ಚೆನ್ನೈ: ತಮಿಳುನಾಡಿನ (Tamil Nadu Crime News) ಕಲ್ಲಕುರಿಚಿ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ತನ್ನ ದೇಹದ ಬಗ್ಗೆ ಗೇಲಿ ಮಾಡಿದ್ದಕ್ಕೆ (ಬಾಡಿ ಶೇಮಿಂಗ್) ಆತನನ್ನು ಕೊಲೆ (Murder) ಮಾಡಿದ್ದಾನೆ. ಆ ಬಾಲಕ ಮೃತಪಟ್ಟ ವಿದ್ಯಾರ್ಥಿಯ ದೇಹವನ್ನು ಗೇಲಿ ಮಾಡಿದ್ದು, ನೀನು ನೋಡಲು ಹುಡುಗಿಯಂತೆ ಇದ್ದೀಯ ಎಂದು ಕಿಚಾಯಿಸಿದ್ದ. ಇದರಿಂದ ಅವಮಾನಗೊಂಡ ಆ ವಿದ್ಯಾರ್ಥಿ ಆ ಬಾಲಕನನ್ನು ಕೊಂದಿದ್ದಾನೆ.
ಮೇ 14ರಂದು ಈ ಘಟನೆ ನಡೆದಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು 12ನೇ ತರಗತಿಯ ಬಾಲಕನನ್ನು ವೀಕ್ಷಣಾಲಯಕ್ಕೆ ಕಳುಹಿಸಿದ್ದಾರೆ. ತನ್ನನ್ನು ಹುಡುಗಿಯಂತೆ ಕಾಣುತ್ತೀಯ ಎಂದು ಆ ಸಹಪಾಠಿ ಹೇಳಿದ ಮೇಲೂ ಆ ವಿದ್ಯಾರ್ಥಿ ಹಾಗೆ ಹೇಳಬೇಡ ಎಂದು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದ. ಆದರೆ, ಅದನ್ನೇ ತಮಾಷೆಯಾಗಿ ತೆಗೆದುಕೊಂಡ ಆ ಬಾಲಕ ಶಾಲೆಯಲ್ಲಿ ಎಲ್ಲರ ಎದುರಲ್ಲೇ ಗೇಲಿ ಮಾಡುವುದನ್ನು ಮುಂದುವರೆಸಿದ್ದ. ಇದರಿಂದ ಪಿಯುಸಿ ವಿದ್ಯಾರ್ಥಿಗೆ ಕೋಪ ಬಂದು, ತನ್ನ ಜೊತೆಗೆ ಓದುತ್ತಿದ್ದ ಬಾಲಕನನ್ನು ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: Murder: ಗಂಡನ ಉಗುರಿನಲ್ಲಿದ್ದ ರಕ್ತದ ಕಲೆಯಿಂದ ಬಯಲಾಯ್ತು ಹೆಂಡತಿ ಕೊಲೆಯ ರಹಸ್ಯ!
ಸಹಪಾಠಿಯನ್ನು ಕೊಲ್ಲಲು ನಿರ್ಧರಿಸಿದ ವಿದ್ಯಾರ್ಥಿ ಆತನನ್ನು ಹೊರಗೆ ಕರೆದು, ಕುಡುಗೋಲು ಹಾಗೂ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಹೆದ್ದಾರಿಯಲ್ಲಿ ಅವರ ಶಾಲೆಯ ಸಮೀಪದಲ್ಲೇ ಕೊಲೆ ಸಂಭವಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
“ಬಾಡಿ ಶೇಮಿಂಗ್ ಆತಂಕ, ಖಿನ್ನತೆಗೆ ಕಾರಣವಾಗುತ್ತದೆ, ದೇಹದ ಡಿಸ್ಮಾರ್ಫಿಕ್ ಡಿಸಾರ್ಡರ್ ಅನ್ನು ಉಂಟುಮಾಡುತ್ತದೆ. ಅನೇಕ ಬಾರಿ, ಇದು ಕೋಪ ಅಥವಾ ತೀವ್ರ ಖಿನ್ನತೆಯಾಗಿ ಹೊರಹೊಮ್ಮುತ್ತದೆ. ಇದರಿಂದ ಪ್ರಾಣಹಾನಿಯೂ ಸಂಭವಿಸಬಹುದು.” ಎಂದು ತಮಿಳುನಾಡು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ಶರಣ್ಯ ಜೈಕುಮಾರ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Wed, 18 May 22