ಬೆಂಗಳೂರಿನ ಮಾದಕ ದ್ರವ್ಯ ಜಾಲದಲ್ಲಿ ಸಕ್ರಿಯರಾಗಿದ್ದ ನಾಲ್ವರು ನೈಜೀರಿಯಾ ಪ್ರಜೆಗಳ ಬಂಧನ

| Updated By: ಆಯೇಷಾ ಬಾನು

Updated on: Apr 16, 2021 | 8:46 AM

ಅಜಾ ಫ್ರಾನ್ಸಿಸ್, ಚಾರ್ಲೀಸ್ ಚೀಮ, ಮಲಂಗ ಪಾಷಾ, ಜಸೀರ್ ಖಾನ್ಡೆ ಎಂಬ ನಾಲ್ವರನ್ನು ಬಂಧನಕ್ಕೆ ಒಳಪಡಿಸಲಾಗಿದ್ದು, ಬಾಗಲೂರು ಪ್ರದೇಶವನ್ನು ಅಡ್ಡ ಮಾಡಿಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ತಪ್ಪಿತಸ್ಥರು ಸಿಕ್ಕಿಹಾಕಿಕೊಂಡಿದ್ದಾರೆ.

ಬೆಂಗಳೂರಿನ ಮಾದಕ ದ್ರವ್ಯ ಜಾಲದಲ್ಲಿ ಸಕ್ರಿಯರಾಗಿದ್ದ ನಾಲ್ವರು ನೈಜೀರಿಯಾ ಪ್ರಜೆಗಳ ಬಂಧನ
ವಶಪಡಿಸಿಕೊಂಡ ಮಾದಕ ದ್ರವ್ಯಗಳು
Follow us on

ಬೆಂಗಳೂರು: ಮಾದಕ ದ್ರವ್ಯ ಜಾಲದಲ್ಲಿ ಸಕ್ರಿಯರಾಗಿದ್ದ ನೈಜೀರಿಯಾ ಮೂಲದ ನಾಲ್ವರನ್ನು ಸಿಸಿಬಿ ಪೊಲೀಸರು ಬೆಂಗಳೂರಿನ ಬಾಗಲೂರಿನಲ್ಲಿ ಬಂಧಿಸಿದ್ದಾರೆ. ಅಜಾ ಫ್ರಾನ್ಸಿಸ್, ಚಾರ್ಲೀಸ್ ಚೀಮ, ಮಲಂಗ ಪಾಷಾ, ಜಸೀರ್ ಖಾನ್ಡೆ ಎಂಬ ನಾಲ್ವರನ್ನು ಬಂಧನಕ್ಕೆ ಒಳಪಡಿಸಲಾಗಿದ್ದು, ಬಾಗಲೂರು ಪ್ರದೇಶವನ್ನು ಅಡ್ಡ ಮಾಡಿಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ತಪ್ಪಿತಸ್ಥರು ಸಿಕ್ಕಿಹಾಕಿಕೊಂಡಿದ್ದಾರೆ. ಬಂಧಿತರಿಂದ 20 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. 200 ಎಕ್ಸ್‌ಟಸಿ ಮಾತ್ರೆ, 153 ಗ್ರಾಂ ಎಂಡಿಎಂಎಂ, 5 ಮೊಬೈಲ್, 2 ಬೈಕ್, ನಗದು, ಮಾರಕಾಸ್ತ್ರಗಳನ್ನೂ ವಶಕ್ಕೆ ಪಡೆಯಲಾಗಿದ್ದು ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾದಕ ದ್ರವ್ಯ ತಡೆ ಬಗ್ಗೆ ಇತ್ತೀಚೆಗಷ್ಟೇ ಮಾತನಾಡಿದ್ದ ಅಬಕಾರಿ ಸಚಿವ ಗೋಪಾಲಯ್ಯ, ಸಿಎಲ್ 7, ಎಂಎಸ್‌ಐಎಲ್ ಪರವಾನಗಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. 60 ಜೀಪ್ ಖರೀದಿಸಲು ಅನುಮತಿ ಸಿಕ್ಕಿದೆ. 300 ಬೈಕ್, ಡಿಸಿ ಕಚೇರಿಗೆ 4 ರಿವಾಲ್ವರ್ ನೀಡಲು ನಿರ್ಧಾರ ಮಾಡಲಾಗಿದೆ. ಗಾಂಜಾ, ಮಾದಕ ದ್ರವ್ಯ ನಿಯಂತ್ರಣಕ್ಕೆ ಪ್ರತ್ಯೇಕ ಡಿಸಿ ನೇಮಕಾತಿ ಮಾಡಲಾಗುತ್ತದೆ. ಈ ಮೂಲಕ ಮಾದಕ ವಸ್ತುಗಳ ಸಾಗಣೆ ತಡೆಯಲು ಚಿಂತನೆ ನಡೆಸಲಾಗಿದೆ. ಈ ಕುರಿತಂತೆ ಕಾನೂನು ಮತ್ತು ಗೃಹ ಸಚಿವರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

ಅಬಕಾರಿ ಇಲಾಖೆ ಆದಾಯದ ಬಗ್ಗೆ ಮಾತನಾಡಿ, ಸರ್ಕಾರ ಕೊಟ್ಟ ಟಾರ್ಗೆಟ್​ ಅನ್ನು ಈಗಾಗಲೇ ಮುಟ್ಟಿದ್ದೇವೆ. ಇನ್ನು, ತಿಂಗಳ ಅಂತ್ಯದಲ್ಲಿ ಇನ್ನೂ ಹೆಚ್ಚಿನ ಆದಾಯ ಬರುವ ಸಾಧ್ಯತೆ ಇದೆ. 2020-21ನೇ ಸಾಲಿನ 22700 ಕೋಟಿ ಆದಾಯ ತಲುಪಿದ್ದು, ಮಾರ್ಚ್ 31ರವರೆಗೆ 200 ಕೋಟಿ ಹೆಚ್ಚುವರಿಯಾಗಿ ಸಂಗ್ರಹವಾಗಲಿದೆ ಎಂದು ವಿಧಾನಸೌಧದಲ್ಲಿ ವಿವರಿಸಿದ್ದರು.

ಬಂಧಿತ ಆರೋಪಿಗಳು

ಇದನ್ನೂ ಓದಿ:
ಸುದ್ದಿ ವಿಶ್ಲೇಷಣೆ | ಡ್ರಗ್ಸ್​ ಜಾಲ ನಿರ್ಮೂಲನೆಯಾಗಿಲ್ಲ, ಇದು ಕಳಂಕವಲ್ಲದೇ ಇನ್ನೇನು?

(Nigerian based Drug Peddlers arrested in Bengaluru)