ಗುಂಡು ಹಾರಿಸಿ ದರೋಡೆ ಆರೋಪಿಯನ್ನು ಬಂಧಿಸಿದ ಪೊಲೀಸರು
ಕಾಲಿಗೆ ಗುಂಡು ಹಾರಿಸಿ ದರೋಡೆ ಆರೋಪಿ ಅನ್ವರ್ನನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ಲಗ್ಗೆರೆ ಬಳಿಯ ಕೂಲಿ ನಗರ ಬ್ರಿಡ್ಜ್ ಬಳಿ ನಡೆದಿದೆ.
ಬೆಂಗಳೂರು: ರಾಜಧಾನಿಯಲ್ಲಿ ಬೆಳ್ಳಂ ಬೆಳಗೆ ಪೊಲೀಸರ ಬಂಧೂಕು ಸದ್ದು ಮಾಡಿದೆ. ದರೋಡೆ ಆರೋಪಿ ಅನ್ವರ್ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಲಗ್ಗೆರೆ ಬಳಿಯ ಕೂಲಿ ನಗರ ಬ್ರಿಡ್ಜ್ ಬಳಿ ನಡೆದಿದೆ.
ನವೆಂಬರ್ 26ರಂದು ರಿಂಗ್ ರಸ್ತೆ ಬಳಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿತ್ತು. ಈ ಸಂಬಂಧ ಚಾಲಕ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪ್ರಕರಣ ಸಂಬಂಧ ಆರೋಪಿ ಅನ್ವರ್ ಬಂಧಿಸಲು ಪೊಲೀಸರು ತೆರಳಿದ್ದಾಗ ಈ ಘಟನೆ ನಡೆದಿದೆ.
ಇಂದು ಬೆಳಗ್ಗೆ ಆರೋಪಿ ಅನ್ವರ್ನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಅನ್ಬನ್, ಹೆಡ್ ಕಾನ್ಸ್‌ಟೇಬಲ್ ಅಭಿಷೇಕ್ ಮೇಲೆ ಡ್ಯಾಗರ್‌ನಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಪಿಎಸ್‌ಐ ಜೋಗಾನಂದ್ ಮೇಲೂ ಹಲ್ಲೆಗೆ ಮುಂದಾಗಿದ್ದ. ಆತ್ಮರಕ್ಷಣೆಗಾಗಿ ಅನ್ಬನ್ ಮೇಲೆ ಪಿಎಸ್‌ಐ ಫೈರಿಂಗ್ ನಡೆಸಿದ್ದಾರೆ. ಗಾಯಾಳು ಹೆಡ್ ಕಾನ್ಸ್‌ಟೇಬಲ್, ಆರೋಪಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: ಕುಖ್ಯಾತ ದರೋಡೆಕೋರನ ಮೇಲೆ ಪೊಲೀಸ್ ಫೈರಿಂಗ್..
Published On - 7:45 am, Tue, 1 December 20