ಕಳ್ಳರಿಗೆ ಪೊಲೀಸರಿಂದಲೇ ಸಾಥ್, ದಾಳಿ ನೆಪ ಮಾಡಿ ಚಿನ್ನಾಭರಣ ಎಗರಿಸುದ್ರು

ಬೆಂಗಳೂರು: ಚಿನ್ನಾಭರಣ ಎಗರಿಸಲು ಕಳ್ಳರಿಗೆ ಪೊಲೀಸರೇ ಸಹಾಯ ಮಾಡಿರುವ ಘಟನೆ ನಡೆದಿದೆ. ದಾಳಿ ಹೆಸರಿನಲ್ಲಿ ಕಳ್ಳರಿಗೆ ಸಾಥ್ ನೀಡ್ತಿದ್ದ ಕಾನ್ಸ್‌ಟೇಬಲ್ ಸೇರಿ 7 ಜನರನ್ನ ಅರೆಸ್ಟ್ ಮಾಡಲಾಗಿದೆ. ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ. ಪರವಾನಗಿ ಇಲ್ಲದೆ ವ್ಯಕ್ತಿ ಅಂಗಡಿ ನಡೆಸುತ್ತಿದ್ದ ಮಾಹಿತಿ ಸಿಕ್ಕುತ್ತಿದ್ದಂತೆ ಇದನ್ನೇ ಬಂಡವಾಳವಾಗಿ ಮಾಡಿಕೊಂಡಿದ್ದ ಆರೋಪಿಗಳು ದಾಳಿ ಹೆಸರಿನಲ್ಲಿ ಚಿನ್ನಾಭರಣ ಎಗರಿಸಲು ಪ್ಲ್ಯಾನ್ ಮಾಡಿಕೊಂಡಿದ್ರು. ಅಂಗಡಿ ಹಿಂದಿನ ಕಟ್ಟಡದ ಮಾಲೀಕ ಜೀತು ಎಂಬ ಖದೀಮರು ಈ ಪ್ಲ್ಯಾನ್ ರೂಪಿಸಿದ್ದ. ಇದಕ್ಕೆ ಆತ […]

ಕಳ್ಳರಿಗೆ ಪೊಲೀಸರಿಂದಲೇ ಸಾಥ್, ದಾಳಿ ನೆಪ ಮಾಡಿ ಚಿನ್ನಾಭರಣ ಎಗರಿಸುದ್ರು
Follow us
ಆಯೇಷಾ ಬಾನು
|

Updated on: Nov 22, 2020 | 7:39 AM

ಬೆಂಗಳೂರು: ಚಿನ್ನಾಭರಣ ಎಗರಿಸಲು ಕಳ್ಳರಿಗೆ ಪೊಲೀಸರೇ ಸಹಾಯ ಮಾಡಿರುವ ಘಟನೆ ನಡೆದಿದೆ. ದಾಳಿ ಹೆಸರಿನಲ್ಲಿ ಕಳ್ಳರಿಗೆ ಸಾಥ್ ನೀಡ್ತಿದ್ದ ಕಾನ್ಸ್‌ಟೇಬಲ್ ಸೇರಿ 7 ಜನರನ್ನ ಅರೆಸ್ಟ್ ಮಾಡಲಾಗಿದೆ. ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ.

ಪರವಾನಗಿ ಇಲ್ಲದೆ ವ್ಯಕ್ತಿ ಅಂಗಡಿ ನಡೆಸುತ್ತಿದ್ದ ಮಾಹಿತಿ ಸಿಕ್ಕುತ್ತಿದ್ದಂತೆ ಇದನ್ನೇ ಬಂಡವಾಳವಾಗಿ ಮಾಡಿಕೊಂಡಿದ್ದ ಆರೋಪಿಗಳು ದಾಳಿ ಹೆಸರಿನಲ್ಲಿ ಚಿನ್ನಾಭರಣ ಎಗರಿಸಲು ಪ್ಲ್ಯಾನ್ ಮಾಡಿಕೊಂಡಿದ್ರು. ಅಂಗಡಿ ಹಿಂದಿನ ಕಟ್ಟಡದ ಮಾಲೀಕ ಜೀತು ಎಂಬ ಖದೀಮರು ಈ ಪ್ಲ್ಯಾನ್ ರೂಪಿಸಿದ್ದ. ಇದಕ್ಕೆ ಆತ ಪೊಲೀಸರ ಜತೆಯೂ ಮಾತನಾಡಿದ್ದ. ಕಾಡುಗೋಡಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್‌ಗಳಾದ ಅಶೋಕ್ ಮತ್ತು ಚೌಡೇಗೌಡ ಜತೆ ಚರ್ಚೆ ನಡೆಸಿದ್ದ. ದಾಳಿಗೆ ಸಹಕರಿಸಿದರೆ ಪಾಲು ನೀಡುವುದಾಗಿ ಪೊಲೀಸ್ ಮತ್ತು ಜೀತುವಿನ ನಡುವೆ ಡೀಲಿಂಗ್ ನಡೆದಿತ್ತು. ಹೀಗಾಗಿ ಪೊಲೀಸರ ಜತೆ ಸೇರಿ ನಕಲಿ ದಾಳಿ ಮಾಡಿದ್ದರು.

ನವೆಂಬರ್ 11ರಂದು ಬೆಂಗಳೂರಿನ ನಗರ್ತಪೇಟೆಯಲ್ಲಿರುವ ಆಭರಣದ ಅಂಗಡಿ ಮೇಲೆ ಇಬ್ಬರು ಪೊಲೀಸರ ಜತೆ ಸೇರಿ ಒಟ್ಟು 8 ಜನ ದಾಳಿ ನಡೆಸಿದ್ದರು. ಈ ವೇಳೆ 8 ಜನ ದಾಳಿ ಮಾಡಿ ಚಿನ್ನಾಭರಣ ಎಗರಿಸಿ ಹಂಚಿಕೊಂಡಿದ್ದರು. 2 ದಿನಗಳ ಬಳಿಕ ಅಂಗಡಿ ಮಾಲೀಕ ಠಾಣೆಗೆ ದೂರು ನೀಡಿದ್ದ. ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಅಂಗಡಿಗೆ ತೆರಳಿ ಪರಿಶೀಲನೆ ಮಾಡಿದ್ದರು. ಬಳಿಕ ಸಿಸಿ ಕ್ಯಾಮರಾದಲ್ಲಿ ನಕಲಿ ದಾಳಿ ದುಷ್ಕೃತ್ಯ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯ ಆಧರಿಸಿ ಹಲಸೂರು ಗೇಟ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳ್ಳರಿಗೆ ಸಹಕಾರ ನೀಡಿದ್ದ ಪೊಲೀಸ್ ಚೌಡೇಗೌಡ ಎಸ್ಕೇಪ್ ಆಗಿದ್ದಾರೆ.

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?