ಬೆಂಗಳೂರು: ಡ್ರಗ್ಸ್ ಪೆಡ್ಲಿಂಗ್ ಮಾಡ್ತಿದ್ದ ನೈಜೀರಿಯಾ ನಟನನ್ನು ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಕ್ವಿಮ್ ಮಾಲ್ವಿನ್ ಎಂಬಾತ ಬಂಧಿತ ಡ್ರಗ್ ಪೆಡ್ಲರ್ ಹಾಗೂ ನಟ ಆಗಿದ್ದಾನೆ. ಮೆಡಿಕಲ್ ವೀಸಾದಲ್ಲಿ ಬಂದಿದ್ದ ಚಕ್ವಿಮ್ ಮಾಲ್ವಿನ್, ಫಿಲ್ಮ್ ಅಕಾಡೆಮಿಯಲ್ಲಿ ನಟನೆಯ ತರಬೇತಿ ಪಡೆದಿದ್ದ ಎಂದು ತಿಳಿದುಬಂದಿದೆ. ಮುಂಬೈನ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ. ನೈಜೀರಿಯಾದಲ್ಲಿ ಮೂರು ಚಿತ್ರಗಳಲ್ಲಿ ನಟಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಕನ್ನಡದ ಅಣ್ಣಾಬಾಂಡ್, ಪರಮಾತ್ಮ, ತಮಿಳಿನ ಸಿಂಗಂ, ವಿಶ್ವರೂಪಂ ಸೇರಿ 20 ಚಿತ್ರಗಳಲ್ಲಿ ಸಹನಟನಾಗಿಯೂ ಆತ ನಟಿಸಿದ್ದ. ಆರೋಪಿ ನಟನಿಂದ 8 ಲಕ್ಷ ಮೌಲ್ಯದ ಹ್ಯಾಶಿಷ್ ಆಯಿಲ್, ಎಂಡಿಎಂಎ ಜಪ್ತಿ ಮಾಡಲಾಗಿದೆ.
ಕನ್ನಡ ,ಹಿಂದಿ, ತಮಿಳು ಸೇರಿ ಹಲವು ಭಾಷೆಯಲ್ಲಿ ನಟಿಸಿದ್ದ ನೈಜೀರಿಯನ್ ಪ್ರಜೆಯನ್ನು ಬಂಧಿಸಲಾಗಿದೆ. ಆತ ಬ್ಯುಸಿನೆಸ್ ಮಾಡುವ ವ್ಯಕ್ತಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡ್ತಿದ್ದ ಎಂದು ತಿಳಿದುಬಂದಿದೆ. ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಖಚಿತ ಮಾಹಿತಿ ಮೇರೆಗೆ ಬಿಡಿಎ ಕಾಂಪ್ಲೆಕ್ಸ್ ಮೇಲೆ ದಾಳಿ ಮಾಡಲಾಗಿದೆ. ಬೆಂಗಳೂರಿನ ಹೆಚ್‌ಬಿಆರ್ ಲೇಔಟ್‌ನಲ್ಲಿರುವ ಕಾಂಪ್ಲೆಕ್ಸ್ ಮೇಲೆ ದಾಳಿ ಮಾಡಿದ್ದೇವೆ. ಆರೋಪಿ ಬಳಿಯಿದ್ದ 10 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಹೇಳಿಕೆ ನೀಡಿದ್ದಾರೆ.
ಸದ್ಯ ಬಂಧಿತನಾಗಿರುವ ಆರೋಪಿ ಕನ್ನಡ, ತಮಿಳು ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾನೆ. ಆರೋಪಿಗೆ ನಟನೆ ಫ್ಯಾಷನ್, ಡ್ರಗ್ಸ್ ಪೆಡ್ಲಿಂಗ್ ವೃತ್ತಿಯಾಗಿದೆ. ಆರೋಪಿ ವಿದೇಶಗಳಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ಬ್ಯುಸಿನೆಸ್‌ಮ್ಯಾನ್‌ಗಳು, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಮಾಹಿತಿ ನೀಡಿದ್ದಾರೆ. ಆರೋಪಿಯಿಂದ ಹತ್ತು ಲಕ್ಷದ ಮಾದಕ ವಸ್ತುಗಳನ್ನ ವಶಕ್ಕೆ ಪಡೆದಿದ್ದೇವೆ. ಆತ ಆರಂಭದಲ್ಲಿ ಬಾಂಬೆಗೆ ಬಂದು ನಂತರ ನಗರಕ್ಕೆ ಬಂದಿದ್ದ. ವೃತ್ತಿಯಲ್ಲಿ ನಟನೆಯ ಬಗ್ಗೆ ತರಬೇತಿ ಪಡೆದಿದ್ದಾನೆ. ಅವನು ವಿದೇಶದಿಂದ ಡ್ರಗ್ ಗಳನ್ನ ತರಿಸಿಕೊಳ್ತಿದ್ದ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಡ್ರಗ್ಸ್ ಎಂಬುದು ಸಿನಿಮಾರಂಗಕ್ಕೆ ಸೀಮಿತ ಅಲ್ಲ, ಇದು ಟಿಆರ್ಪಿ ವಿಷಯವಲ್ಲ’: ನಟ ಚೇತನ್
ಇದನ್ನೂ ಓದಿ: ಡ್ರಗ್ ಕೇಸ್ನಲ್ಲಿ ಖ್ಯಾತ ನಟನ ಗರ್ಲ್ ಫ್ರೆಂಡ್ ಸಹೋದರ ಅರೆಸ್ಟ್
Published On - 2:48 pm, Wed, 29 September 21