ತಾಯಿ ಕೊಂದು ಸೂಟ್​​ಕೇಸ್​​ನಲ್ಲಿ ಠಾಣೆಗೆ ಶವ ತಂದ ಮಗಳು: ಆರೋಪಿ ಹೇಳಿಕೆಗೆ ಪೊಲೀಸರೇ ಶಾಕ್

ಹೆತ್ತ ತಾಯಿಯನ್ನು ಕೊಂದು ಸೂಟ್​ಕೇಸ್​ನಲ್ಲಿ ಶವವಿಟ್ಟು ಪೊಲೀಸ್​ ಠಾಣೆಗೆ ಹೊತ್ತು ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಆರೋಪಿಯ ಮಾತುಗಳು ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.

ತಾಯಿ ಕೊಂದು ಸೂಟ್​​ಕೇಸ್​​ನಲ್ಲಿ ಠಾಣೆಗೆ ಶವ ತಂದ ಮಗಳು: ಆರೋಪಿ ಹೇಳಿಕೆಗೆ ಪೊಲೀಸರೇ ಶಾಕ್
ಸೆನಾಲಿ, ಕೊಲೆ ಆರೋಪಿ
Follow us
ರಮೇಶ್ ಬಿ. ಜವಳಗೇರಾ
|

Updated on: Jun 13, 2023 | 3:54 PM

ಬೆಂಗಳೂರು: ತಾಯಿಗಿಂತ ದೇವರಿಲ್ಲ ಎಂಬ ಮಾತಿದೆ. ಆದ್ರೆ, ಬೆಂಗಳೂರಿನಲ್ಲಿ ಇಲ್ಲೋರ್ವ ಕ್ರೂರಿ ಮಗಳು ತನ್ನ ಹೆತ್ತ ತಾಯಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ಪ್ಯಾಕ್ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ತಂದಿದ್ದಾಳೆ. ಮಗಳು ಸೇನಾಲಿ ಸೇನ್​ ತನ್ನ ತಾಯಿ ಬೀವಾಪಾಲ್ (70) ಎಂಬಾಕೆಯನ್ನು ಕೊಲೆ ಮಾಡಿ, ಸೂಟ್​ಕೇಸ್​ನಲ್ಲಿ ತಂದೆಯ ಫೋಟೋ ಜತೆಗೆ ತಾಯಿ ಶವವಿಟ್ಟು, ಮೈಕೊಲೇಔಟ್ ಪೊಲೀಸ್ ಠಾಣೆಗೆ ಹೊತ್ತು ತಂದು ಶರಣಾಗಿದ್ದಾಳೆ. ಈ ಪ್ರಕರಣದ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲಿಗೆ ಬಂದಿದೆ. ಇನ್ನು ಆರೋಪಿ ಸೆನಾಲಿ ಸೇನ್‌ ಮಾತಿಗೆ ಪೊಲೀಸರೇ ಶಾಕ್​ ಆಗಿದ್ದಾರೆ.

ಇದನ್ನೂ ಓದಿ: Bengaluru News: ತಾಯಿಯನ್ನು ಕೊಂದು ಸೂಟ್ ಕೇಸ್​ನಲ್ಲಿ ಶವವನ್ನು ಪೊಲೀಸ್​ ಠಾಣೆಗೆ ತಂದ ಮಗಳು

ತಾಯಿಯೇ ಮಗಳ ಬಳಿ ನಿದ್ರೆ ಮಾತ್ರೆ ಕೊಟ್ಟು ಸಾಯಿಸುವಂತೆ ಹೇಳಿದ್ದಳು. ಅದರಂತೆ ನನ್ನ ತಾಯಿಗೆ ಮುಕ್ತಿ ಕೊಡಿಸಿದ್ದೇನೆ ಎಂದು ಪುತ್ರಿ ಸೆನಾಲಿ ಸ್ಫೋಟಕ ಅಂಶವನ್ನು ಬಿಚ್ಚಿಟ್ಟಿದ್ದಾಳೆ. ಈಕೆಯ ಮಾತುಗಳು ಕೇಳಿ ಮೈಕ್ರೋ ಲೇಔಟ್ ಪೊಲೀಸರೇ ಶಾಕ್ ಆಗಿದ್ದಾರೆ. ಕೆಲವು ವರ್ಷಗಳ ಹಿಂದೆ ಸೆನಾಲಿ ತಂದೆ ತೀರಿ ಹೋಗಿದ್ದಾರೆ. ನೀನು ನನ್ನ ತಂದೆ ಬಳಿ ಹೋಗು, ನಾನು ಜೈಲಿಗೆ ಹೋಗುತ್ತೇನೆ ಎಂದು ಕೊಲೆ ಮಾಡುವ ಮುಂಚೆಯೇ ತಾಯಿ-ಮಗಳು ಮಾತನಾಡಿದ್ದರು ಎಂಬ ಸಂಗತಿ ಈ ಪ್ರಕರಣದ ವಿಚಾರಣೆ ವೇಳೆ ಬಯಲಾಗಿದೆ.

ಆರೋಪಿ ಸೆನಾಲಿ ಸೇನ್, ತಾಯಿ ಬೀವಾಪಾಲ್​ ಮತ್ತು ಸೆನಾಲಿ ಅತ್ತೆ ಒಂದೇ ಮನೆಯಲ್ಲಿ ವಾಸವಿದ್ದರು. ಇಬ್ಬರು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದರಂತೆ. ತಾಯಿ ಮತ್ತು ಅತ್ತೆ ಜಗಳದಿಂದ ಬೇಸತ್ತು ಸೆನಾಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಸೆನಾಲಿ ಮಗನಿಗೂ ಕೂಡ ಮಾನಸಿಕ ತೊಂದರೆ ಕಾಡುತ್ತಿತ್ತು. ಒಂದು ಕಡೆ ಮಗನ ಚಿಂತೆ, ಇನ್ನೊಂದು ಕಡೆ ಅತ್ತೆ-ತಾಯಿಯ ಜಗಳ. ಇದರಿಂದ ಜೀವನದಲ್ಲಿ ಬೇಸತ್ತು ಹೋಗಿದ್ದ ಸೆನಾಲಿ ಈ ದುಷ್ಕ್ರತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದೆ.

ಮೂಲತಃ ಅಸ್ಸಾಂ ಮೂಲದ ಸೆನಾಲಿ, ಸುಬ್ರತ್​ ಸೇನ್​ ದಂಪತಿ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ಕುಟುಂಬ ನಿಶ್ಚಯದಂತೆ ಇಬ್ಬರ ವಿವಾಹ ನಡೆದಿತ್ತು. ಸುಬ್ರತ್ ಸೇನ್, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದು, ಬಿಳೇಕಳ್ಳಿಯಲ್ಲಿ ಸ್ವಂತ ಪ್ಲ್ಯಾಟ್ ಹೊಂದಿದ್ದಾರೆ. ಇನ್ನು ಸುಬ್ರತ್ ಆತನ ತಾಯಿ, ಸೆನಾಲಿ ಹಾಗೂ ಒಂಬತ್ತು ವರ್ಷದ ಮಗ ವಾಸವಿದ್ದರು. ಇನ್ನು ಕೊಲ್ಕತ್ತಾದಲ್ಲಿ ಕ್ಲರ್ಕ್​ ಆಗಿದ್ದ ಸೊನಾಲಿ ತಂದೆ 2018ರಲ್ಲಿ ಸಾವನಪ್ಪಿದ್ದರು. ಪತಿ ಸಾವಿನ ಬಳಿಕ ಬೀವಾಪಾಲ್ ಮಗಳ(ಸೊನಾಲಿ) ಮನೆಗೆ ಬಂದ ನೆಲೆಸಿದ್ದಳು. ಆದ್ರೆ, ನಿನ್ನೆ ತಾಯಿಯನ್ನು ಕೊಲೆ ಮಾಡಿ ಉಬರ್ ಮುಖಾಂತರ ಆಟೋ ಬುಕ್ ಮಾಡಿ ಮೈಕ್ರೋಲೇಔಟ್ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಳು.