ಮೈಸೂರು: ಕೌಟುಂಬಿಕ ಕಲಹಕ್ಕೆ ಒಂದು ದಿನದ ಹಸುಗೂಸು ಬಲಿ
ಕೌಟುಂಬಿಕ ಕಲಹದಿಂದ ಬೇಸತ್ತು ಗರ್ಭಿಣಿಯೊಬ್ಬರು ಆತ್ಮಹತ್ಯೆಗಾಗಿ ಮಾತ್ರೆ ಸೇವಿಸಿದ್ದರು. ಆದರೆ ನಿಗದಿತ ಸಮಯಕ್ಕಿಂತ ಮೊದಲೇ ಗರ್ಭಿಣಿ ಹೆರಿಗೆಯಾಗಿದ್ದು, ಇದಾದ ಒಂದೇ ದಿನಕ್ಕೆ ಹಸುಗೂಸು ಸಾವನ್ನಪ್ಪಿದೆ.
ಮೈಸೂರು: ಕೌಟುಂಬಿಕ ಕಲಹಕ್ಕೆ (Family Dispute) ಒಂದು ದಿನದ ಹಸುಗೂಸು ಬಲಿಯಾದ ಘಟನೆ ಜಿಲ್ಲೆಯ ಹೆಚ್ಡಿ ಕೋಟೆ (HD Kote) ತಾಲೂಕಿನ ಕಣಿಯಹುಂಡಿ ಗ್ರಾಮದಲ್ಲಿ ನಡೆದಿದೆ. ಪತಿ ಜೊತೆ ಜಗಳವಾಡಿದ ಗರ್ಭಿಣಿ ಆತ್ಮಹತ್ಯೆಗಾಗಿ ಮಾತ್ರೆ ಸೇವಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಗದಿತ ಅವಧಿಗೂ ಮುನ್ನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದಾದ ಒಂದು ದಿನಕ್ಕೆ ಹಸುಗೂಸು ಸಾವನ್ನಪ್ಪಿದೆ.
ಕಣಿಯನಹುಂಡಿ ಗ್ರಾಮದ ಸಿದ್ದರಾಜು ಮತ್ತು ಅರ್ಪಿತಾ ದಂಪತಿ ಎರಡು ಮೂರು ತಿಂಗಳಲ್ಲಿ ತಂದೆ-ತಾಯಿಯಾಗಲಿದ್ದರು. ವೈದ್ಯರು ಸೆಪ್ಟೆಂಬರ್ಗೆ ಹೆರಿಗೆ ದಿನಾಂಕ ನಿಗದಿ ಮಾಡಿದ್ದರು. ಈ ಮಧ್ಯೆ ಇಬ್ಬರ ನಡುವೆ ಕೌಟುಂಬಿಕ ಕಹಲ ಏರ್ಪಟ್ಟಿದೆ. ಅದರಂತೆ, ದಂಪತಿ ನಡುವೆ ಜಗಳ ನಡೆದಿದೆ. ಇದರಿಂದ ಮನನೊಂದ ಅರ್ಪಿತಾ ಆತ್ಮಹತ್ಯೆ ಮಾಡಿಕೊಳ್ಳಲು ಯಾವುದೋ ಮಾತ್ರೆಗಳನ್ನು ಸೇವಿಸಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹ, ಪತಿಗೆ ಹಣದ ದಾಹ; ಮಾರಕಾಸ್ತ್ರದಿಂದ ಹೊಡೆದು ಪತ್ನಿಯ ಕೊಲೆ, ಕತ್ತು ಹಿಸುಕಿ ಮಗುವಿನ ಹತ್ಯೆಗೆ ಯತ್ನ
ಮಾತ್ರೆಗಳನ್ನು ಸೇವಿಸಿದ ಕೂಡಲೇ ಎಚ್ಚೆತ್ತ ಕುಟುಂಬಸ್ಥರು ಆಕೆಯನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿದ್ದಾರೆ. ಆಸ್ಪತ್ರೆಯಲ್ಲಿ ನಿಗದಿತ ಅವಧಿಗೂ ಮುನ್ನವೇ ಅರ್ಪಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಜನ್ಮ ನೀಡಿದ ಒಂದೇ ದಿನಕ್ಕೆ ಮಗು ಸಾವನ್ನಪ್ಪಿದೆ. ಇತ್ತ, ಆತ್ಮಹತ್ಯೆಗೆ ಯತ್ನಿಸಿದ ಅರ್ಪಿತಾಗೆ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಹೆಚ್ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ