AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಠದ ಬಾಗಿಲು ಮುರಿದು ಸ್ಫಟಿಕ‌ಲಿಂಗ ಕಳವು; ಮೀನು ಹಿಡಿಯಲು ಹೋಗಿ ಸಮುದ್ರ ಪಾಲಾದ ಯುವಕ 

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಹಿರೇಮಠದ ಮಠದ ಬಾಗಿಲು ಮುರಿದು ಖದೀಮರು 13 ಇಂಚು ಉದ್ದ ಮತ್ತು 13 ಇಂಚು ಸುತ್ತಳತೆಯ ಸ್ಫಟಿಕ‌ಲಿಂಗವನ್ನು ಕಳ್ಳತನ ಮಾಡಿದ್ದಾರೆ.

ಮಠದ ಬಾಗಿಲು ಮುರಿದು ಸ್ಫಟಿಕ‌ಲಿಂಗ ಕಳವು; ಮೀನು ಹಿಡಿಯಲು ಹೋಗಿ ಸಮುದ್ರ ಪಾಲಾದ ಯುವಕ 
ಪ್ರಾತಿನಿಧಿಕ ಚಿತ್ರ
TV9 Web
| Updated By: ವಿವೇಕ ಬಿರಾದಾರ|

Updated on:Jun 07, 2022 | 4:21 PM

Share

ಹಾವೇರಿ: ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರು (Ranebennur) ತಾಲೂಕಿನ ಲಿಂಗದಹಳ್ಳಿ ಹಿರೇಮಠದ ಮಠದ ಬಾಗಿಲು ಮುರಿದು ಖದೀಮರು 13 ಇಂಚು ಉದ್ದ ಮತ್ತು 13 ಇಂಚು ಸುತ್ತಳತೆಯ ಸ್ಫಟಿಕ‌ಲಿಂಗವನ್ನು ಕಳ್ಳತನ ಮಾಡಿದ್ದಾರೆ. ದಕ್ಷಿಣ ಭಾರತದಲ್ಲೇ‌ ಅತ್ಯಂತ ದೊಡ್ಡ ಸ್ಫಟಿಕ ಲಿಂಗ ಇದಾಗಿತ್ತು. ನಿನ್ನೆ ರಾತ್ರಿ ಮಠದಲ್ಲಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಇಲ್ಲದ ವೇಳೆ ಸ್ಫಟಿಕಲಿಂಗ ಕಳ್ಳತನವಾಗಿದೆ.  ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನು ಓದಿ: ಗೋವಾದ ಕಡಲಕಿನಾರೆ ಬಳಿ ಬ್ರಿಟಿಷ್ ಮಹಿಳೆಯ ಅತ್ಯಾಚಾರ; ಪ್ರಕರಣ ದಾಖಲು

ಮೀನು ಹಿಡಿಯಲು ಹೋಗಿ ಸಮುದ್ರ ಪಾಲಾದ ಯುವಕ 

ಉತ್ತರ ಕನ್ನಡ: ಮೀನುಗಾರಿಕೆಗೆ ತೆರಳಿದ್ದ ಯುವಕ ಸಮುದ್ರ ಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಮಾಂಗಟೇಶ್ವರ ಗುಡ್ಡದ ಬಳಿ ನಡೆದಿದೆ. ಅಂಕುಶ ರಾಮದಾಸ್ ಅಂಕೋಲೆಕರ್ (32) ಸಾವನ್ನಪ್ಪಿದ್ದಾನೆ. ಯುವಕ ಕೈ ಬಲೆ ಬಳಸಿ ಮೀನುಗಾರಿಕೆಗೆ ತೆರಳಿದ್ದನು. ಆಕಸ್ಮಿಕವಾಗಿ ಸಮುದ್ರ ಪಾಲಾಗಿರುವ  ಶಂಕೆ ವ್ಯಕ್ತವಾಗಿದೆ. ಅಂಕೋಲ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ದಾರಿ ಬಿಡಿ ಎಂದಿದ್ದಕ್ಕೆ ಯುವಕರ ಮೇಲೆ ಹಲ್ಲೆ 

ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ  ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಸಮೀಪದ ನೆಲ್ಲಿಸರ ಕ್ಯಾಂಪ್ ಬಳಿ ನಿನ್ನೆ (ಮೇ 6) ಸಂಜೆ ನಡೆದಿದೆ. ನೆಲ್ಲಿಸರ ಕ್ಯಾಂಪ್ ನ ಪ್ರಸಾದ್, ಚೇತನ್ ಹಾಗೂ ಜೀವನ್ ಎಂಬ ಯುವಕರ ಮೇಲೆ ಹಲ್ಲೆ ಮಾಡಲಾಗಿದೆ. ಮೂವರು ಯುವಕರು ತುಂಗಾ ನದಿಯಲ್ಲಿ ಮೀನು ಹಿಡಿದುಕೊಂಡು ವಾಪಸ್ ಬರುತ್ತಿದ್ದಾಗ ರಸ್ತೆಯಲ್ಲಿ ನಿಂತಿದ್ದವರಿಗೆ ದಾರಿ ಬಿಡಿ, ಸೈಡಿಗೆ ನಿಲ್ಲಿ ಎಂದಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.  ತೀರ್ಥಹಳ್ಳಿ ಹಾಗೂ ಹಣಗೆರೆ ಮೂಲದ ಅನ್ಯಕೋಮಿನ ಯುವಕರ ಗುಂಪಿನಿಂದ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ತಕ್ಷಣದ ಸ್ಥಳೀಯರು ಗಲಾಟೆ ಮಾಡುವುದನ್ನು ಬಿಡಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಲ್ಲೆಗೊಳಗಾದ ಮೂವರು ಯುವಕರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: ಮಗಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಅಳಿಯನಿಗೆ ಗುಂಡು ಹಾರಿಸಿ ಕೊಂದ ಮಾವ; ಶಾಕಿಂಗ್ ವಿಡಿಯೋ ವೈರಲ್

ಮೈಮೇಲೆ ಗೇಟ್ ಬಿದ್ದು ಬಾಲಕ ಸಾವು

ಬಾಗಲಕೋಟ: ಮೈಮೇಲೆ ಗೇಟ್ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ. ರಂಜಿತ ಸೂರಗೊಂಡ(8) ಮೃತ ಬಾಲಕ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಬಾಲಕನ‌ ಮೈ ಮೇಲೆ ಗೇಟ್ ಬಿದ್ದ ದೃಶ್ಯಾವಳಿ  ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೇ 31 ರಂದು ಗ್ರಾಮದ ಬಸವೇಶ್ವರ ಸಮುದಾಯಭವನದ ಮುಂದೆ ಅಳವಡಿಸಲಾಗಿದ್ದ ಗೇಟ್ ಬಾಲಕನ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. ಆದರೆ ಸ್ಥಳೀಯರು ಬಾಲಕ ಚರಂಡಿಯಲ್ಲಿ ಬಿದ್ದು ಬಾಲಕ‌ಸಾವನ್ನಪ್ಪಿದ್ದಾನೆಂದು ನಂಬಿದ್ದರು.  ನಂತರ ಬಸವೇಶ್ವರ ಸಮುದಾಯ ಭವನದ ಪಿ.ಕೆ.ಪಿ.ಎಸ್ ಸಂಸ್ಥೆಯ ಸಿಸಿಟಿವಿ ಫೂಟೇಜ್ ನೋಡಿದಾಗ ಅಸಲಿ ಘಟನೆ ಬೆಳಕಿಗೆ ಬಂದಿದೆ. ಅವೈಜ್ಞಾನಿಕವಾಗಿ ಗೇಟ್ ಅಳವಡಿಸಿರುವ ಆರೋಪ ಕೇಳಿ ಬರುತ್ತಿದೆ. ಸಾವಳಗಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಸ್ಕೂಟಿ ಅಪಘಾತ

ಬೆಂಗಳೂರು:  ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಸ್ಕೂಟಿಯಿಂದ ಬಿದ್ದು ಇಬ್ಬರು ಯುವಕರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯ ಫ್ಲೈಓವರ್​ ಬಳಿ  ನಡೆದಿದೆ.  ಮನೋಜ್​​, ಸೋಮು ಗಾಯಗೊಂಡ ಯುವಕರು.  ಸವಾರ ಮನೋಜ್​​​ ಬಳಿ ಹೆಲ್ಮೆಟ್​, ಡಿಎಲ್ ಇಲ್ಲದ ಹಿನ್ನೆಲೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಸ್ಕೂಟಿಯಿಂದ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸುಂಕದಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:21 pm, Tue, 7 June 22

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ