Viral News: ನಾನೇ ಪಾರ್ವತಿ, ಶಿವನನ್ನು ಮದುವೆಯಾಗುತ್ತೇನೆ; ಭಾರತ-ಚೀನಾ ಗಡಿಯಲ್ಲಿ ಮಹಿಳೆಯ ಹೈಡ್ರಾಮಾ

ನಾನೇ ಪಾರ್ವತಿ, ಕೈಲಾಸ ಪರ್ವತದಲ್ಲಿರುವ ಶಿವನನ್ನು ಮದುವೆಯಾಗುತ್ತೇನೆ ಎಂದು ಆಕೆ ಹಠ ಹಿಡಿದಿದ್ದರಿಂದ ನಿರ್ಬಂಧಿತ ಪ್ರದೇಶದಿಂದ ಹರ್ಮಿಂದರ್ ಕೌರ್ ಎಂಬ ಮಹಿಳೆಯನ್ನು ಹೊರಹಾಕಲು ತೆರಳಿದ್ದ ಪೊಲೀಸ್ ತಂಡ ನಿರಾಸೆಯಿಂದ ಮರಳಬೇಕಾಯಿತು.

Viral News: ನಾನೇ ಪಾರ್ವತಿ, ಶಿವನನ್ನು ಮದುವೆಯಾಗುತ್ತೇನೆ; ಭಾರತ-ಚೀನಾ ಗಡಿಯಲ್ಲಿ ಮಹಿಳೆಯ ಹೈಡ್ರಾಮಾ
ಗುಂಜಿImage Credit source: India.com
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jun 04, 2022 | 1:33 PM

ನವದೆಹಲಿ: ಭಾರತ-ಚೀನಾ ಗಡಿಗೆ (India- China Border) ಸಮೀಪವಿರುವ ನಾಭಿಧಾಂಗ್‌ನ ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಲಕ್ನೋದ ಮಹಿಳೆಯೊಬ್ಬರು ‘ನಾನು ಪಾರ್ವತಿ ದೇವಿಯ (Parvati Goddess) ಅವತಾರ. ಕೈಲಾಸ ಪರ್ವತದಲ್ಲಿ ನೆಲೆಸಿರುವ ಶಿವನನ್ನು ಮದುವೆಯಾಗುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ’ ಎಂದು ಹಠ ಹಿಡಿದಿರುವ ವಿಚಿತ್ರವಾದ ಘಟನೆಯೊಂದು ನಡೆದಿದೆ. ನಾನು ನಾಭಿಧಾಂಗನ್ನು ತೊರೆಯುವುದಿಲ್ಲ ಎಂದು ಪಟ್ಟು ಹಿಡಿದಿರುವ ಮಹಿಳೆಯ ಕತೆ ಎಲ್ಲೆಡೆ ಭಾರೀ ಸುದ್ದಿಯಾಗುತ್ತಿದೆ.

ಈ ಬಗ್ಗೆ ಪಿಟಿಐ ವರದಿ ಮಾಡಿದೆ. ನಾನೇ ಪಾರ್ವತಿ, ಕೈಲಾಸ ಪರ್ವತದಲ್ಲಿರುವ ಶಿವನನ್ನು ಮದುವೆಯಾಗುತ್ತೇನೆ ಎಂದು ಆಕೆ ಹಠ ಹಿಡಿದಿದ್ದರಿಂದ ನಿರ್ಬಂಧಿತ ಪ್ರದೇಶದಿಂದ ಹರ್ಮಿಂದರ್ ಕೌರ್ ಎಂಬ ಮಹಿಳೆಯನ್ನು ಹೊರಹಾಕಲು ತೆರಳಿದ್ದ ಪೊಲೀಸ್ ತಂಡ ನಿರಾಸೆಯಿಂದ ಮರಳಬೇಕಾಯಿತು. ನನ್ನನ್ನು ಕರೆದುಕೊಂಡು ಹೋಗುವಂತೆ ಒತ್ತಾಯಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪಿಥೋರಗಢ ಎಸ್​ಪಿ ಲೋಕೇಂದ್ರ ಸಿಂಗ್ ತಿಳಿಸಿದ್ದಾರೆ. ಆದರೆ, ಆಕೆಯನ್ನು ಬಲವಂತವಾಗಿ ಧಾರ್ಚುಲಾಗೆ ಇಳಿಸಲು ದೊಡ್ಡ ತಂಡವನ್ನು ಕಳುಹಿಸಲು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

“ಉತ್ತರ ಪ್ರದೇಶದ ಅಲಿಗಂಜ್ ಪ್ರದೇಶದ ನಿವಾಸಿಯಾದ ಮಹಿಳೆ ಹರ್ಮಿಂದರ್ ಕೌರ್ ಎಸ್‌ಡಿಎಂ ಧಾರ್ಚುಲಾ ನೀಡಿದ 15 ದಿನಗಳ ಅನುಮತಿಯ ಮೇರೆಗೆ ತಾಯಿಯೊಂದಿಗೆ ಗುಂಜಿಗೆ ಹೋಗಿದ್ದರು. ಆದರೆ, ಮೇ 25ರಂದು ಅವರ ಅನುಮತಿ ಅವಧಿ ಮುಗಿದ ನಂತರವೂ ನಿರ್ಬಂಧಿತ ಪ್ರದೇಶವನ್ನು ತೊರೆಯಲು ಅವರು ನಿರಾಕರಿಸಿದರು” ಎಂದು ಎಸ್‌ಪಿ ಹೇಳಿದರು.

ಇದನ್ನೂ ಓದಿ: Viral News: ತನ್ನನ್ನು ತಾನೇ ಮದುವೆಯಾಗಲಿದ್ದಾಳೆ ಈ ಯುವತಿ; ಗೋವಾದಲ್ಲಿ ಒಬ್ಬಳೇ ಹನಿಮೂನ್ ಮಾಡ್ತಾಳಂತೆ!

ಮಹಿಳೆಯನ್ನು ನಿರ್ಬಂಧಿತ ಪ್ರದೇಶದಿಂದ ಕರೆತರಲು ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಇನ್ಸ್‌ಪೆಕ್ಟರ್‌ಗಳನ್ನು ಒಳಗೊಂಡ ಮೂವರು ಸದಸ್ಯರ ಪೊಲೀಸ್ ತಂಡವನ್ನು ಧಾರ್ಚುಲಾದಿಂದ ಕಳುಹಿಸಲಾಗಿದೆ. ಆದರೆ, ಆಕೆಯ ಹೈಡ್ರಾಮಾದಿಂದಾಗಿ ಬರಿಗೈಯಲ್ಲಿ ಹಿಂತಿರುಗಬೇಕಾಯಿತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. “ನಾವು ಈಗ ಮಹಿಳೆಯನ್ನು ಮರಳಿ ಕರೆತರಲು ವೈದ್ಯಕೀಯ ಸಿಬ್ಬಂದಿ ಸೇರಿದಂತೆ 12 ಸದಸ್ಯರ ದೊಡ್ಡ ಪೊಲೀಸ್ ತಂಡವನ್ನು ಶುಕ್ರವಾರ ಕಳುಹಿಸಲು ಯೋಜಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.

ಮಹಿಳೆ ತಾನು ಪಾರ್ವತಿ ದೇವಿಯ ಅವತಾರ ಎಂದು ಹೇಳಿಕೊಳ್ಳುವುದರಿಂದ ಆಕೆ ಮಾನಸಿಕವಾಗಿ ಸ್ಥಿರವಾಗಿಲ್ಲ. ಆಕೆ ಶಿವನನ್ನು ಮದುವೆಯಾಗಲು ಬಂದಿರುವುದಾಗಿ ಹೇಳಿದ್ದಾಳೆ ಎಂದು ಅಧಿಕಾರಿ ಹೇಳಿದ್ದಾರೆ. ಗುಂಜಿ ಕೈಲಾಸ-ಮಾನಸ ಸರೋವರದ ಮಾರ್ಗದಲ್ಲಿಯೇ ಇದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್