ವಿಜಯಪುರ: ಕಾರ್ಪೋರೇಶನ್ ಚುನಾವಣೆಯ ಸೋಲಿನ ಸೇಡು, ಸದ್ದು ಮಾಡಿದ ಕಂಟ್ರೀ ಪಿಸ್ತೂಲಿನ ಬುಲೆಟ್​​ಗಳು

ವಿಜಯಪುರ ಮಾಹನಗರ ಪಾಲಿಕೆಯ ಚುನಾವಣೆಯಲ್ಲಿ ಸೋಲಿಸಿದ್ದಕ್ಕೆ ಹುಟ್ಟಿಕೊಂಡ ವೈಷಮ್ಯ ಓರ್ವನ ದಾರುಣ ಅಂತ್ಯಕ್ಕೆ ಕಾರಣವಾಗಿದೆ.

ವಿಜಯಪುರ: ಕಾರ್ಪೋರೇಶನ್ ಚುನಾವಣೆಯ ಸೋಲಿನ ಸೇಡು, ಸದ್ದು ಮಾಡಿದ ಕಂಟ್ರೀ ಪಿಸ್ತೂಲಿನ ಬುಲೆಟ್​​ಗಳು
ಪ್ರಾತಿನಿಧಿಕ ಚಿತ್ರ
Follow us
|

Updated on:May 17, 2023 | 8:18 AM

ವಿಜಯಪುರ: ಜಿಲ್ಲೆಯಲ್ಲಿ ಆಗ ಆಗ ಕಂಟ್ರೀ ಪಿಸ್ತೂಲಿನ ಗುಂಡಿನ ಸದ್ದು, ಕೇಳುತ್ತಿರುತ್ತದೆ. ಒಂದಾನೊಂದು ಕಾಲದಲ್ಲಿ ವಿಜಯಪುರ ಜಿಲ್ಲೆಯಂದರೇ ಗುಂಡಿನ ಸದ್ದು, ಭೀಮಾತೀರದ ಹಂತಕರಿಗೆ ಫೇಮಸ್​ ಆಗಿತ್ತು. ಈಗ ಮತ್ತೆ ಕಂಟ್ರೀ ಪಿಸ್ತೂಲ್​​ ಬುಲೆಟ್​​​​​ನ ಸದ್ದು ಕೇಳಿಸಿದ್ದು, ನೆತ್ತರು ಹರಿಸಿದೆ. ಅದು 2022 ರ ಅಕ್ಟೋಬರ್​​, ವಿಜಯಪುರ (Vijayapura) ಮಹಾನಗರ ಪಾಲಿಕೆಯ ಚುನಾವಣೆ ನಡೆದಿತ್ತು. ವಾರ್ಡ್ ನಂಬರ್ 19 ಕ್ಕೆ ಮುಸ್ಲಿಂ (Muslim) ಮಹಿಳಾ ಮೀಸಲಾತಿ ಇದ್ದ ಕಾರಣ ಕಾಂಗ್ರೆಸ್​ನಿಂದ ಆಯೇಷಾ ಮೋದಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ನಿಶಾತ್ ನದಾಫ್ ಕಣದಲ್ಲಿದ್ದರು. ಇದೇ ಚುನಾವಣಾ ವಿಚಾರದಲ್ಲಿ ಆಯೇಷಾ ಪತಿ ಶೇಖ್ ಅಹ್ಮದ್ ಮೋದಿ ಹಾಗೂ ನಿಶಾತ್ ಪತಿ ಹೈದರ ಅಲಿ ನದಾಫ್ ಮಧ್ಯೆ ದ್ವೇಷ ಹುಟ್ಟಿಕೊಂಡಿತ್ತು. ಚುನಾವಣೆಯಲ್ಲಿ ನಿಶಾತ್ ನದಾಫ್ ಗೆಲುವು ಕಂಡಿದ್ದರು. ಇವರ ಎದುರಾಳಿ ಆಯೇಷಾ ಮೋದಿ ಪರಾಭವಗೊಂಡ ಬಳಿಕ ಆ ದ್ವೇಷ ಮತ್ತಷ್ಟು ಹೆಚ್ಚಿತ್ತು.

ಶೇಖ್ ಅಹ್ಮದ ಮೋದಿ ಹಾಗೂ ಹೈದರ ಅಲಿ ನದಾಫ್ ಮಧ್ಯೆ ಕಾರ್ಪೋರೇಶನ್ ಚುನಾವಣೆ ಬಿರುಕು ತಂದಿದ್ದು, ಈ ದ್ವೇಷ ಹೈದರಅಲಿ ನದಾಫ್​ನನ್ನು ಮುಗಿಸಿಬಿಡುವ ಹಂತಕ್ಕೆ ತಲುಪಿತ್ತು. ಸಮಯಕ್ಕಾಗಿ ಕಾಯುತ್ತಿದ್ದ ಶೇಖ್ ಅಹ್ಮದ್ ಮೋದಿ, ಮೇ 7 ರಂದು ಮುಹೂರ್ತ ಫಿಕ್ಸ್​​​ ಮಾಡಿದ. ನಗರದ ಚಾಂದಫುರ ಕಾಲೋನಿಯ ಮನೆಯಿಂದ ಹೈದರಅಲಿ ನದಾಫ್ ಪತ್ನಿ ನಿಶಾತ್ ಜೊತೆಗೆ ಹೊರಡುವ ವೇಳೆ ಹೊಂಚು ಹಾಕಿ ಕೂತಿದ್ದ ಹಂತಕರು ಮಾತನಾಡುವ ನೆಪದಲ್ಲಿ ಹೈದರಅಲಿ ನದಾಫ್ ಬಳಿ ಬಂದು 10ಕ್ಕೂ ಅಧಿಕ ಸುತ್ತುಗಳ ಗುಂಡು ಹಾರಿಸಿ ಹೈದರಅಲಿಯನ್ನು ಯಮನ ಪಾದ ಸೇರಿಸಿದ್ದರು. ಗುಂಡಿನ ದಾಳಿ ನಡೆಸಿದರವ ಮೇಲೆ ಆತನ ಪತ್ನಿ ನಿಶಾತ್ ಜಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ:  ಜಗಳ ಬಿಡಿಸಲು ಹೋಗಿ ಕೊಲೆಯಾದ ಬಡಪಾಯಿ

ನಗರದಲ್ಲಿ ಈ ಘಟನೆ ನಡೆದು ಭಯದ ವಾತಾವರಣ ಸೃಷ್ಟಿ ಮಾಡಿದೆ. ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕೆಂದು ಹೈದರಅಲಿಯ ಸಂಬಂಧಿಕರು ಒತ್ತಾಯಿಸಿದರು. ಮಾಡಿದರು. ಹೈದರಅಲಿ ಅತ್ತೆ ಪೊಲೀಸರು ನನ್ನ ಅಳಿಯನನ್ನು ಕೊಲೆ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಲ್ಲವಾದರೆ ನಾನು ನನ್ನ ಮಗಳು ಎಸ್ಪಿ ಅವರ ಕಚೇರಿ ಬಳಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಹೈದರಅಲಿಯ ಅತ್ತೆ ಸರ್ಧಾರಬೀ ಒತ್ತಡ ಹಾಕಿದ್ದರು.

ಚುನಾವಣೆ ವೇಳೆಯೇ ಈ ಘಟನೆ ನಡೆದಿದ್ದು, ಎಸ್ಪಿ ಆನಂದಕುಮಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ತನಿಖೆಗಾಗಿ ಎಸ್ಪಿ ಹೆಚ್ ಡಿ ಆನಂದಕುಮಾರ ವಿಶೇಷ ತಂಡ ರಚನೆ ಮಾಡಿದ್ದರು. ತನಿಖೆ ನಡೆಸಿದ ಪೊಲೀಸರ ತಂಡ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ಶೇಖ್ ಅಹ್ಮದ ಮೋದಿ, ಎಸ್ ಎಸ್ ಖಾದ್ರಿ, ಶಾನವಾಜ್ ದಫೇದಾರ್, ಫಯಾಜ್ ಮುರ್ಶದ, ಮೈಬೂಬ್ ಮಿರಜಕರ್ ಎಂಬ ಐವರು ಆರೋಪಿತರನ್ನು ಬಂಧಿಸಿದ್ದಾರೆ.

ಗುಂಡಿನ ದಾಳಿ ನಡೆಸಿದ್ದು ಯಾಕೆ ಎಂಬ ವಿಚಾರದ ಕುರಿತು ಆರೋಪಿತರ ಬಾಯಿ ಬಿಡಿಸಿದ್ದಾರೆ. ಪ್ರಮುಖ ಆರೋಪಿ ಶೇಝ್ ಅಹ್ಮದ್ ಮೋದಿ ಪ್ರಕಾರ ಕಳೆದ ಕಾರ್ಪೊರೇಶನ್ ಚುನಾವಣೆ ವೇಳೆ ಹೈದರ ಅಲಿ ಪತ್ನಿ ನಿಶಾತ್ ಅವರು ಪಕ್ಷೇತರ ಅಭ್ಯರ್ಥಿಯಾಗಿ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆಯೇಷಾ ಮೋದಿ ವಿರುದ್ಧ ಗೆದ್ದಿದ್ದರು. ಸೋತ ಕಾರಣ ನಮಗೆ ಹೈದರಅಲಿ ಮೇಲೆ ದ್ವೇಷ ಹುಟ್ಟಿತ್ತು. ನಮಗೆ ಸೋಲು ಕಾಣಿಸಿದ ಹೈದರ ಅಲಿಯನ್ನು ಕೊಲೆ ಮಾಡುವ ತೀರ್ಮಾನ ಮಾಡಿ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾಗಿ ಖಾಕಿ ಎದುರು ಆರೋಪಿತರು ಬಾಯಿ ಬಿಟ್ಟಿದ್ದಾರೆ.

ಬಂಧಿತರಿಂದ ಮೂರು ಕಂಟ್ರೀ ಪಿಸ್ತೂಲ್​ಗಳನ್ನು ಸಹ ವಶಪಡಿಸಿಕೊಂಡಿದ್ದಾಗಿ ಎಸ್ಪಿ ಮಾಹಿತಿ ನೀಡಿದ್ದಾರೆ. ಯಾರಾದರೂ ಇಂಥ ಘಟನೆಗಳಲ್ಲಿ ಭಾಗಿಯಾಗಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಏನಾದರೂ ಸಮಸ್ಯೆಯಿದ್ದರೆ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ಹೈದರ ಅಲಿ ನದಾಫ್ ಕೊಲೆಯ ಪ್ರಕರಣದಲ್ಲಿ ಸದ್ಯ ಐವರು ಆರೋಪಿಗಳು ಅಂದರ್ ಆಗಿದ್ದಾರೆ. ಇನ್ನೂ ಕೆಲವರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನವಿದ್ದು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ತನಿಖೆ ವೇಳೆ ಮತ್ತೆ ಯಾರದ್ದಾದರೂ ಕೈವಾಡವಿದ್ದರೇ ಅವರ ಕೈಗೂ ಕೋಳ ಹಾಕೋದರಲ್ಲಿ ಯಾವುದೇ ಸಂಶಯವಿಲ್ಲ. ಇಡೀ ನಗರವನ್ನೇ ಬೆಚ್ಚಿ ಬೀಳಿಸಿದ್ದ ಈ ಪ್ರಕರಣ ಐವರ ಬಂಧನದಿಂದ ತಕ್ಕ ಮಟ್ಟಿಗೆ ತಾರ್ಕಿಕ ಅಂತ್ಯ ಕಂಡಿದೆ. ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಅಶೋಕ ಯಡಳ್ಳಿ, ಟಿವಿ9 ವಿಜಯಪುರ…..

Published On - 8:10 am, Tue, 16 May 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ