ನಾಳೆ ಎಲೆಕ್ಷನ್ ನಡೆದ್ರೂ ನೂರಕ್ಕೆ ಇನ್ನೂರರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ -ಸಿದ್ದರಾಮಯ್ಯ ಚಾಲೆಂಜ್
ನಾಳೆಯೇ ಚುನಾವಣೆಗೆ ಹೋದರೂ ನಾವು ಗೆಲ್ಲುತ್ತೇವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ನೂರಕ್ಕೆ ಇನ್ನೂರರಷ್ಟು ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಬೆಂಗಳೂರು: ಅಶೋಕ್ ಮನಗೂಳಿ ಷರತ್ತಿಲ್ಲದೇ ಕಾಂಗ್ರೆಸ್ ಸೇರಿದ್ದಾರೆ ಎಂದು ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಕೆಲವು ದಿನಗಳ ಹಿಂದೆ ಅವರ ತಂದೆ ನನ್ನ ಭೇಟಿಯಾಗಿದ್ರು. ನಾನು ಜೆಡಿಎಸ್ನಲ್ಲಿ ಶಾಸಕನಾಗಿದ್ದೇನೆ, ನಾನು ಬರಲ್ಲ. ನಾನು ಕಾಂಗ್ರೆಸ್ ಪಕ್ಷಕ್ಕೆ ಬರುವುದಕ್ಕೆ ಆಗಲ್ಲ. ನನ್ನ ಮಗನನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದಿದ್ರು. ಸ್ಥಳೀಯರ ಜೊತೆ ಚರ್ಚಿಸಿ ಪಕ್ಷ ಸೇರಿಕೊಳ್ಳಿ ಎಂದಿದ್ದೆ. ಇವತ್ತು ಅಶೋಕ್ ಮನಗೂಳಿ ಕಾಂಗ್ರೆಸ್ ಸೇರಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಈಗ ಅವರ ಸೇರ್ಪಡೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಹೇಳಿದರು.
ಅಂತೆಯೇ, ಇಂದು ಮಾಜಿ ಸಚಿವ ದಿ.ಮನಗೂಳಿ ಪುತ್ರ ಆಶೋಕ್ ಮನಗೂಳಿ ಕಾಂಗ್ರೆಸ್ಗೆ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಮ್ಮುಖದಲ್ಲಿ ಸೇರ್ಪಡೆಯಾದರು. ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಅಭ್ಯರ್ಥಿಯ ಕೊರತೆಯಿರುವ ಹಿನ್ನೆಲೆಯಲ್ಲಿ ಆಶೋಕ್ಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಹುತೇಕ ಪಕ್ಕಾ ಎಂಬ ಮಾಹಿತಿ ಸಿಕ್ಕಿದೆ.
‘ನಾಳೆಯೇ ಚುನಾವಣೆಗೆ ಹೋದರೂ ನಾವು ಗೆಲ್ಲುತ್ತೇವೆ’ ನಾಳೆಯೇ ಚುನಾವಣೆಗೆ ಹೋದರೂ ನಾವು ಗೆಲ್ಲುತ್ತೇವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ನೂರಕ್ಕೆ ಇನ್ನೂರರಷ್ಟು ನಾವು ಅಧಿಕಾರಕ್ಕೆ ಬರುತ್ತೇವೆ. ಅಧಿಕಾರಕ್ಕೆ ಬಂದಾಗ ನಿಮಗೂ ಸ್ಥಾನಮಾನ ಕೊಡ್ತೇವೆ. ಈಗ ಎಲ್ಲರೂ ಒಟ್ಟಾಗಿ ಪಕ್ಷಕ್ಕಾಗಿ ಕೆಲಸವನ್ನು ಮಾಡಿ. ಕೆಲಸ ಮಾಡಿದ್ರೆ ನಾವು ಅಧಿಕಾರಕ್ಕೆ ಬರೋದು ಖಚಿತ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ‘CD ಪ್ರಕರಣದಲ್ಲಿ 9 ಜನರು ಭಾಗಿಯಾಗಿದ್ದಾರೆ; ರಾಜಕೀಯ ಹೋದ್ರೂ ತೊಂದರೆಯಿಲ್ಲ.. ಇವರಿಗೆ ತಕ್ಕ ಶಾಸ್ತಿ ಮಾಡ್ತೇವೆ’