ಅರವತ್ತು ಬಾರಿ ಕಳ್ಳತನ ಮಾಡಿದ್ದ ನಟೋರಿಯಸ್ ಮನೆಗಳ್ಳರ ಬಂಧನ: 660 ಗ್ರಾಂ ಚಿನ್ನ ವಶಕ್ಕೆ

ಅರವತ್ತು ಬಾರಿ ಕಳ್ಳತನ ಮಾಡಿದ್ದ ನಟೋರಿಯಸ್ ಮನೆಗಳ್ಳರನ್ನು ಹೆಣ್ಣೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಫಯಾಜ್, ಪ್ರಸಾದ್ ಬಂಧಿತ ಆರೋಪಿಗಳು.

ಅರವತ್ತು ಬಾರಿ ಕಳ್ಳತನ ಮಾಡಿದ್ದ ನಟೋರಿಯಸ್ ಮನೆಗಳ್ಳರ ಬಂಧನ: 660 ಗ್ರಾಂ ಚಿನ್ನ ವಶಕ್ಕೆ
ಬಂಧಿತ ಆರೋಪಿಗಳು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 25, 2023 | 7:04 PM

ಬೆಂಗಳೂರು: ಅರವತ್ತು ಬಾರಿ ಕಳ್ಳತನ ಮಾಡಿದ್ದ ನಟೋರಿಯಸ್ (Notorious) ಮನೆಗಳ್ಳರನ್ನು ಹೆಣ್ಣೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಫಯಾಜ್, ಪ್ರಸಾದ್ ಬಂಧಿತ ಆರೋಪಿಗಳು. ಸದ್ಯ ಆರೋಪಿಗಳಿಂದ 660 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಹೆಣ್ಣೂರು, ರಾಮಮೂರ್ತಿ ನಗರ, ಕೋಲಾರದಲ್ಲಿ ನ್ಯಾಯಾಧೀಶರ ನಿವಾಸ ಕಳ್ಳತನ ಮಾಡಿದ್ರು. ಆರೋಪಿಗಳು ಶಿವಮೊಗ್ಗದಲ್ಲಿ ಎಟಿಎಂ ದೋಚಲು ವಿಫಲ ಯತ್ನ ಮಾಡಿದ್ದರು. ಕಳ್ಳತನ ಮಾಡಿದ ಬಳಿಕ ಕಾರಿನಲ್ಲಿ ಹೊರಡುತ್ತಿದ್ದರು. ಎಲ್ಲಿಯೂ ಒಂದು ಕಡೆ ನಿಲ್ಲುತ್ತಿರಲಿಲ್ಲಾ. ಕಳ್ಳತನ ಮಾಡಿದ ಬಳಿಕ ಒಂದೊಂದು ಊರು ಅಲೆಯುತಿದ್ರು. ಹೋದ ಊರುಗಳಲ್ಲಿ ಕದ್ದ ಚಿನ್ನವನ್ನು ಅಡಮಾನ ಹಣ ಪಡೆದು ಮಜಾ ಮಾಡ್ತಿದ್ರು. ಇದುವರೆಗೆ ಹಲವಾರು ಬಾರಿ ಆರೋಪಿಗಳು ಅರೆಸ್ಟ್ ಆಗಿದ್ದರು. ಕಳೆದ ಒಂದು ವಾರದಲ್ಲಿ ಜೈಲಿನಿಂದ ಹೊರಗೆ ಬಂದಿದ್ದ ಆರೋಪಿಗಳು ಮತ್ತೆ ಕಳ್ಳತನ ಮಾಡಿದ್ರು. ಸದ್ಯ ಪೊಲೀಸರು ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ರಾ.ಹೆ 48ರಲ್ಲಿ ಟೈಯರ್ ಸ್ಫೋಟಗೊಂಡು ಮಿನಿ ಕ್ಯಾಂಟರ್ ಪಲ್ಟಿ

ನೆಲಮಂಗಲ: ಟೈಯರ್ ಸ್ಫೋಟಗೊಂಡು ಮಿನಿ ಕ್ಯಾಂಟರ್ ಪಲ್ಟಿ ಹೊಡೆದಿರುವಂತಹ ಘಟನೆ ಬೆಂಗಳೂರು ಗ್ರಾ. ಜಿಲ್ಲೆಯ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಈ ವೇಳೆ ಟೈಯರ್ ಬ್ಲಾಸ್ಟ್ ಆಗಿ ವಾಹನ ಪಲ್ಟಿಯಾಗಿದೆ. ನೆಲಮಂಗಲ ಸಂಚಾರಿ ಪೊಲೀಸರಿಂದ ಲಾರಿ ತೆರವು ಮಾಡಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಇದನ್ನೂ ಓದಿ: ಜಗತ್ತು ಮರೆತು ಫೋನ್​ನಲ್ಲಿ ಮಾತನಾಡುತ್ತಿದ್ದವರ ಮೇಲೆ ಹರಿಯಿತು ರೈಲು; ಮಂಡ್ಯದಲ್ಲಿ ಇಬ್ಬರು ಮಹಿಳೆಯರ ದುರ್ಮರಣ

ಪಂಚವಟಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ.ಆಪರೇಟಿವ್ ಬ್ಯಾಂಕ್​ನಿಂದ ವಂಚನೆ

ರಾಮನಗರ: ಪಂಚವಟಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ.ಆಪರೇಟಿವ್ ಬ್ಯಾಂಕ್​ನಿಂದ ವಂಚನೆ ಮಾಡಿದ್ದು, 8 ಜನರ ವಿರುದ್ಧ ರಾಮನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ. ಕೋ.ಆಪರೇಟಿವ್ ಬ್ಯಾಂಕ್​ ಅಧ್ಯಕ್ಷ ರಾಜು, ಕಾರ್ಯದರ್ಶಿ ಭೈರಲಿಂಗಯ್ಯ, ನಿರ್ದೇಶಕ‌ ಹರೀಶ್, ಲಿಂಗರಾಜು, ಸುರೇಶ್, ಬಸವಾಚಾರ್ ಹಾಗೂ ಚಂದ್ರಶೇಖರ್ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ.

ಷೇರುದಾರರು ನೀಡಿದ ದೂರಿನ ಮೇರೆಗೆ ಎಫ್​ಐಆರ್ ದಾಖಲು ಮಾಡಲಾಗಿದ್ದು, 35 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ್ದಾರೆಂದು ಷೇರುದಾರರಿಂದ ದೂರು ನೀಡಿದ್ದಾರೆ. ಹಲವು ತಿಂಗಳಿಂದ ಆಡಳಿತ ಮಂಡಳಿ ಕಚೇರಿ ಬಂದ್ ಮಾಡಲಾಗಿದೆ. ಅಧಿಕ ಬಡ್ಡಿ ಆಸೆಗೆ ಕೋಟ್ಯಂತರ ರೂ.ಗೆ ಗ್ರಾಹಕರು ಠೇವಣಿ ಇಟ್ಟಿದ್ದರು. ಎಫ್​ಐಆರ್ ದಾಖಲು ಹಿನ್ನೆಲೆ ಕಚೇರಿ ಮೇಲೆ ಪೊಲೀಸರಿಂದ ದಾಳಿ ಮಾಡಿದ್ದಾರೆ. ಈ ವೇಳೆ ಹಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ವಿರುದ್ಧವಾಗಿ ಬಂದ ತೀರ್ಪು: ರೊಚ್ಚಿಗೆದ್ದು 40ಕ್ಕೂ ಹೆಚ್ಚು ಬಾರಿ ಕುಡುಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಪಾಪಿ

ನೇಣು ಬಿಗಿದು ಮಹಿಳೆ ಆತ್ಮಹತ್ಯೆ

ಶಿವಮೊಗ್ಗ: ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಶಿವಮೊಗ್ಗದ ಗಾರ್ಡನ್ ಏರಿಯಾದ 3ನೇ ತಿರುವಿನಲ್ಲಿರುವ ಕಚೇರಿ ನಡೆದಿದೆ. ಸಹಕಾರ ಸಂಘದ ಕಾರ್ಯದರ್ಶಿ ಚುಂಚಾದ್ರಿ ಮೃತ ಮಹಿಳೆ. ಕಾರ್ಯದರ್ಶಿ ಅನಿತಾ ಮೃತದೇಹ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ