ರಾಯಚೂರು: ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಮೇಲಿಂದ ಕೆಳಕ್ಕೆ ಬಿದ್ದ ಮೂವರು ಕಾರ್ಮಿಕರ (labourers) ಸ್ಥತಿ ಗಂಭೀರವಾಗಿರುವಂತಹ ಘಟನೆ ಜಿಲ್ಲೆಯ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅವಘಡ ಸಂಭವಿಸಿದೆ. ಸೋನುಕುಮಾರ್(28), ಮಹದೇವ(32), ರಾಮಪ್ರೀತ್(29) ಗಂಭೀರವಾಗಿ ಗಾಯಗೊಂಡ ಕಾರ್ಮಿಕರು. ಆರ್ಟಿಪಿಎಸ್ನ 1ನೇ ಘಟಕದ 50 ಮೀಟರ್ ಎತ್ತರದಲ್ಲಿ ಸ್ಕ್ರ್ಯಾಬ್ ಕಟಿಂಗ್ ಕೆಲಸ ಮಾಡುವಾಗ ಆಯತಪ್ಪಿ ಕೆಳಗೆಬಿದ್ದು ದುರ್ಘಟನೆ ಸಂಭಸಿದೆ. ಸದ್ಯ ಗಾಯಾಳುಗಳನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಶಕ್ತಿನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು. ಇನ್ನು ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ 7ನೇ ಘಟಕದ ಎಚ್. ಟಿ. 6.6 ಕೆ. ವಿ. ಪ್ಯಾನಲ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡತ್ತು. ಬೆಂಕಿಯಿಂದ 210ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನ ಘಟಕದ ಯು. ಸಿ.ಬಿ. ಸ್ವಿಚ್ ಗೇರ್ ಸುಟ್ಟು ಕರಕಲಾಗಿದ್ದು, ಒಂದು ವಾರ ಕಾಲ ವಿದ್ಯುತ್ ಉತ್ಪಾದನೆಯನ್ನ ಸ್ಥಗಿತ ಮಾಡಲಾಗಿದೆ. ಈ ಕುರಿತು ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ಭವಾನಿ ನಗರದ ಜನನಿಬಿಡ ಪ್ರದೇಶದಲ್ಲಿ ನಡೆದಿದೆ. ಪ್ರಶಾಂತ್ ಕುಂಬಾರ್(30) ಹತ್ಯೆಗೊಳಗಾದ ಯುವಕ. ಮಂಜುನಾಥ ಸ್ವಾಮಿ ಎಂಬಾತನಿಂದ ಕೃತ್ಯವೆಸಲಾಗಿದೆ. ಹತ್ಯೆಯಾದ ಪ್ರಶಾಂತ್ ಕುಂಬಾರ್ ಚೆನ್ನವೀರ ನಗರದ ನಿವಾಸಿ ಎಂದು ತಿಳಿದುಬಂದಿದೆ. ಹಳೇ ವೈಷಮ್ಯದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಕಮಿಷನರ್ ಡಾ.ವೈ.ಎಸ್.ರವಿಕುಮಾರ್ ಭೇಟಿ ನೀಡಿ ಪರಶೀಲನೆ ಮಾಡಿದರು. ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಮೈಸೂರು: ರಕ್ಷಿಸಬೇಕಾದವಳೇ ಸುಪಾರಿ ಕೊಟ್ಟು ಕೊಲ್ಲಿಸಿದ್ಲಾ ಲೇಡಿ ಪೊಲೀಸ್ ಕಾನ್ಸ್ಟೇಬಲ್?
ಬೆಂಗಳೂರು: ನಗರದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವತಿ ಶವ ಪತ್ತೆಯಾಗಿರುವಂತಹ ಘಟನೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. 23 ವರ್ಷದ ಯುವತಿ ಶವ ಎನ್ನಲಾಗುತ್ತಿದೆ. ಗೂಡ್ಸ್ ಪ್ಲಾಟ್ಫಾರ್ಮ್ನ ಬಾಕ್ಸ್ವೊಂದರಲ್ಲಿ ಶವ ಪತ್ತೆಯಾಗಿದ್ದು, ಪ್ಲಾಸ್ಟಿಕ್ ಕವರ್ನಲ್ಲಿ ಶವ ಇಟ್ಟು ದುಷ್ಕರ್ಮಿಗಳು ಸೀಲ್ ಮಾಡಿದ್ದಾರೆ. ವಾಸನೆ ಬಂದ ಹಿನ್ನೆಲೆ ಪರಿಶೀಲಿಸಿದಾಗ ಯುವತಿ ಶವ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಕಾಲೇಜೊಂದರಲ್ಲಿ ಹಾಡಹಗಲೇ ಯುವತಿಗೆ ಚಾಕು ಇರಿದು ಕೊಲೆ ಮಾಡಿದ ಯುವಕ: ಪ್ರೀತಿ ಪ್ರೇಮದ ಶಂಕೆ
ಕಳೆದ ಒಂದು ತಿಂಗಳಲ್ಲಿ ಎರಡನೇ ಮೃತದೇಹ ಪತ್ತೆಯಾಗಿದ್ದು, ಇದೇ ಮಾದರಿಯಲ್ಲಿ ಕಳೆದ ಡಿಸೆಂಬರ್ 6 ರಂದು ರೈಲ್ವೆ ನಿಲ್ದಾಣದಲ್ಲೂ ಮೃತದೇಹ ಪತ್ತೆಯಾಗಿತ್ತು. ಕೆ.ಜಿಎಫ್ನಿಂದ ಬೆಂಗಳೂರೊಗೆ ಬರುತ್ತಿದ್ದ ರೈಲಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆ ದೇಹ ಪತ್ತೆಯಾಗಿತ್ತು. ಬೆಡ್ ಶೀಟ್, ಬಟ್ಟೆಗಳ ನಡುವೆ ದೇಹ ತುರುಕಲಾಗಿತ್ತು. ಮಹಿಳೆಯ ಯಾವುದೇ ಗುರುತುಗಳು ಪತ್ತೆಯಾಗಿರಲಿಲ್ಲ. ರೈಲು ಖಾಲಿ ಆಗಿದ್ರು ಚೀಲವನ್ನು ಯಾರು ತೆಗೆದುಕೊಳ್ಳದೆ ಇದ್ದಾಗ ಅನುಮಾನ ಬಂದು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಪರಿಶೀಲನೆ ಮಾಡಿದಾಗ ಮೃತ ದೇಹವಿರುವುದು ಪತ್ತೆಯಾಗಿತ್ತು. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಎರಡು ಪ್ರಕರಣಕ್ಕೆ ಸಾಮ್ಯತೆ ಇದೆ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.