Rajasthan Crime: ವಾಹನವೊಂದರಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆ
ಹರ್ಯಾಣದ ಭಿವಾನಿ ಜಿಲ್ಲೆಯ ವಾಹನವೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಎರಡು ಶವಗಳು ಪತ್ತೆಯಾಗಿದೆ. ಮೃತರನ್ನು ನಾಸಿರ್ (25) ಮತ್ತು ಜುನೈದ್ ಅಲಿಯಾಸ್ ಜುನಾ (35) ಎಂದು ಗುರುತಿಸಲಾಗಿದೆ.
ಹರ್ಯಾಣದ ಭಿವಾನಿ ಜಿಲ್ಲೆಯ ವಾಹನವೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಎರಡು ಶವಗಳು ಪತ್ತೆಯಾಗಿದೆ. ಮೃತರನ್ನು ನಾಸಿರ್ (25) ಮತ್ತು ಜುನೈದ್ ಅಲಿಯಾಸ್ ಜುನಾ (35) ಎಂದು ಗುರುತಿಸಲಾಗಿದೆ. ಇಬ್ಬರೂ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಪಹಾರಿ ತಹಸಿಲ್‌ನ ಘಾಟ್ಮೀಕಾ ಗ್ರಾಮದ ನಿವಾಸಿಗಳು ಎಂದು ಲೋಹರು (ಭಿವಾನಿ) ಉಪ ಪೊಲೀಸ್ ವರಿಷ್ಠಾಧಿಕಾರಿ ಜಗತ್ ಸಿಂಗ್ ಅವರು ತಿಳಿಸಿದ್ದಾರೆ. ಬುಧವಾರ ಇಬ್ಬರನ್ನು ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೋಹರು ಪ್ರದೇಶದಲ್ಲಿ ಸುಟ್ಟ ವಾಹನದ ಬಗ್ಗೆ ಗ್ರಾಮಸ್ಥರೊಬ್ಬರು ಗುರುವಾರ ಪೊಲೀಸರಿಗೆ ಕರೆ ಮಾಡಿದ್ದಾರೆ ಎಂದು ಅವರು ಹೇಳಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ನಾಲ್ಕು ಚಕ್ರದ ವಾಹನದಲ್ಲಿ ಎರಡು ಸುಟ್ಟ ಮೃತದೇಹಗಳು ಪತ್ತೆಯಾಗಿವೆ. ಅಪಹರಣಕಾರರು ಮೊದಲು ಇಬ್ಬರನ್ನೂ ಥಳಿಸಿ, ನಂತರ ಅಪಹರಿಸಿ, ವಾಹನವನ್ನು ತೆಗೆದುಕೊಂಡು ಹೋಗಿ ಸುಟ್ಟುಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಮೈಸೂರು: ಕಾಲೇಜಿನಲ್ಲಿ ಪ್ರಜ್ಞೆತಪ್ಪಿ ಬಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
ಮೃತ ವ್ಯಕ್ತಿಗಳ ಪರಿಚಯವಿರುವ ವ್ಯಕ್ತಿಗೆ ವಾಹನ ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನದ ಚಾಸಿಸ್ ಸಂಖ್ಯೆಯಿಂದ ವಾಹನದ ಮಾಲೀಕರನ್ನು ಅಸೀನ್ ಖಾನ್ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.
ಜುನೈದ್ ಮತ್ತು ನಾಸಿರ್ ಇಬ್ಬರೂ ಘಾಟ್ಮಿಕ ಗ್ರಾಮದ ನಿವಾಸಿಗಳು. ಇಬ್ಬರಿಗೂ ಮದುವೆಯಾಗಿತ್ತು, ಜುನೈದ್‌ಗೆ ಆರು ಮಕ್ಕಳಿದ್ದರೆ, ನಾಸಿರ್‌ಗೆ ಮಕ್ಕಳಿರಲಿಲ್ಲ. ಇಬ್ಬರೂ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬೊಲೆರೊ ಕಾರು ನಾಸಿರ್ ಅವರ ಸಂಬಂಧಿಗೆ ಸೇರಿದ್ದು ಎನ್ನಲಾಗಿದೆ.
ಸಂತ್ರಸ್ತರನ್ನು ಅಪಹರಣಕಾರರು ಸ್ಥಳಕ್ಕೆ ಕರೆತಂದರು ಮತ್ತು ಮಧ್ಯರಾತ್ರಿಯ ನಂತರ ಬೆಂಕಿ ಹಚ್ಚಿದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಕುಟುಂಬಸ್ಥರನ್ನು ಕರೆಸಿ ವಾಹನವನ್ನು ಗುರುತಿಸಿ, ಕಾನೂನು ಕ್ರಮಗಳ ನಂತರ ಮೃತದೇಹಗಳನ್ನು ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ 365 ಸೇರಿದಂತೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ರಾಜಸ್ಥಾನದ ಗೋಪಾಲ್ ಗಢ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:58 am, Fri, 17 February 23