ಮದ್ಯ ಕೊಡಲು ನಿರಾಕರಿಸಿದ್ದಕ್ಕೆ ವೈನ್​ಶಾಪ್​ಗೆ ಬೆಂಕಿ ಹಚ್ಚಿದ ವ್ಯಕ್ತಿಯ ಬಂಧನ

ಮದ್ಯ ಕೊಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ವೈನ್​ಶಾಪ್​ಗೆ ಬೆಂಕಿ ಹಚ್ಚಿರುವ ಘಟನೆ ವಿಶಾಖಪಟ್ಟಣಂನ ಮಧುರವಾಡ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೋತಿನಮಲ್ಲಯ್ಯ ಪಾಲೆಂ ಇನ್ಸ್ ಪೆಕ್ಟರ್ ರಾಮಕೃಷ್ಣ ಅವರ ಮಾಹಿತಿಯಂತೆ ಮಧು ಎಂಬ ವ್ಯಕ್ತಿ ಮಧುರವಾಡ ಬಡಾವಣೆಯ ವೈನ್​ಶಾಪ್​ಗೆ ಬಂದಿದ್ದ, ಮುಚ್ಚುವ ಸಮಯವಾದ್ದರಿಂದ ಅಂಗಡಿ ಸಿಬ್ಬಂದಿ ಮದ್ಯ ನೀಡಲು ನಿರಾಕರಿಸಿದ್ದರು.

ಮದ್ಯ ಕೊಡಲು ನಿರಾಕರಿಸಿದ್ದಕ್ಕೆ ವೈನ್​ಶಾಪ್​ಗೆ ಬೆಂಕಿ ಹಚ್ಚಿದ ವ್ಯಕ್ತಿಯ ಬಂಧನ
ಬೆಂಕಿImage Credit source: NDTV
Follow us
|

Updated on: Nov 13, 2023 | 9:03 AM

ಮದ್ಯ ಕೊಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ವೈನ್​ಶಾಪ್​ಗೆ ಬೆಂಕಿ ಹಚ್ಚಿರುವ ಘಟನೆ ವಿಶಾಖಪಟ್ಟಣಂನ ಮಧುರವಾಡ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೋತಿನಮಲ್ಲಯ್ಯ ಪಾಲೆಂ ಇನ್ಸ್ ಪೆಕ್ಟರ್ ರಾಮಕೃಷ್ಣ ಅವರ ಮಾಹಿತಿಯಂತೆ ಮಧು ಎಂಬ ವ್ಯಕ್ತಿ ಮಧುರವಾಡ ಬಡಾವಣೆಯ ವೈನ್​ಶಾಪ್​ಗೆ ಬಂದಿದ್ದ, ಮುಚ್ಚುವ ಸಮಯವಾದ್ದರಿಂದ ಅಂಗಡಿ ಸಿಬ್ಬಂದಿ ಮದ್ಯ ನೀಡಲು ನಿರಾಕರಿಸಿದ್ದರು.

ಇದರಿಂದ ಆರೋಪಿ ಹಾಗೂ ವೈನ್​ಶಾಪ್​ ಸಿಬ್ಬಂದಿ ನಡುವೆ ವಾಗ್ವಾದ ನಡೆದಿತ್ತು, ಚ್ಚರಿಕೆ ನೀಡಿದ ಬಳಿಕ ಆರೋಪಿ ಸ್ಥಳದಿಂದ ತೆರಳಿದ್ದು, ಭಾನುವಾರ ಸಂಜೆ ಪೆಟ್ರೋಲ್​ನೊಂದಿಗೆ ಅಂಗಡಿಗೆ ಮರಳಿದ ಮಧು ಅಂಗಡಿಯೊಳಗೆ ಮತ್ತು ಸಿಬ್ಬಂದಿಯ ಮೇಲೂ ಪೆಟ್ರೋಲ್ ಸುರಿದು ತಕ್ಷಣ ಬೆಂಕಿ ಹಚ್ಚಿದ್ದಾನೆ.

ಸಿಬ್ಬಂದಿ ಅಂಗಡಿಯಿಂದ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ, ಆದರೆ ಅಂಗಡಿ ಸುಟ್ಟುಹೋಗಿದೆ ಮತ್ತು ಕಂಪ್ಯೂಟರ್ ಮತ್ತು ಪ್ರಿಂಟರ್ ಸೇರಿದಂತೆ 1.5 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 307 ಮತ್ತು 436 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ರಾಮ ಕೃಷ್ಣ ತಿಳಿಸಿದ್ದಾರೆ, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದರು.

ಮತ್ತಷ್ಟು ಓದಿ: ಬೆಳಗಾವಿ: ಗೋಕಾಕ್​ ಪಟ್ಟಣದಲ್ಲಿ ಯುವಕನ ಬರ್ಬರ ಹತ್ಯೆ, ಆರೋಪಿಗಳ ಮನೆ ಮೇಲೆ ಕಲ್ಲು ತೂರಾಟ

ಮತ್ತೊಂದು ಘಟನೆ

ದೀಪಾವಳಿಯ ಬೋನಸ್​ಕೊಡಲಿಲ್ಲ ಎಂದು ಮಾಲೀಕರನ್ನೇ ಕೊಂದ ಕೆಲಸಗಾರರು

ದೀಪಾವಳಿ ಬೋನಸ್​ ಕೊಡುವುದಿಲ್ಲ ಎಂದಿದ್ದಕ್ಕೆ ಢಾಬಾ ಮಾಲೀಕನನ್ನು ಇಬ್ಬರು ಕೆಲಸಗಾರರು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಹತ್ಯೆ ಮಾಡಿ ಬಳಿಕ ಮಾಲೀಕರ ಕಾರು ಕದ್ದು ಪರಾರಿಯಾಗಿದ್ದಾರೆ. ನಾಗಪುರ ಗ್ರಾಮಾಂತರ ಪೊಲೀಸ್ ವ್ಯಾಪ್ತಿಯ ಕುಹಿ ಫಾಟಾ ಬಳಿಯ ಢಾಬಾದಲ್ಲಿ ದೀಪಾವಳಿ ಬೋನಸ್‌ಗಾಗಿ ಕಾರ್ಮಿಕರು ಬೇಡಿಕೆ ಇಟ್ಟಿದ್ದರು, ಆದರೆ ಮಾಲೀಕ ಅದನ್ನು ನಿರಾಕರಿಸಿದ್ದರು, ಕೋಪಗೊಂಡ ಇಬ್ಬರು ಕೆಲಸಗಾರರು ಮಾಲೀಕನನ್ನು ಕತ್ತುಹಿಸುಕಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಮಧ್ಯಪ್ರದೇಶದ ಮಾಂಡ್ಲಾ ಮೂಲದ ಛೋಟು ಮತ್ತು ಆದಿ ಇನ್ನೂ ತಲೆಮರೆಸಿಕೊಂಡಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ ಮಧ್ಯಪ್ರದೇಶ ರಾಜ್ಯ ಬಸ್ ನಿಲ್ದಾಣದ ಬಳಿ ಕಾರ್ಮಿಕ ಗುತ್ತಿಗೆದಾರರ ಮೂಲಕ ಈ ಇಬ್ಬರು ಆರೋಪಿಗಳನ್ನು ಧೆಂಗ್ರೆ ಕೆಲಸಕ್ಕೆ ಸೇರಿಸಿಕೊಂಡಿದ್ದರು. ದೀಪಾವಳಿಗಾಗಿ ಬೋನಸ್​ ನೀಡುವಂತೆ ಕೇಳಿಕೊಂಡಿದ್ದರು, ಧೆಂಗ್ರೆ ಮತ್ತು ಛೋಟು ಒಟ್ಟಿಗೆ ಊಟ ಮಾಡುವಾಗ ಭಿನ್ನಾಭಿಪ್ರಾಯ ಮೂಡಿತ್ತು. ಆದರೆ ಧೆಂಗ್ರೆ ಅವರು ಮುಂದಿನ ದಿನಗಳಲ್ಲಿ ಪಾವತಿಸುವವರಿದ್ದರು.

ಊಟದ ನಂತರ ಧೆಂಗ್ರೆ ಮಂಚದ ಮೇಲೆ ಮಲಗಿದ್ದಾಗ ಆದಿ ಮತ್ತು ಛೋಟು ಹರಿತವಾದ ಆಯುಧದಿಂದ ತಿವಿದು, ಉಸಿರುಗಟ್ಟಿಸಿ ಧೆಂಗ್ರೆಯನ್ನು ಹತ್ಯೆ ಮಾಡಿದ್ದಾರೆ. ಧೆಂಗ್ರೆ, ಕುಹಿ ತಾಲೂಕಿನ ಸುರ್ಗಾಂವ್ ಗ್ರಾಮದ ಮಾಜಿ ಸರ್ಪಂಚ್ (ಗ್ರಾಮ ಮುಖ್ಯಸ್ಥ) ಮತ್ತು ಇತ್ತೀಚಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿದ್ದರು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ