ಭಾರತೀಯ ಮೂಲದ ಅಮೇರಿಕನ್ ಧರ್ಮೇಶ್ ಪಟೇಲ್ ಉದ್ದೇಶಪೂರ್ವಕವಾಗಿ ಕಾರನ್ನು ಪ್ರಪಾತಕ್ಕೆ ಉರುಳಿಸಿ ಹೆಂಡತಿ ಮಕ್ಕಳನ್ನು ಕೊಲ್ಲಲು ಪ್ರಯತ್ನಿಸಿದನೇ?
ಕ್ಯಾಲಿಫೋರ್ನಿಯ ಹೈವೇ ಪೆಟ್ರೋಲ್ ನೀಡಿರುವ ಹೇಳಿಕೆಯ ಪ್ರಕಾರ ಧರ್ಮೇಶ್, ಅವನ ಹೆಂಡತಿ ಮತ್ತು ಮಕ್ಕಳು ಬದುಕುಳಿದಿದ್ದಾರೆ ಮತ್ತು ಅವರನ್ನು ಸೋಮವಾರದಂದು ಸ್ಯಾನ್ ಮಟಿಯೀ ಕೌಂಟಿಯಲ್ಲಿರುವ ಡೆವಿಲ್ಸ್ ಸ್ಲೈಡ್ ನಿಂದ ರಕ್ಷಿಸಲಾಗಿದೆ.
ವಾಷಿಂಗ್ಟನ್: ಯುಎಸ್ ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ ತನ್ನ ಟೆಸ್ಲಾ (Tesla) ಕಾರಲ್ಲಿ ಪ್ರಯಾಣಿಸುತ್ತಿದ್ದ ಪತ್ನಿ ಮತ್ತು ತನ್ನ ಇಬ್ಬರು ಮಕ್ಕಳನ್ನು ಉದ್ದೇಶಪೂರ್ವಕವಾಗಿ ಪ್ರಪಾತಕ್ಕೆ ಡ್ರೈವ್ ಮಾಡುವ ಮೂಲಕ ಅವರನ್ನು ಕೊಲ್ಲಲು ಯತ್ನಿಸಿದ ಆರೋಪದಲ್ಲಿ ಭಾರತೀಯ ಮೂಲದ 41-ವರ್ಷ-ವಯಸ್ಸಿನ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ಕ್ಯಾಲಿಫೋರ್ನಿಯ ಪಸಡೆನಾದ ನಿವಾಸಿ ಧರ್ಮೇಶ್ ಎ ಪಟೇಲ್ (Dharmesh A Patel) ಎಂದು ಗುರುತಿಸಲಾಗಿದ್ದು ಅವನನ್ನು ಸ್ಯಾನ್ ಮಟಿಯೀ ಕೌಂಟಿ (San Mateo County) ಜೈಲಿಗೆ ಕಳಿಸಲಾಗುವುದೆಂದು ವರದಿಯಾಗಿದೆ. ತೀವ್ರವಾಗಿ ಗಾಯಾಗೊಂಡಿರುವ ಧರ್ಮೇಶ್ ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಲ್ಲಿಂದ ಡಿಸ್ಚಾರ್ಜ್ ಆದ ಕೂಡಲೇ ಜೈಲಿಗೆ ತೆಗೆದುಕೊಂಡು ಹೋಗಲಾಗುವುದು ಅಂತ ಹೇಳಲಾಗಿದೆ.
ಕ್ಯಾಲಿಫೋರ್ನಿಯ ಹೈವೇ ಪೆಟ್ರೋಲ್ ನೀಡಿರುವ ಹೇಳಿಕೆಯ ಪ್ರಕಾರ ಧರ್ಮೇಶ್, ಅವನ ಹೆಂಡತಿ ಮತ್ತು ಮಕ್ಕಳು ಬದುಕುಳಿದಿದ್ದಾರೆ ಮತ್ತು ಅವರನ್ನು ಸೋಮವಾರದಂದು ಸ್ಯಾನ್ ಮಟಿಯೀ ಕೌಂಟಿಯಲ್ಲಿರುವ ಡೆವಿಲ್ಸ್ ಸ್ಲೈಡ್ ನಿಂದ ರಕ್ಷಿಸಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಚಾಣಾಕ್ಷನಿಗೆ ಶಾಕ್, ಸೈಬರ್ ಕ್ರೈಂ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಆದೇಶ
ಅಗ್ನಿಶಾಮಕ ದಳದ ಸಿಬ್ಬಂದಿಯು ಹಗ್ಗದ ಸಹಾಯದಿಂದ ಕಂದಕಕ್ಕೆ ಇಳಿದು ಇಬ್ಬರು ಮಕ್ಕಳು; 4-ವರ್ಷ-ವಯಸ್ಸಿನ ಹೆಣ್ಣು ಮಗು ಮತ್ತು 9-ವರ್ಷ-ವಯಸ್ಸಿನ ಬಾಲಕನನ್ನು ರಕ್ಷಿಸಿದ್ದಾರೆ. ಅಮೇರಿಕನ್ ಬ್ರಾಡ್ ಕಾಸ್ಟ್ ಟೆಲಿವಿಷನ್ ನೆಟ್ವರ್ಕ್ ಎನ್ ಬಿ ಸಿ ನ್ಯೂಸ್ ವರದಿ ಮಾಡಿರುವ ಪ್ರಕಾರ ವಯಸ್ಕರನ್ನು ಹೆಲಕಾಪ್ಟರ್ ಮೂಲಕ ಮೇಲೆತ್ತಲಾಯಿತು.
This afternoon, deputies responded to a solo vehicle over the side of Hwy 1 south of the Tom Lantos tunnel. Two adults suffered non-life threatening injuries and two children were unharmed. Tremendous collaborative effort btwn SMSO, @CHP_GoldenGate and @calfireSCU pic.twitter.com/sVyKp6LSrc
— San Mateo County S.O (@SMCSheriff) January 3, 2023
ಅವರೆಲ್ಲ ಬದುಕುಳಿದಿರುವುದು ಮತ್ತು ರಕ್ಷಿಸಿದ್ದು ಪವಾಡವೇ ಸರಿ ಎಂದು ನ್ಯಾ ಯಾರ್ಕ್ ಟೈಮ್ಸ್ ವರದಿ ಮಾಡಿದೆ. ಟೆಸ್ಲಾ ಕಾರು 250ರಿಂದ 300 ಅಡಿ ಆಳದ ಪ್ರಪಾತಕ್ಕೆ ಬಿದ್ದಿತ್ತು ಎಂದು ಹೈ ವೇ ಪೆಟ್ರೋಲ್ ಹೇಳಿದೆ.
‘ನಮಗೆ ಲಭ್ಯವಾಗಿರುವ ಸಾಕ್ಷ್ಯಗಳ ಪ್ರಕಾರ ಮತ್ತು ಆಧಿಕಾರಿಗಳು ತನಿಖೆಯ ಮೂಲಕ ಕಂಡುಕೊಂಡಿರುವಂತೆ, ಕಾರನ್ನು ಉದ್ದೇಶಪೂರ್ವಕವಾಗಿ ಪ್ರಪಾತಕ್ಕೆ ಉರುಳಿಸಲಾಗಿದೆ,’ ಎಂದು ಹೇಳಿಕೆಯಲ್ಲಿ ಸ್ಯಾನ್ ಹೈವೇ ಪೆಟ್ರೋಲ್ ತಿಳಿಸಿದೆ. ಕ್ಯಾಲಿಫೋರ್ನಿಯ ಡಿಪಾರ್ಟ್ಮೆಂಟ್ ಆಫ್ ಫಾರೆಸ್ಟ್ರಿ ಮತ್ತು ಫೈರ್ ಪ್ರೊಟೆಕ್ಷನ್‌ನ ಕಮಾಂಡರ್ ಬ್ರಿಯಾನ್ ಪೊಟೆಂಗರ್, ಅಪಘಾತವನ್ನು ಗಮನಿಸಿದ ಪ್ರತ್ಯಕ್ಷದರ್ಶಿಗಳು 911 ಗೆ ಕರೆ ಮಾಡಿದ್ದಾರೆ ಎಂದು ಹೇಳಿದರು.
‘ಇಂಥ ಕಡಿದಾದ ಪ್ರಪಾತದಲ್ಲಿ ಬಿದ್ದವರು ಬದುಕುಳಿಯುವ ಸಾಧ್ಯತೆ ‘ವಿರಾಳಾತಿ ವಿರಳ,’ ಪ್ರಾಯಶಃ ಮಕ್ಕಳ ಕಾರ್ ಸೀಟುಗಳು ಅವರ ಜೀವ ಉಳಿಸಿರಬಹುದು,’ ಎಂದು ಅವರು ಹೇಳಿದ್ದಾರೆ.
‘ಕಾರಲ್ಲಿ ಬದುಕುಳಿದ ಜನರನ್ನು ನೋಡಿ ನಾವು ಶಾಕ್ ಗೊಳಗಾದೆವು. ಅದರಲ್ಲಿದ್ದವರು ಬದುಕಿರುತ್ತಾರೆ ಎಂಬ ದೂರದ ಆಸೆಯೂ ನಮಗಿರಲಿಲ್ಲ,’ ಎಂದು ಬ್ರಿಯಾನ್ ಪೊಟೆಂಗರ್ ಹೇಳಿದ್ದಾರೆ. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರು ಹೇಳಿದ್ದಾರೆ.
ಮೂವರ ಕೊಲೆ ಯತ್ನದ ಚಾರ್ಜ್ ಗಳನ್ನು ಧರ್ಮೇಶ್ ವಿರುದ್ಧ ವಿಧಿಸಲಾಗುವುದು ಎಂದು ಹೈವೇ ಪೆಟ್ರೋಲ್ ಗೋಲ್ಡನ್ ಗೇಟ್ ಡಿವಿಜನ್ ನ ಬಾತ್ಮೀದಾರ ಆಂಡ್ರ್ಯೂ ಬಾರ್ಕ್ಲೇ ಹೇಳಿದ್ದಾರೆ.
ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ