AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಆಸ್ತಿ ಕಲಹ; ಆಸ್ಪತ್ರೆಗೆ ನುಗ್ಗಿ ಮಲ ಸಹೋದರನ ಕೊಲೆ

ಬೆನ್ನು ಬಿಡದೆ ಆಸ್ಪತ್ರೆಗೆ ನುಗ್ಗಿ ಮಲ ಸಹೋದರನನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ದಾವಣಗೆರೆ: ಆಸ್ತಿ ಕಲಹ; ಆಸ್ಪತ್ರೆಗೆ ನುಗ್ಗಿ ಮಲ ಸಹೋದರನ ಕೊಲೆ
ಮೃತ ಕುಮಾರ್​
Follow us
ವಿವೇಕ ಬಿರಾದಾರ
|

Updated on: May 16, 2023 | 10:09 AM

ದಾವಣಗೆರೆ: ಬೆನ್ನು ಬಿಡದೆ ಆಸ್ಪತ್ರೆಗೆ ನುಗ್ಗಿ ಮಲ ಸಹೋದರನನ್ನೇ (Borther) ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಿಹರ (Harihar) ತಾಲೂಕು ಆಸ್ಪತ್ರೆಯಲ್ಲಿ (Hospital) ನಡೆದಿದೆ. ಕುಮಾರ್ (34) ಕೊಲೆಯಾದ ಮಲ ಸಹೋದರ. ಮಲ ಸಹೋದರರಾದ ರಾಜು ಹಾಗೂ ಮಾರುತಿ ಕೊಲೆ ಆರೋಪಿಗಳು. ಕುಮಾರ ತಂದೆ ಗುಡ್ಡಪ್ಪನಿಗೆ ಇಬ್ಬರು ಹೆಂಡಿತಿಯರು. ಕುಮಾರ ಹಿರಿಯ ಹೆಂಡತಿ ಪುತ್ರ. ಆರೋಪಿಗಳಾದ ರಾಜು ಮತ್ತು ಮಾರುತಿ ಕಿರಿಯ ಹೆಂಡತಿ ಪುತ್ರರು. ಇತ್ತೀಚಿಗೆ ತಂದೆ ಗುಡ್ಡಪ್ಪ ನಿಧನರಾಗಿದ್ದರು.

ತಂದೆ ನಿಧನದ ಬಳಿಕ ಇದ್ದ ಒಂದು ಮನೆಯನ್ನು ಭಾಗ ಮಾಡಬೇಕೆಂದು ಹಿರಿಯ ಹೆಂಡತಿ ಮಕ್ಕಳು ಪಟ್ಟು ಹಿಡಿದಿದ್ದರು. ಈ ವಿಚಾರಕ್ಕೆ ಜಗಳ ನಡೆದಿತ್ತು. ಇದಲ್ಲದೆ‌ ಬೇರೆ ವಿಚಾರಕ್ಕೂ ಕೂಡ ಸಹೋದರರ ನಡುವೆ ಹಳೇ ದ್ವೇಷವಿತ್ತು ಎನ್ನಲಾಗುತ್ತಿದೆ. ಈ ಹಿನ್ನೆಲೆ ರಾಜು ಮತ್ತು ಮಾರುತಿ ಕುಮಾರನನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆಸ್ಪತ್ರೆಯಲ್ಲಿ ಸಹೋದರನ ಕೊಲೆ

ಕುಮಾರ್​ ನಿನ್ನೆ (ಮೇ.15) ರಂದು ಪತ್ನಿ, ಮಕ್ಕಳೊಂದಿಗೆ ದಾವಣಗೆರೆಯಿಂದ ಹರಿಹರದಲ್ಲಿನ ತಮ್ಮ ಮನೆಗೆ ಹೋಗುತ್ತಿದ್ದರು. ಹರಿಹರದಲ್ಲಿ ದಾರಿ ಮಧ್ಯೆ ರಾಜು ಮತ್ತು ಮಾರುತಿ, ಕುಮಾರನ ಬೈಕ್ ನಿಲ್ಲಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹಲ್ಲೆ ಮಾಡಿದ್ದಾರೆ.

ಕೂಡಲೆ ಪತ್ನಿ ಹಾಗೂ ಸಂಬಂಧಿಕರು ಕುಮಾರನನ್ನು ಚಿಕಿತ್ಸೆಗೆ ಹರಿಹರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇವರಿಗಿಂತ ಮೊದಲೆ ಆರೋಪಿಗಳು ಆಸ್ಪತ್ರೆಗೆ ಬಂದಿದ್ದರು. ಕುಮಾರ್​ ಆಸ್ಪತ್ರೆಗೆ ಬರುತ್ತಿದ್ದಂತೆ, ಸ್ಥಳದಲ್ಲಿದ್ದ, ಸಹೋದರ ರಾಜು ಚಾಕುವಿನಿಂದ ಕುಮಾರನ ಕುತ್ತಿಗೆಗೆ ಚುಚ್ಚಿದ್ದಾನೆ. ಅಲ್ಲದೆ ಆಸ್ಪತ್ರೆಗೆ ಕುಮಾರ ಜೊತೆಗೆ ಬಂದಿದ್ದ ಆತನ ಸಹೋದರ ಪಕ್ಕಿರಪ್ಪನಿಗೂ ಕೂಡ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಕುಮಾರ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು, ಕೂಡಲೆ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಸಿಜಿ ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾರೆ.

ಇದನ್ನೂ ಓದಿ: ಕಾರ್ಪೋರೇಶನ್ ಚುನಾವಣೆಯಲ್ಲಿ ಸೋಲಿನ ಸೇಡು, ಸದ್ದು ಮಾಡಿದ ಕಂಟ್ರೀ ಪಿಸ್ತೂಲಿನ ಬುಲೆಟ್​​ಗಳು

ತಕ್ಷಣವೇ ಅಲ್ಲಿಂದ ಕುಮಾರ್​​ ಮತ್ತು ಕುಟಂಬ ದಾವಣಗೆರೆ ಸಿಜಿ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷೆ ಮಾಡಿದಾಗ ಕುಮಾರ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲು.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ