು ಮುರಿದು ಸ್ಫಟಿಕಲಿಂಗ ಕಳವು; ಮೀನು ಹಿಡಿಯಲು ಹೋಗಿ ಸಮುದ್ರ ಪಾಲಾದ ಯುವಕ
ಮಾರಣಾಂತಿಕ ಹಲ್ಲೆ ಹಲ್ಲೆಗೊಳಗಾಗಿದ್ದ ರೌಡಿಶೀಟರ್ ರಾಜಾ ಸಾವು
ಮಂಗಳೂರು: ಮಾರಣಾಂತಿಕ ಹಲ್ಲೆ ಹಲ್ಲೆಗೊಳಗಾಗಿದ್ದ ರೌಡಿಶೀಟರ್ ರಾಜಾ ಅಲಿಯಾಸ್ ರಾಘವೇಂದ್ರ (28) ಸಾವನ್ನಪ್ಪಿದ್ದಾನೆ. ರಾಜಾ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ನಿನ್ನೆ (ಮೇ 7) ರಂದು ಇಬ್ಬರು ಅಪರಿಚಿತರು ಮಂಗಳೂರಿನ ಬೈಕಂಪಾಡಿ ಜಂಕ್ಷನ್ ಬಳಿ ರೌಡಿಶೀಟರ್ ರಾಜಾ ಮೇಲೆ ಹಲ್ಲೆ ಮಾಡಿದ್ದರು. ನಂತರ ರಾಜಾನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ರಾಜಾ 2 ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯಾಗಿದ್ದನು. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಬಂಧನ
ಚಿಕ್ಕಮಗಳೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ದೇವರಾಜ್ನನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಕಾಲೇಜಿನಿಂದ ಮನೆಗೆ ತೆರಳುತ್ತಿದ್ದಾಗ ಆರೋಪಿ ಡ್ರಾಪ್ ಕೊಡುವ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.