ನೋಯ್ಡಾದಲ್ಲಿ ಡಬಲ್ ಮರ್ಡರ್, ತಂದೆ ಹಾಗೂ ಅಜ್ಜನನ್ನು ಕೊಂದ ಯುವಕ

|

Updated on: Sep 11, 2023 | 12:19 PM

21 ವರ್ಷದ ಯುವಕನೊಬ್ಬ ತಂದೆ ಹಾಗೂ ಅಜ್ಜನನ್ನು ಹತ್ಯೆ ಮಾಡಿರುವ ಘಟನೆ ಗ್ರೇಟರ್ ನೋಯ್ಡಾದ ಡಂಕೌರ್‌ನಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಜಾಸ್ಮಿನ್ ಎಂಬಾತನನ್ನು ಬಂಧಿಸಲಾಗಿದ್ದು, ಸೆ.7ರ ರಾತ್ರಿ ನಡೆದಿದ್ದ ಜೋಡಿ ಕೊಲೆಗೆ ಬಳಸಿದ್ದ ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೋಲೀಸರ ಪ್ರಕಾರ, ಜಾಸ್ಮಿನ್ ತನ್ನ ತಂದೆ ವಿಕ್ರಮಜಿತ್ ರಾವ್ ಮತ್ತು ಅಜ್ಜ ರಾಮ್‌ಕುಮಾರ್ ಅವರನ್ನು ಡಂಕೌರ್‌ನ ಬಲ್ಲು ಖೇರಾ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಫಿಲ್ಮ್ ಸ್ಟುಡಿಯೋದಲ್ಲಿ ಹತ್ಯೆ ಮಾಡಿದ್ದಾನೆ, ಅವರು ಮಲಗಿದ್ದಾಗ ಕೊಲೆ ನಡೆದಿದೆ.

ನೋಯ್ಡಾದಲ್ಲಿ ಡಬಲ್ ಮರ್ಡರ್, ತಂದೆ ಹಾಗೂ ಅಜ್ಜನನ್ನು ಕೊಂದ ಯುವಕ
ಸಾಂದರ್ಭಿಕ ಚಿತ್ರ
Follow us on

21 ವರ್ಷದ ಯುವಕನೊಬ್ಬ ತಂದೆ ಹಾಗೂ ಅಜ್ಜನನ್ನು ಹತ್ಯೆ ಮಾಡಿರುವ ಘಟನೆ ಗ್ರೇಟರ್ ನೋಯ್ಡಾದ ಡಂಕೌರ್‌ನಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಜಾಸ್ಮಿನ್ ಎಂಬಾತನನ್ನು ಬಂಧಿಸಲಾಗಿದ್ದು, ಸೆ.7ರ ರಾತ್ರಿ ನಡೆದಿದ್ದ ಜೋಡಿ ಕೊಲೆಗೆ ಬಳಸಿದ್ದ ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೋಲೀಸರ ಪ್ರಕಾರ, ಜಾಸ್ಮಿನ್ ತನ್ನ ತಂದೆ ವಿಕ್ರಮಜಿತ್ ರಾವ್ ಮತ್ತು ಅಜ್ಜ ರಾಮ್‌ಕುಮಾರ್ ಅವರನ್ನು ಡಂಕೌರ್‌ನ ಬಲ್ಲು ಖೇರಾ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಫಿಲ್ಮ್ ಸ್ಟುಡಿಯೋದಲ್ಲಿ ಹತ್ಯೆ ಮಾಡಿದ್ದಾನೆ, ಅವರು ಮಲಗಿದ್ದಾಗ ಕೊಲೆ ನಡೆದಿದೆ.

ತಂದೆಯ ದುರ್ವರ್ತನೆ ಹಾಗೂ ತಾಯಿಯ ಬಗೆಗೆ ಅಸಡ್ಡೆಯಿಂದ ನಡೆದುಕೊಳ್ಳುವುದು, ಚಿತ್ರಹಿಂಸೆ ಕೊಡುವುದು, ಕಿರುಕುಳ ನೀಡುತ್ತಿದ್ದರಿಂದ ತಾಯಿ ತುಂಬಾ ನೊಂದಿದ್ದರು. ಮನೆಯಿಂದ ಹೊರಗೆ ಹೋಗಲು ಕೂಡ ಅವಕಾಶ ನೀಡುತ್ತಿರಲಿಲ್ಲ. ವಿಕ್ರಮಜಿತ್ ರಾವ್ ಅವರು ಗ್ರೇಟರ್ ನೋಯ್ಡಾದಲ್ಲಿ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಮತ್ತು ದಂಪತಿ ವಿಚ್ಛೇದನದ ಪ್ರಕ್ರಿಯೆಯಲ್ಲಿದ್ದರು.

ಜಾಸ್ಮಿನ್ ತನ್ನ ತಂದೆಯನ್ನು ಕೊಲ್ಲುವ ಉದ್ದೇಶದಿಂದ ಸ್ಟುಡಿಯೋಗೆ ಹೋಗಿದ್ದ, ಅಲ್ಲೇ ಇಟ್ಟಿದ್ದ ಕೊಡಲಿಯಿಂದ ಮುಖ, ಕುತ್ತಿಗೆ, ತಲೆಯ ಮೇಲೆ ಹಲ್ಲೆ ನಡೆಸಿದ್ದಾನೆ. ದಾಳಿಯ ಸಂದರ್ಭದಲ್ಲಿ ಪಕ್ಕದಲ್ಲೇ ಮಲಗಿದ್ದ ಅಜ್ಜ ಎಚ್ಚರಗೊಂಡರು, ಬಳಿಕ ತಲೆ, ಕುತ್ತಿಗೆ, ಮುಖದ ಮೇಲೆ ಹಲ್ಲೆ ನಡೆಸಿದ್ದಾನೆ.

ಮತ್ತಷ್ಟು ಓದಿ: ಹಣ, ಒಡವೆ ಆಸೆಗೆ ಕೊಲೆ ಆರೋಪ; ಹಾಡಹಗಲೇ ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು

ರಾಮ್​ ಕುಮಾರ್​ ಬದುಕುಳಿಯಬಹುದು ಎಂದು ಹೆದರಿ ಸುತ್ತಿಗೆಯಿಂದ ತಲೆಗೆ ಹಲವು ಬಾರಿ ಹೊಡೆದಿದ್ದಾನೆ. ನಂತರ ಸ್ನಾನಗೃಹದ ಬಳಿ ಶಸ್ತ್ರಾಸ್ತ್ರಗಳನ್ನು ಎಸೆದು ಗೋಡೆಯ ಮೇಲೆ ಹಾರಿ ಮನೆಗೆ ಓಡಿ ಹೋಗಿ ಮೊದಲು ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದಾನೆ.
ಪೊಲೀಸರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಗ್ರೇಟರ್ ನೋಯ್ಡಾ ಪೊಲೀಸ್ ಉಪ ಆಯುಕ್ತ (ಡಿಸಿಪಿ) ಅಶೋಕ್ ಕುಮಾರ್ ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:43 am, Mon, 11 September 23