ಯಶವಂತಪುರದಲ್ಲಿ ಹುಡುಗಿ ವಿಚಾರಕ್ಕೆ ಕಿತ್ತಾಟ: ಜಗಳ ಬಿಡಿಸಲು ಹೋದ PU ವಿದ್ಯಾರ್ಥಿಯ ಬರ್ಬರ ಕೊಲೆ

|

Updated on: Mar 09, 2021 | 10:30 PM

PU ವಿದ್ಯಾರ್ಥಿಗಳ ಮಾರಾಮಾರಿ ನಡೆದ ವೇಳೆ ಓರ್ವ ವಿದ್ಯಾರ್ಥಿ ಹತ್ಯೆಯಾಗಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ. ಡ್ಯಾಗರ್​ನಿಂದ ಇರಿದು 16 ವರ್ಷದ ಬಾಲಕನ ಕೊಲೆಮಾಡಲಾಗಿದೆ.

ಯಶವಂತಪುರದಲ್ಲಿ ಹುಡುಗಿ ವಿಚಾರಕ್ಕೆ ಕಿತ್ತಾಟ: ಜಗಳ ಬಿಡಿಸಲು ಹೋದ PU ವಿದ್ಯಾರ್ಥಿಯ ಬರ್ಬರ ಕೊಲೆ
ಜಗಳ ಬಿಡಿಸಲು ಹೋದ PU ವಿದ್ಯಾರ್ಥಿಯ ಬರ್ಬರ ಕೊಲೆ
Follow us on

ಬೆಂಗಳೂರು: PU ವಿದ್ಯಾರ್ಥಿಗಳ ಮಾರಾಮಾರಿ ನಡೆದ ವೇಳೆ ಓರ್ವ ವಿದ್ಯಾರ್ಥಿ ಹತ್ಯೆಯಾಗಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ. ಡ್ಯಾಗರ್​ನಿಂದ ಇರಿದು 16 ವರ್ಷದ ಬಾಲಕನ ಕೊಲೆಮಾಡಲಾಗಿದೆ. ಹುಡುಗಿ ವಿಚಾರಕ್ಕೆ ಕಿತ್ತಾಟ ನಡೆದ ವೇಳೆ ಜಗಳ ಬಿಡಿಸಲು ಬಂದಿದ್ದ ಬಾಲಕನಿಗೆ ಡ್ಯಾಗರ್​ನಿಂದ ಇರಿದು ಬರ್ಬರವಾಗಿ ಕೊಲೆಮಾಡಲಾಗಿದೆ. ಯಶವಂತಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಗಾಂಜಾ ಮತ್ತಿನಲ್ಲಿ ಬಾಲಕನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕಾರು-ಬೈಕ್​ ಮುಖಾಮುಖಿ ಡಿಕ್ಕಿ: ಸವಾರ ಸಾವು
ಇತ್ತ, ಕಾರು-ಬೈಕ್​ ಮುಖಾಮುಖಿ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕಾಶಿಪುರ ಗೇಟ್ ಬಳಿ ನಡೆದಿದೆ. ಮುಳಬಾಗಿಲಿನ ಸಾಯಿ(25) ಮೃತ ಬೈಕ್​ ಸವಾರ. ಸಾಯಿ KGF​ನಿಂದ ಮುಳಬಾಗಿಲು ಪಟ್ಟಣಕ್ಕೆ ಬರುವಾಗ ಅಪಘಾತ ಸಂಭವಿಸಿದೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಾರು-ಬೈಕ್​ ಮುಖಾಮುಖಿ ಡಿಕ್ಕಿ

ಸ್ಯಾಂಟ್ರೋ ಕಾರಿಗೆ ಬೈಕ್ ಡಿಕ್ಕಿ, ಸವಾರರಿಬ್ಬರ ಸ್ಥಿತಿ ಗಂಭೀರ
ಸ್ಯಾಂಟ್ರೋ ಕಾರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಸವಾರರಿಬ್ಬರ ಸ್ಥಿತಿ ಗಂಭೀರವಾಗಿರುವ ಪ್ರಕರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಗೇಟ್​ ಬಳಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ. ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಸವಾರರು ಮೇಲಕ್ಕೆ ಹಾರಿ ಕೆಳಗೆಬಿದ್ದಿದ್ದಾರೆ.

ಘಟನೆಯಲ್ಲಿ ಮಂಚೇನಹಳ್ಳಿ ನಿವಾಸಿಗಳಾದ ವಿನಯ್ ಹಾಗೂ ಸುಮನ್​ಗೆ ಗಾಯಗಳಾಗಿದೆ. ಗಾಯಾಳುಗಳನ್ನು ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿಗೆ ಬೈಕ್​ ಡಿಕ್ಕಿಯಾದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸ್ಯಾಂಟ್ರೋ ಕಾರಿಗೆ ಬೈಕ್ ಡಿಕ್ಕಿ

ಶ್ರೀಗಂಧದ ತೋಪಿನಲ್ಲಿ 13 ನಾಡಬಾಂಬ್​ಗಳು ಪತ್ತೆ
ಶ್ರೀಗಂಧದ ತೋಪಿನಲ್ಲಿ 13 ನಾಡಬಾಂಬ್​ಗಳು ಪತ್ತೆಯಾಗಿರುವ ಪ್ರಕರಣ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ವರದಿಯಾಗಿದೆ. ಸದ್ಯ, ಬೆಂಗಳೂರಿನ BDDS ತಂಡ ಬಾಂಬ್​ಗಳನ್ನು ನಿಷ್ಕ್ರಿಯಗೊಳಿಸಿದೆ. ಕಾಡು ಪ್ರಾಣಿಗಳನ್ನು ಬೇಟೆಯಾಡಲು ನಾಡಬಾಂಬ್​ಳ ಬಳಕೆಗೆ ದುಷ್ಕರ್ಮಿಗಳು ಮುಂದಾಗಿದ್ದರು.

ಶ್ರೀಗಂಧ ತೋಪಿನ ಸುತ್ತಮುತ್ತ ಬೇಟೆಗಾರರು ಕಳೆದ 15 ದಿನದಿಂದ ಅನುಮಾನಾಸ್ಪದವಾಗಿ ಓಡಾಟ ನಡೆಸುತ್ತಿದ್ದದು ಕಂಡುಬಂದಿತ್ತು. ಹೀಗಾಗಿ, ಹೊಂಚು ಹಾಕಿ ಕುಳಿತಿದ್ದ ಮೂವರು ಬೇಟೆಗಾರರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕಾಶ್(50), ಕುಬೇರ(34), ರಾಕೇಶ್(27) ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 13 ನಾಡಬಾಂಬ್, 1 ಬೈಕ್ ಜಪ್ತಿ ಮಾಡಲಾಗಿದೆ. ಬಂಧಿತರನ್ನ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಆರೋಪಿಗಳು ಪೊಲೀಸ್​ ವಶಕ್ಕೆ

ಪ್ಯಾಕೆಟ್​​ನಲ್ಲಿ ಪೇಸ್ಟ್​​ ರೂಪದಲ್ಲಿ ಸಾಗಿಸುತ್ತಿದ್ದ ಚಿನ್ನ ಜಪ್ತಿ
ಪ್ಯಾಕೆಟ್​​ನಲ್ಲಿ ಪೇಸ್ಟ್​​ ರೂಪದಲ್ಲಿ ಸಾಗಿಸುತ್ತಿದ್ದ ಚಿನ್ನ ಜಪ್ತಿ ಮಾಡಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 1.277 ಕೆಜಿ ಚಿನ್ನ ಜಪ್ತಿ ಮಾಡಲಾಗಿದೆ.  ಏರ್​​ಪೋರ್ಟ್​​ನಲ್ಲಿ ಕಸ್ಟಮ್ಸ್​ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಯಿತು.

ದುಬೈನಿಂದ ಪ್ಯಾಕೆಟ್​​ನಲ್ಲಿ ಪೇಸ್ಟ್​​ ರೂಪದಲ್ಲಿ ರವಾನಿಸಲಾಗಿತ್ತು. ಅಧಿಕಾರಿಗಳ ಪರಿಶೀಲನೆ ವೇಳೆ ಚಿನ್ನ ಪತ್ತೆಯಾಗಿದೆ. ಸುಮಾರು 58.94 ಲಕ್ಷ ರೂ. ಮೌಲ್ಯದ 1.277 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ಕಸ್ಟಮ್ಸ್ ಅಧಿಕಾರಿಗಳ ತನಿಖೆ ನಡೆಸುತ್ತಿದ್ದಾರೆ.

ಜಪ್ತಿ ಮಾಡಲಾದ ಚಿನ್ನ

ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಲ್ಲಿ ಮತ್ತೆ ಭಾರಿ ಶಬ್ದ
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಲ್ಲಿ ಮತ್ತೆ ಭಾರಿ ಶಬ್ದ ಕೇಳಿಬಂದಿದೆ. ಭಾರಿ ಶಬ್ದದಿಂದ ಗ್ರಾಮದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ರಾತ್ರಿ 8.20ರ ಸುಮಾರಿಗೆ ಭಾರಿ ಶಬ್ದ ಕೇಳಿ ಬಂದಿದೆ. ಭಾರಿ ಶಬ್ದಕ್ಕೆ ಹೆದರಿ ನಿವಾಸಿಗಳು ಮನೆಯಿಂದ ಹೊರಬಂದರು.

ಅಂದ ಹಾಗೆ, ಫೆಬ್ರವರಿ ತಿಂಗಳಲ್ಲಿ 3 ಬಾರಿ ಶಬ್ದ ಕೇಳಿಸಿದ್ದ ಬಗ್ಗೆ ಮಾಹಿತಿ ಇದೆ. ಇದೀಗ ಮತ್ತೆ ಭೂಮಿಯಿಂದ ಭಾರಿ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಗಡಿಕೇಶ್ವರ ಗ್ರಾಮಸ್ಥರು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ.

ಇದನ್ನೂ ಓದಿ: ನಾಳೆ ಎಲೆಕ್ಷನ್​ ನಡೆದ್ರೂ ನೂರಕ್ಕೆ ಇನ್ನೂರರಷ್ಟು ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತೆ -ಸಿದ್ದರಾಮಯ್ಯ ಚಾಲೆಂಜ್​

Published On - 10:08 pm, Tue, 9 March 21