ಮಥುರಾದಲ್ಲಿ ಸೂಟ್​​ಕೇಸ್​​ನಲ್ಲಿ ಯುವತಿಯ ಶವ ಪತ್ತೆ ಪ್ರಕರಣಕ್ಕೆ ಹೊಸ ತಿರುವು; ಅಪ್ಪನೇ ಕೊಲೆಗಾರ!

ಮೃತಪಟ್ಟ ಯುವತಿಯನ್ನು ಆಯುಷಿ ಯಾದವ್ ಎಂದು ಗುರುತಿಸಲಾಗಿದೆ. ಯುವತಿಯ ತಂದೆಯೇ ಅವಳನ್ನು ಗುಂಡಿಕ್ಕಿ ಕೊಂದು, ಶವವನ್ನು ವಿಲೇವಾರಿ ಮಾಡಿರುವುದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.

ಮಥುರಾದಲ್ಲಿ ಸೂಟ್​​ಕೇಸ್​​ನಲ್ಲಿ ಯುವತಿಯ ಶವ ಪತ್ತೆ ಪ್ರಕರಣಕ್ಕೆ ಹೊಸ ತಿರುವು; ಅಪ್ಪನೇ ಕೊಲೆಗಾರ!
ಮಥುರಾ ಹೈವೇಯಲ್ಲಿ ಸೂಟ್​​ಕೇಸ್​​ನಲ್ಲಿ ಯುವತಿಯ ಶವ ಪತ್ತೆ
Image Credit source: India Today
TV9kannada Web Team

| Edited By: Sushma Chakre

Nov 21, 2022 | 1:40 PM

ಮಥುರಾ: ಉತ್ತರ ಪ್ರದೇಶದ ಮಥುರಾ (Mathura) ಜಿಲ್ಲೆಯ ಯಮುನಾ ಎಕ್ಸ್‌ಪ್ರೆಸ್‌ವೇಯ ರಸ್ತೆಯ ಬಳಿ ಮಹಿಳೆಯ ಶವವನ್ನು ಸೂಟ್​ಕೇಸ್​ನಲ್ಲಿ ತುಂಬಿ ಎಸೆಯಲಾಗಿತ್ತು. ಟ್ರಾಲಿ ಸೂಟ್​ಕೇಸ್​​ನೊಳಗೆ ಪ್ಲಾಸ್ಟಿಕ್​ ಕವರ್​ನಲ್ಲಿ ಯುವತಿಯ ಶವವನ್ನು (Murder) ಸುತ್ತಿ ತುಂಬಲಾಗಿತ್ತು. ಈ ಘಟನೆ ಬೆಳಕಿಗೆ ಬಂದ ನಂತರ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಅಚ್ಚರಿಯ ವಿಷಯಗಳು ಗೊತ್ತಾಗಿವೆ. ಸೂಟ್​ಕೇಸ್​​ನೊಳಗೆ ಶವವಾಗಿ ಸಿಕ್ಕ ಸುಮಾರು 20 ವರ್ಷದ ಪ್ರಾಯದ ಯುವತಿಯ ತಂದೆಯೇ ಆಕೆಯನ್ನು ಕೊಂದು, ಸೂಟ್​ಕೇಸ್​ನಲ್ಲಿ ತುಂಬಿ ರಸ್ತೆಯಲ್ಲಿ ಎಸೆದು ಹೋಗಿದ್ದ ಎಂಬ ಆಘಾತಕಾರಿ ವಿಚಾರ (Shocking News) ಇದೀಗ ಬಯಲಾಗಿದೆ.

ಯುವತಿಯ ತಂದೆಯೇ ಅವಳನ್ನು ಗುಂಡಿಕ್ಕಿ ಕೊಂದು, ಶವವನ್ನು ವಿಲೇವಾರಿ ಮಾಡಿರುವುದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ. ಮೃತಪಟ್ಟ ಯುವತಿಯನ್ನು ಆಯುಷಿ ಯಾದವ್ ಎಂದು ಗುರುತಿಸಲಾಗಿದೆ. ಆಕೆ ದೆಹಲಿಯ ಬದರ್‌ಪುರ ನಿವಾಸಿಯಾಗಿದ್ದಳು.

ಕೊಲೆಗೆ ಕಾರಣವೇನು?: ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ, ಕೆಲವು ದಿನಗಳ ಹಿಂದೆ ಆಯುಷಿ ತನ್ನ ತಂದೆ ನಿತೇಶ್ ಯಾದವ್ ಅವರಿಗೆ ಹೇಳದೆ ಮನೆಬಿಟ್ಟು ಹೋಗಿದ್ದಳು. ಅವಳು ಮನೆಗೆ ವಾಪಾಸ್ ಬಂದ ನಂತರ ಕೋಪದಿಂದ ನಿತೇಶ್ ಯಾದವ್ ಮಗಳಿಗೆ ಬೈದು, ಗಲಾಟೆ ಮಾಡಿದ್ದರು. ಆ ವೇಳೆ ತಂದೆ-ಮಗಳ ನಡುವೆ ಮಾತಿಗೆ ಮಾತು ಬೆಳೆದು ಕೋಪದಿಂದ ನಿತೇಶ್ ಯಾದವ್ ತನ್ನ ಕೋಪವನ್ನು ನಿಯಂತ್ರಿಸಲಾಗದೆ ಮಗಳಿಗೆ ಗುಂಡು ಹಾರಿಸಿದ್ದಾರೆ. ನಂತರ ಆಕೆಯ ದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ, ಟ್ರಾಲಿ ಬ್ಯಾಗ್‌ನಲ್ಲಿ ತುಂಬಿ ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಚೀಲವನ್ನು ಎಸೆದಿದ್ದಾರೆ.

ಇದನ್ನೂ ಓದಿ: Crime News: ತಂದೆ-ತಾಯಿ ಕೊಲೆಗೆ ಸುಪಾರಿ ಕೊಟ್ಟವನನ್ನೇ ಚಾಕು ಇರಿದು ಪರಾರಿಯಾದ ಸುಪಾರಿ ಕಿಲ್ಲರ್, ಕಾರಣವೇನು ಗೊತ್ತಾ?

ಕಳೆದ ಶುಕ್ರವಾರ ಯುವತಿಯ ಶವ ಪತ್ತೆಯಾಗಿತ್ತು. ಆಕೆಯ ದೇಹವನ್ನು ಪಾಲಿಥಿನ್ ಬ್ಯಾಗ್‌ನಲ್ಲಿ ಸುತ್ತಿ ಟ್ರಾಲಿ ಬ್ಯಾಗ್‌ನಲ್ಲಿ ತುಂಬಿಸಲಾಗಿತ್ತು. ಆರಂಭದಲ್ಲಿ ಶವವನ್ನು ಗುರುತಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಬಳಿಕ, ಸರ್ಕಲ್ ಆಫೀಸರ್ ಅಲೋಕ್ ಸಿಂಗ್ ಈ ಘಟನೆಯ ಬಗ್ಗೆ ಮಾಹಿತಿಯನ್ನು ಹತ್ತಿರದ ಎಲ್ಲಾ ಜಿಲ್ಲೆಗಳ ಪೊಲೀಸ್ ಠಾಣೆಗಳಿಗೆ ಕಳುಹಿಸಿದ್ದರು. ಆ ಯುವತಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಆಕೆ ಆಯುಷಿ ಎಂಬುದು ಗೊತ್ತಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada