ಯುಕೆ: ಕುಡಿದ ಅಮಲಿನಲ್ಲಿದ್ದ ಯುವತಿಯನ್ನು ಮನೆ ತಲುಪಿಸುವ ನೆಪದಲ್ಲಿ ತನ್ನ ಮನೆಗೆ ಕರೆದೊಯ್ದು ರೇಪ್ ಮಾಡಿದವನ ಬಂಧನಕ್ಕೆ ಸಂತ್ರಸ್ತೆಯ ತಂದೆಯೇ ನೆರವಾದರು!
ಮಾರ್ಚ್ 13, 2022 ರಂದು ನೈಟ್ ಕ್ಲಬ್ ಒಂದರ ಮುಂದೆ ಯುವತಿ ಒಬ್ಬಳೇ ಕೂತಿರುವುದನ್ನು ಅಪರಾಧಿ ಮೈಕೆಲ್ ಓವೆನ್ ನೋಡಿದ್ದಾನೆ. 34-ವರ್ಷದ ಓವೆನ್ ಟ್ಯಾಕ್ಸಿಯೊಂದನ್ನು ಕರೆದು ತನ್ನ ಮನೆಯ ಆಡ್ರೆಸ್ ನೀಡಿದ್ದಾನೆ. ಮನೆಗೆ ಹೋದ ಬಳಿಕ ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ
ಬ್ರಿಟನ್ನಿನ ಗ್ರೇಟರ್ ಮ್ಯಾಂಚೆಸ್ಟರ್ ನ (Greater Manchester) ಲೀನಲ್ಲಿ ಒಬ್ಬ 16-ವರ್ಷ-ವಯಸ್ಸಿನ ಯುವತಿಯನ್ನು ಮನೆಗೆ ಟ್ಯಾಕ್ಸಿಯ (taxi) ಮೂಲಕ ಮನೆಗೆ ಕಳಿಸುವುದಾಗಿ ನಂಬಿಸಿ ತನ್ನ ಫ್ಲ್ಯಾಟ್ ಕರೆದೊಯ್ದ್ದು ಅತ್ಯಾಚಾರವೆಸಗಿದವನಿಗೆ (sexual assault) ಮ್ಯಾಂಚೆಸ್ಟರ್ ಕೌಂಟ್ ಕೋರ್ಟ್ 7-ವರ್ಷ ಸೆರೆವಾಸದ ಶಿಕ್ಷೆ ವಿಧಿಸಿದೆ. ಗಮನಿಸಬೇಕಾದ ಸಂಗತಿಯೇನೆಂದರೆ, ರೇಪಿಸ್ಟ್ ನನ್ನು ಯುವತಿಯ ತಂದೆಯೇ ಹಿಡಿದುಕೊಟ್ಟಿದ್ದಾರೆ.
ಮಾರ್ಚ್ 13, 2022 ರಂದು ನೈಟ್ ಕ್ಲಬ್ ಒಂದರ ಮುಂದೆ ಯುವತಿ ಒಬ್ಬಳೇ ಕೂತಿರುವುದನ್ನು ಅಪರಾಧಿ ಮೈಕೆಲ್ ಓವೆನ್ ನೋಡಿದ್ದಾನೆ. 34-ವರ್ಷದ ಓವೆನ್ ಟ್ಯಾಕ್ಸಿಯೊಂದನ್ನು ಕರೆದು ತನ್ನ ಮನೆಯ ಆಡ್ರೆಸ್ ನೀಡಿದ್ದಾನೆ. ಮನೆಗೆ ಹೋದ ಬಳಿಕ ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ
ಕುಡಿತದ ಅಮಲಿನಲ್ಲಿದ್ದ ಯುವತಿಗೆ ತನ್ನೊಂದಿಗೆ ಏನು ನಡೆದಿದೆ ಅನ್ನೋದು ಗೊತ್ತಾಗಿಲ್ಲ. ಎಚ್ಚರವಾದಾಗ ಓವೆನ್ ಬೆಡ್ ರೂಮಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿರುವುದು ಅವಳಿಗೆ ಗೊತ್ತಾಗಿದೆ. ಕೂಡಲೇ ಅವಳು ತಾನು ಮನೆಗೆ ಹೋಗಬೇಕು ಅಂತ ಚೀರಾಡಲಾರಂಭಿಸಿದ್ದಾಳೆ. ಆದರೆ, ಓವೆನ್ ಅವಳಿಗೆ ಹೆದರಬೇಡ ನಾನು ನಿನ್ನನ್ನು ನೋಡಕೊಳ್ಳುತ್ತೇನೆ ಅಂದಿದ್ದಾನೆ. ಅದೇ ಸಮಯಕ್ಕೆ ಯುವತಿಯ ತಂದೆ ಪೊಲೀಸರೊಂದಿಗೆ ಅಲ್ಲಿಗೆ ಬಂದಿದ್ದಾರೆ. ಯುವತಿ ತನ್ನಪ್ಪನ ಜೊತೆ ಮನೆಗೆ ಹೋದರೆ ಓವೆನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ವಿಡಿಯೋ ಲಿಂಕೊಂದರ ಮೂಲಕ ಕೋರ್ಟಿಗೆ ಸಾಕ್ಷ್ಯ ನುಡಿದ ಯುವತಿ, ಏನು ನಡೆಯಿತು ಅನ್ನುವ ಬಗ್ಗೆ ನನಗೆ ಸ್ಪಷ್ಟವಾಗಿ ಗೊತ್ತಾಗಿಲ್ಲ. ಆದರೆ, ಒವೆನ್ ಮನೆ ಬಾಗಿಲನ್ನು ಯಾರೋ ಜೋರಾಗಿ ತಟ್ಟಿದ್ದು ಚೆನ್ನಾಗಿ ನೆನಪಿದೆ ಎಂದು ಹೇಳಿದಳು.
ತನ್ನ ಮನೆ ಬಾಗಿಲನ್ನು ಯಾರೋ ಜೋರಾಗಿ ತಟ್ಟುತ್ತಿದ್ದಾರೆ ಅಂತ ಓವೆನ್ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾನೆ. ಅದೇ ಸಮಯಕ್ಕೆ ಯುವತಿಯ ತಂದೆ ಸಹ ತನ್ನ ಮಗಳು ಕಾಣೆಯಾಗಿದ್ದಾಳೆ ಅಂತ ದೂರಲು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಕೆಲವೇ ನಿಮಿಷಗಳ ನಂತರ ಅಲ್ಲಿಗೆ ಆಗಮಿಸಿದ ಪೊಲೀಸರು ಓವೆನ್ ಅನ್ನು ಬಂಧಿಸಿದ್ದಾರೆ, ಅಂತ ಲಿವರ್ ಪೂಲ್ ಇಕೋ ವರದಿ ಮಾಡಿದೆ.
ಓವೆನ್ ಮನೆಯಲ್ಲಿದ್ದ ಯುವತಿಯನ್ನು ಚಿಕಿತ್ಸೆಗಾಗಿ ಅಸ್ಪತ್ರೆಗೆ ಕರೆದೊಯ್ಯಲಾಯಿತು. ಯುವತಿಯನ್ನು ಅಪಹರಿಸಿ ಗ್ರೇಟರ್ ಮ್ಯಾಂಚೆಸ್ಟರ್ ನ ಲೀನಿಂದ ಅಪಹರಿಸಿ ಹಿಂಡ್ಲೀಯಲ್ಲಿರುವ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿರುವುದನ್ನು ಓವೆನ್ ಅಂಗೀಕರಿಸಿದ್ದಾನೆ. ಕೋರ್ಟ್ ಅವನನ್ನು ಅಪಾಯಕಾರಿ ಅಪರಾಧಿಯೆಂದು ಪರಿಗಣಿಸಿತು.
ಸೆಕ್ಸುಯಲ್ ಹಾರ್ಮ್ ಪ್ರಿವೆನ್ಷನ್ ಆರ್ಡರ್ (ಎಸ್ ಎಚ್ ಪಿ ಒ) ಅಡಿಯಲ್ಲೂ ಅವನ ವಿಚಾರಣೆ ನಡೆಸಲಾಗಿದೆ. ಈ ಆರ್ಡರ್ ಉಲ್ಲಂಘನೆ ಅಡಿ ಅವನಿಗೆ ವಿಧಿಸಲಾಗುವ ಶಿಕ್ಷೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
‘ಕೋರ್ಟಿನ ತೀರ್ಪು ನಮಗೆ ಸಂತೋಷವನ್ನುಂಟು ಮಾಡಿದೆ. ಓವೆನ್ ನಿಜಕ್ಕೂ ಒಬ್ಬ ಆಪಾಯಕಾರಿ ವ್ಯಕ್ತಿಯಾಗಿದ್ದಾನೆ. ಒಬ್ಬ ಅಮಾಯಕ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಕಾಮತೃಷೆ ತೀರಿಸಿಕೊಳ್ಳಲು ಆಕೆಯನ್ನು ಬಳಸಿಕೊಂಡಿದ್ದಾನೆ. ಸಂತ್ರಸ್ತೆ ಮತ್ತು ಅವಳ ಕುಟುಂಬಕ್ಕೆ ನಾವು ಆಭಾರಿಯಾಗಿದ್ದೇವೆ. ಅವರು ನೀಡಿದ ಜಿ ಎಮ್ ಪಿ ನಮ್ಮ ತನಿಖೆಯಲ್ಲಿ ಬಹಳ ನೆರವಾಯಿತು ಮತ್ತು ಅಪರಾಧಿಯನ್ನು ಹಿಡಿದು ಕೋರ್ಟ್ ಮುಂದೆ ಹಾಜರುಪಡಿಸುವುದು ಸಾಧ್ಯವಾಯಿತು,’ ಎಂದು ವಿಗಾನ್ ಸಿಐಡಿಯ ಡಿಟೆಕ್ಟಿವ್ ಸಾರ್ಜೆಂಟ್ ಕ್ರಿಸ್ ಪ್ರೆಸ್ಟನ್ ಹೇಳಿದ್ದಾರೆ.
‘ಲೈಂಗಿಕ ಅತ್ಯಾಚಾರಕ್ಕೊಳಗಾಗಿದ್ದೇನೆ ಭಾವಿಸುವವರು 999 ಡಯಲ್ ಮಾಡಿ ನಮ್ಮ ತಂಡದೊಂದಿಗೆ ಮಾತಾಡಬೇಕೆಂದು ನಾವು ಪ್ರೋತ್ಸಾಹಿಸುತ್ತೇವೆ. ನಿಮ್ಮ ಸಮಸ್ಯೆಯನ್ನು ನಮ್ಮೊಂದಿಗೆ ಹಂಚಿಕೊಂಡರೆ, ಅಪರಾಧಿಗಳನ್ನು ಕಾನೂನಿನ ಮುಂದೆ ಹಾಜರುಪಡಿಸುವುದು ಸುಲಭವಾಗುತ್ತದೆ,’ ಎಂದು ಕ್ರಿಸ್ ಪ್ರೆಸ್ಟನ್ ಹೇಳಿದ್ದಾರೆ.
‘ಅಪರಾಧಿಗಳು ಯಾರೇ ಆಗಿರಲಿ ಮತ್ತು ಎಲ್ಲೇ ಅಡಗಿರಲಿ, ಅವರನ್ನು ಹಿಡಿದು ಕಾನೂನಿನ ಪ್ರಕಾರ ಶಿಕ್ಷೆ ಕೊಡಿಸಲು ನಾವು ಬದ್ಧರಾಗಿದ್ದೇವೆ,’ ಎಂದು ಅವರು ಹೇಳಿದರು.
ಇನ್ನಷ್ಟು ಕ್ರೈಮ್ ಕತೆಗಳನ್ನು ಓದಲಿ ಇಲ್ಲಿ ಕ್ಲಿಕ್ ಮಾಡಿ