AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ದಿಢೀರ್ ಪ್ರತ್ಯಕ್ಷ.. ವಕೀಲರೊಟ್ಟಿಗೆ ಪೊಲೀಸ್​ ಠಾಣೆಗೆ ​ಭೇಟಿ!

ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಇಂದು ಪೊಲೀಸ್​ ಠಾಣೆ ಬಳಿ ದಿಢೀರ್ ಅಂತಾ ಪ್ರತ್ಯಕ್ಷವಾಗಿದ್ದಾರೆ. ಸೈಕಲ್​ ರವಿ ತಮ್ಮ ವಕೀಲರೊಂದಿಗೆ ಪೊಲೀಸ್ ಠಾಣೆಗೆ ದಿಢೀರ್ ಭೇಟಿಕೊಟ್ಟಿದ್ದಾರೆ. ವಿ.ವಿ ಪುರಂ ಠಾಣೆಗೆ ಸೈಕಲ್ ರವಿ ಭೇಟಿ ನೀಡಿದರು.

ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ದಿಢೀರ್ ಪ್ರತ್ಯಕ್ಷ.. ವಕೀಲರೊಟ್ಟಿಗೆ ಪೊಲೀಸ್​ ಠಾಣೆಗೆ ​ಭೇಟಿ!
ಸೈಕಲ್ ರವಿ
KUSHAL V
|

Updated on: Mar 15, 2021 | 10:51 PM

Share

ಬೆಂಗಳೂರು: ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಇಂದು ಪೊಲೀಸ್​ ಠಾಣೆ ಬಳಿ ದಿಢೀರ್ ಅಂತಾ ಪ್ರತ್ಯಕ್ಷವಾಗಿದ್ದಾರೆ. ಸೈಕಲ್​ ರವಿ ತಮ್ಮ ವಕೀಲರೊಂದಿಗೆ ಪೊಲೀಸ್ ಠಾಣೆಗೆ ದಿಢೀರ್ ಭೇಟಿಕೊಟ್ಟಿದ್ದಾರೆ. ವಿ.ವಿ ಪುರಂ ಠಾಣೆಗೆ ಸೈಕಲ್ ರವಿ ಭೇಟಿ ನೀಡಿದರು.

ಅಂದ ಹಾಗೆ, ಜಯನಗರ ಠಾಣಾ ವ್ಯಾಪ್ತಿಯಲ್ಲಿ ಕೆಲ ಕುಖ್ಯಾತ ದುಷ್ಕರ್ಮಿಗಳು ಸೈಕಲ್ ರವಿ ಹತ್ಯೆಗೆ ಸ್ಕೆಚ್ ಹಾಕಿದ್ದರು. ಅಷ್ಟೇ ಅಲ್ಲ, ರಾಬರ್ಟ್​ ಸಿನಿಮಾ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಮತ್ತು ಅವರ ಸಹೋದರ ದೀಪಕ್ ಹತ್ಯೆಗೂ ಸಂಚು ಸಹ ರೂಪಿಸಿದ್ದರು.

ದೀಪಕ್​ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಬಗ್ಗೆ ಆರೋಪಿ ಮಂಜುನಾಥ್ ಹಾಗೂ ಆತನ ಸಹಚರರು ಸ್ಕೆಚ್ ಹಾಕುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಸುಳಿವು ಸಿಕ್ಕ ಕೂಡಲೇ ದಾಳಿ‌ ಮಾಡಿದ್ದ ಜಯನಗರ ಪೊಲೀಸರು ಏಳು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಅಂದ ಹಾಗೆ, ದೀಪಕ್​ ಕೊಲೆಗೆ ಸ್ಕೆಚ್​ ಹಾಕಿದ್ದ ಆರೋಪಿಗಳು ಕುಖ್ಯಾತ ರೌಡಿಶೀಟರ್​ ಸೈಕಲ್ ರವಿ ಹಾಗೂ ಆತನ ಸಹಚರ ಬೇಕರಿ ರಘು ಸೇರಿದಂತೆ ನಾಲ್ವರ ಹತ್ಯೆಗೆ ಸಂಚುರೂಪಿಸಿದ್ದರು ಎಂದು ಹೇಳಲಾಗಿತ್ತು. ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಮುಂಜಾನೆ 5ರ ಸುಮಾರಿಗೆ ಬಸವನಗುಡಿ ನ್ಯಾಷನಲ್ ಕಾಲೇಜು ಬಳಿ ಸೆರೆಹಿಡಿಯಲಾಗಿತ್ತು. ಆರೋಪಿಗಳು ರಜತಾದ್ರಿ ಹೋಟೆಲ್​ ಮುಂದೆ ಹೊಂಚುಹಾಕುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಪ್ರಕರಣ ಸಂಬಂಧ ಸೈಕಲ್ ರವಿ ವಿಚಾರಣೆಗೆ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ, ಪೊಲೀಸರ ಕೈಗೆ ಸಿಗದೆ ಸೈಕಲ್ ರವಿ ತಲೆಮರೆಸಿಕೊಂಡಿದ್ದ.

CYCLE RAVI 1

ಸೈಕಲ್ ರವಿ

ಇದಲ್ಲದೆ, ನನ್ನ ಮಗನನ್ನು ಪೊಲೀಸರೇ ಕ್ರಿಮಿನಲ್ ಮಾಡುತ್ತಿದ್ದಾರೆ ಎಂದು ರೌಡಿಶೀಟರ್ ಸೈಕಲ್ ರವಿ ಪತ್ನಿ ಕೋಮಲ ಕೆಲ ದಿನಗಳ ಹಿಂದೆ ಕೆ.ಜಿ.ನಗರ ಠಾಣೆ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 17 ವರ್ಷದ ನನ್ನ ಮಗನನ್ನು ಠಾಣೆಯಲ್ಲಿ ಕೂಡಿ ಹಾಕಿದ್ದಾರೆ. ಸೈಕಲ್ ರವಿ ಬಂಧಿಸಬೇಕಾದರೆ ಈ ರೀತಿಯಾಗಿ ಮಾಡ್ತಾರೆ. ಎಲ್ಲ ಪೊಲೀಸರು ರೌಡಿ ಮಗ ರೌಡಿ ಮಗ ಎಂದು ಕರೀತಾರೆ. ನನ್ನ ಮಗನನ್ನು ಒಳ್ಳೆಯ ವ್ಯಕ್ತಿಯಾಗಿ ಬೆಳೆಸಲು ಬಿಡುತ್ತಿಲ್ಲ ಎಂದು ಆರೋಪ ಮಾಡಿದ್ದರು.

ಸೈಕಲ್ ರವಿ 17 ವರ್ಷದ ಪುತ್ರನನ್ನ ಪೊಲೀಸರು ಠಾಣೆಗೆ ಕರೆ ತಂದು ಕೂಡಿಹಾಕಿದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಸೈಕಲ್ ರವಿ ಪತ್ನಿ ಆಕ್ರೋಶ ಹೊರಹಾಕಿದ್ದರು. ಪೊಲೀಸರೇ ನನ್ನ ಪುತ್ರನನ್ನು ಕ್ರಿಮಿನಲ್ ಮಾಡುತ್ತಿದ್ದಾರೆ. ಸೈಕಲ್ ರವಿ ಬೇಕು ಅಂದಾಗ ಕುಟುಂಬದವರನ್ನ ಕರ್ಕೊಂಡು ಹೋಗುತ್ತಾರೆ. ನನ್ನದೊಡ್ಡ ಮಗನನ್ನ ಕರೆದೊಯ್ದಿದ್ದಾರೆ. ಎಲ್ಲ ಪೊಲೀಸರು ರೌಡಿ ಮಗ ರೌಡಿ ಮಗ ಎಂದು ಹೇಳುತ್ತಾರೆ ಎಂದಿದ್ದರು. ಬೆಂಗಳೂರಿನಲ್ಲಿ ನನ್ನ ಮನೆಯವರಿಲ್ಲ. ಮನೆಯವರನ್ನ ಕರೆದುಕೊಂಡು ಹೋದರೆ ಸೈಕಲ್ ರವಿ ಸಿಕ್ತಾನೆ ಅನ್ನೋ ಕಾರಣಕ್ಕೆ ಕುಟುಂಬಸ್ಥರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಸೈಕಲ್ ರವಿ ಪತ್ನಿ ಕೋಮಲ ಅರೋಪ ಮಾಡಿದ್ದರು.

ಇದನ್ನೂ ಓದಿ: ಬಿಜೆಪಿ ಶಾಸಕರ ಪಾಸ್​ ಸ್ಟಿಕರ್​ ಇದ್ದ ಕಾರಿನ ಗಾಜು ಒಡೆದು.. 4 ಲಕ್ಷ ಕದ್ದೊಯ್ದ ಖದೀಮರು

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?