AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲ ಪ್ರವಾಸಿ ಮಂದಿರದಲ್ಲಿ PWD ಅಧಿಕಾರಿ ಆತ್ಮಹತ್ಯೆ, ಕಚೇರಿಗೆ ಸಂಬಂಧಪಟ್ಟ ಫೈಲ್ ಮಿಸ್ ಆಗಿದ್ದಕ್ಕೆ ಸಾವಿನ ಹಾದಿ ಹಿಡಿದ್ರಾ?

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಶಿವಗಂಗೆ ಪ್ರವಾಸಿ ಮಂದಿರದಲ್ಲಿ ಪಿಡಬ್ಲ್ಯೂಡಿ ಅಧಿಕಾರಿಯೊಬ್ಬರು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೂಲತಃ ತುಮಕೂರು ಜಿಲ್ಲೆ ಮಧುಗಿರಿಯ ಲಕ್ಷ್ಮೀನರಸಿಂಹಯ್ಯ(56) ಕಚೇರಿಗೆ ಸಂಬಂಧಪಟ್ಟ ಫೈಲ್ ಮಿಸ್ಸಿಂಗ್ ಆದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನೆಲಮಂಗಲ ಪ್ರವಾಸಿ ಮಂದಿರದಲ್ಲಿ PWD ಅಧಿಕಾರಿ ಆತ್ಮಹತ್ಯೆ, ಕಚೇರಿಗೆ ಸಂಬಂಧಪಟ್ಟ ಫೈಲ್ ಮಿಸ್ ಆಗಿದ್ದಕ್ಕೆ ಸಾವಿನ ಹಾದಿ ಹಿಡಿದ್ರಾ?
ಲಕ್ಷ್ಮೀನರಸಿಂಹಯ್ಯ
TV9 Web
| Edited By: |

Updated on:Jan 27, 2023 | 5:34 PM

Share

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಶಿವಗಂಗೆ ಪ್ರವಾಸಿ ಮಂದಿರದಲ್ಲಿ ಪಿಡಬ್ಲ್ಯೂಡಿ ಅಧಿಕಾರಿಯೊಬ್ಬರು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೂಲತಃ ತುಮಕೂರು ಜಿಲ್ಲೆ ಮಧುಗಿರಿಯ ಲಕ್ಷ್ಮೀನರಸಿಂಹಯ್ಯ(56) ಕಚೇರಿಗೆ ಸಂಬಂಧಪಟ್ಟ ಫೈಲ್ ಮಿಸ್ಸಿಂಗ್ ಆದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ದಾಬಸ್‌ಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಧುಗಿರಿಯಲ್ಲಿ ಎಫ್ ಡಿ ಎ ಆಗಿ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮೀನರಸಿಂಹಯ್ಯ. ಕಚೇರಿಗೆ ಸಂಬಂಧಪಟ್ಟ ಫೈಲ್ ಮಿಸ್ಸಿಂಗ್ ಆಗಿರುವ ಒತ್ತಡದಿಂದ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಸೂಕ್ತ ತನಿಖೆಯ ನಂತರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬರಲಿದೆ.

ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್​​​​​​ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಆರ್​.ಆರ್​.ನಗರ ಬಿಎಂಟಿಸಿ ಘಟಕ-12ರಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಂಗನಾಥ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೇಲಧಿಕಾರಿಗಳು ಡ್ಯೂಟಿ ನೀಡದೆ ವಾಪಸ್ ಕಳಿಸುತ್ತಿದ್ದ ಆರೋಪ ಹಾಗೂ ಅಧಿಕಾರಿಗಳ ಕಿರುಕುಳದಿಂದಾಗಿ ಬೇಸತ್ತು ಹೋಗಿದ್ದೇನೆ ಎಂದು ಡೆತ್​ನೋಟ್​​​ನಲ್ಲಿ ಬರೆದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಎಂಟಿಸಿ ಮೇಲಧಿಕಾರಿಗಳಿಂದ ಕಿರುಕುಳ ಇಂತಹ ಆರೋಪಗಳು ಇದು ಮೊದಲೇನಲ್ಲಾ, ಇಂತಹ ಆರೋಪ ಪ್ರಕರಣಗಳು ಈಗೀಗಾ ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ಲಂಚ ಪಡೆದುಕೊಂಡಿರುವ ಆರೋಪದಡಿ ಮನ ನೊಂದ ಹೊಳೆಬಸಪ್ಪ, ವಿಭಾಗದಲ್ಲಿನ ಲಂಚಾವತಾರದ ಬಗ್ಗೆ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು.

ಮರಕ್ಕೆ ಕಟ್ಟಿಹಾಕಿ ತಲೆಯಲ್ಲಿ ರಕ್ತ ಸುರಿಯುವಂತೆ ಹಲ್ಲೆ ನಡೆಸಿರೊ ವೀಡಿಯೋ ವೈರಲ್

ಹಾಸನ: ವ್ಯಕ್ತಿಯೊಬ್ಬನಿಗೆ ಮನಬಂದಂತೆ ಥಳಿಸಿರುವ ಘಟನೆ ಬೇಲೂರು ತಾಲ್ಲೂಕಿನ ಅರೇಹಳ್ಳಿ ಸಮೀಪದ ಬೆಳ್ಳಾವರ ಗ್ರಾಮದಲ್ಲಿ ನಡೆದಿದೆ. ಕಾಫಿ ಕದಿಯಲು ಬಂದಿದ್ದ, ಈ ಹಿಂದೆಯೂ ಇದೇ ರೀತಿ ಬಂದಿದ್ದ, ಈ ಸಲ ಸಿಕ್ಕಿ ಬಿದ್ದಿದ್ದಾನೆ ಎಂದು ಆರೋಪಿಸಲಾಗಿದೆ.

ಎಷ್ಟೇ ಗೋಳಾಡಿ ಗೋಗರೆದರೂ ಬಿಡದೆ ಮನಬಂದಂತೆ ಥಳಿಸಿದ್ದಾರೆ. ಐವರು ಮರಕ್ಕೆ ಕಟ್ಟಿಹಾಕಿ ತಲೆಯಲ್ಲಿ ರಕ್ತ ಸುರಿಯುವಂತೆ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್ ಆಗಿದೆ. ಕಾಫಿ ಕದಿಯಲು ಬಂದಿದ್ದ ಎಂದು ಆರೋಪಿಸುತ್ತಿದ್ದರೂ ಕೂಡ ಪೊಲೀಸರಿಗೆ ದೂರು ನೀಡದೆ ಮನ ಬಂದಂತೆ ಥಳಿಸಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದಲ್ಲದೆ ಇನ್ನೊಮ್ಮೆ ತಪ್ಪು ಮಾಡೊಲ್ಲ ಎಂದು ಕ್ಷಮೆ ಕೇಳಿದರೂ ಬಿಡದೆ ಮನಬಂದಂತೆ ಥಳಿಸಿದ್ದಾರೆ ಆರೋಪಿಸಲಾಗಿದೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 5:02 pm, Fri, 27 January 23

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು