AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking Video: ಮಗಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಅಳಿಯನಿಗೆ ಗುಂಡು ಹಾರಿಸಿ ಕೊಂದ ಮಾವ; ಶಾಕಿಂಗ್ ವಿಡಿಯೋ ವೈರಲ್

Murder: ಕುಟುಂಬದ ಇಚ್ಛೆಗೆ ವಿರುದ್ಧವಾಗಿ ತನ್ನ ಮಗಳು ಬೇರೆ ಜಾತಿಯವನನ್ನು ಮದುವೆಯಾದಳು ಎಂಬ ಕಾರಣಕ್ಕೆ ಬಿಹಾರದಲ್ಲಿ ವ್ಯಕ್ತಿಯೊಬ್ಬರು ತನ್ನ ಮಗನ ಜೊತೆ ಸೇರಿ ಅಳಿಯನಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.

Shocking Video: ಮಗಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಅಳಿಯನಿಗೆ ಗುಂಡು ಹಾರಿಸಿ ಕೊಂದ ಮಾವ; ಶಾಕಿಂಗ್ ವಿಡಿಯೋ ವೈರಲ್
ಕೊಲೆ ಮಾಡುತ್ತಿರುವ ದೃಶ್ಯImage Credit source: NDTV
TV9 Web
| Edited By: |

Updated on:Jun 07, 2022 | 4:07 PM

Share

ಪಾಟ್ನಾ: ‘ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು’ ಎಂಬ ಮಾತಿನಂತೆ ಪ್ರೇಮಿಗಳಿಬ್ಬರು ಮನೆಯವರ ವಿರೋಧದ ನಡುವೆಯೂ ಗುಟ್ಟಾಗಿ ಮದುವೆಯಾಗಿದ್ದರು. ತಮ್ಮ ಇಷ್ಟಕ್ಕೆ ವಿರುದ್ಧವಾಗಿ ತಮ್ಮ ಮಗಳನ್ನು ಮದುವೆಯಾದ ಎಂಬ ಕಾರಣಕ್ಕೆ ಮಾವನೇ ಅಳಿಯನಿಗೆ ಗುಂಡು ಹಾರಿಸಿ ಕೊಂದಿರುವ ಭಯಾನಕ ಘಟನೆ (Shocking News) ಬಿಹಾರದಲ್ಲಿ ನಡೆದಿದೆ. ಬಿಹಾರದಲ್ಲಿ ನಡೆದಿರುವ ಈ ಮರ್ಯಾದೆ ಹತ್ಯೆಯ (Honour Killing) ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಿಹಾರದಲ್ಲಿ ಮರ್ಯಾದೆ ಹತ್ಯೆಯ ಆಘಾತಕಾರಿ ಪ್ರಕರಣವೊಂದು ನಡೆದಿದ್ದು, ಕುಟುಂಬದ ಇಚ್ಛೆಗೆ ವಿರುದ್ಧವಾಗಿ ತನ್ನ ಮಗಳು ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾದ ಒಂದು ವರ್ಷದ ನಂತರ ತನ್ನ ಮಗನ ಸಹಾಯದಿಂದ ಭಾನುವಾರ ವ್ಯಕ್ತಿಯೊಬ್ಬ ತನ್ನ ಅಳಿಯನಿಗೆ ಗುಂಡು ಹಾರಿಸಿದ್ದಾರೆ. ಈ ಘಟನೆ ಬಿಹಾರದ ಬಕ್ಸರ್ ಜಿಲ್ಲೆಯ ದುಮ್ರಾವಾನ್ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ
Image
Kupwara Encounter: ಕಾಶ್ಮೀರದ ಕುಪ್ವಾರಾದಲ್ಲಿ ಎನ್​ಕೌಂಟರ್; ಸೇನಾ ಪಡೆಯಿಂದ ಇಬ್ಬರು ಎಲ್​ಇಟಿ ಉಗ್ರರ ಹತ್ಯೆ
Image
ತಂದೆಯಿಂದಲೇ ಮಗನ ಬರ್ಬರ ಹತ್ಯೆ; ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನ ಹತ್ಯೆಗೆ ಯತ್ನ
Image
Crime News: ದೆಹಲಿಯ ಮೈದಾನದಲ್ಲಿ ಶವದ ತುಂಡುಗಳನ್ನು ತುಂಬಿಟ್ಟಿದ್ದ ಬ್ಯಾಗ್ ಪತ್ತೆ; ಕೊಲೆಯಾದವರ ಸುಳಿವೇ ಸಿಕ್ಕಿಲ್ಲ

ಈ ಘಟನೆಯ ಸಿಸಿಟಿವಿ ವಿಡಿಯೋ ಕ್ಲಿಪ್ ಇದೀಗ ವೈರಲ್ ಆಗಿದೆ. ಕಟಿಂಗ್ ಶಾಪ್​​ನಲ್ಲಿ ವ್ಯಕ್ತಿಯೊಬ್ಬ ಶೇವ್ ಮಾಡಿಸಿಕೊಳ್ಳುತ್ತಿರುವಾಗ ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು (ಆತನ ಹೆಂಡತಿಯ ಅಪ್ಪ ಮತ್ತು ಅಣ್ಣ) ಆ ವ್ಯಕ್ತಿಯ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ. ಆಗ ಭಯದಿಂದ ಆ ಯುವಕ ಎದ್ದು ನೋವಿನಿದ ಕೂಗುತ್ತಾ ಹೊರಗೆ ಓಡಿಹೋಗಿದ್ದಾನೆ. ಆಗ ಆತನನ್ನು ಹಿಂಬಾಲಿಸಿದ ಆ ಇಬ್ಬರು ವ್ಯಕ್ತಿಗಳು ಹೊರಗೆ ಮತ್ತೆ ಶೂಟ್ ಮಾಡಿದ್ದಾರೆ ಈ ವೇಳೆ ತೀವ್ರವಾಗಿ ಗಾಯಗೊಂಡು ಆತ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: Shocking News: ಇಲ್ಲಿ ಮೂತ್ರದಿಂದ ತಯಾರಾಗುತ್ತೆ ಬಿಯರ್; ಚಪ್ಪರಿಸಿ ಕುಡಿಯೋರೂ ಇದಾರೆ ಸ್ವಾಮಿ!

ಹೊರಗೆ ಶೂಟ್ ಮಾಡಿದಾಗ ಕೆಳಗೆ ಬಿದ್ದ ಆ ಯುವಕನ ಮೇಲೆ ಕಾಲಿನಿಂದ ಒದ್ದು ಮತ್ತೆ ಹಲ್ಲೆ ನಡೆಸಲಾಗಿದೆ. ಕೊಲೆಯಾದ ಯುವಕನನ್ನು ಮೋನು ರೈ ಎಂದು ಗುರುತಿಸಲಾಗಿದ್ದು, ಇವರು ಸ್ಥಳೀಯ ನಗರಸಭಾ ಸದಸ್ಯ ಸೋನು ರೈ ಅವರ ಸಹೋದರರಾಗಿದ್ದಾರೆ. ಆತನ ಹೆಂಡತಿಯ ಅಪ್ಪ ಸುನೀಲ್ ಪಾಠಕ್ ನಿವೃತ್ತ ಸೇನಾ ಸಿಬ್ಬಂದಿಯಾಗಿದ್ದು, ತಾನೇ ತನ್ನ ಅಳಿಯನನ್ನು ಕೊಲೆ ಮಾಡಿದ್ದು ಎಂದು ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಸ್ವತಃ ಕರೆದು ಪೊಲೀಸರ ಮುಂದೆ ಶರಣಾಗಿದ್ದಾರೆ. ಅವರ ಪುತ್ರ ಧನು ಪಾಠಕ್ ಕೂಡ ಈ ಪ್ರಕರಣದಲ್ಲಿ ಪಾಲುದಾರನಾಗಿದ್ದಾನೆ.

‘ಪ್ರೇಮ ವಿವಾಹ’ದ ಕಾರಣದಿಂದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನು ಗುರುತಿಸಲಾಗಿದ್ದು, ಮೃತ ವ್ಯಕ್ತಿಯ ಮಾವನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹತ್ಯೆಗೆ ಬಳಸಿದ್ದ ಪಿಸ್ತೂಲ್ ಅನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:05 pm, Tue, 7 June 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?