ರಾಮನಗರ ಮಾರಕಾಸ್ತ್ರಗಳಿಂದ ಹಲ್ಲೆ ಪ್ರಕರಣ: ಆರೋಪಿಗಳಿಗೆ ಪೊಲೀಸ್​ ಗುಂಡೇಟು

ಕಳೆದ ಸೋಮವಾರ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಾಳಗಾಳು ಗ್ರಾಮಕ್ಕೆ ನುಗ್ಗಿ ಮಾರಕಾಸ್ತ್ರಗಳಿಂದ ಮಹಿಳೆ ಸೇರಿದಂತೆ ಏಳು ಜನರ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳ ಮೇಲೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ರಾಮನಗರ ಮಾರಕಾಸ್ತ್ರಗಳಿಂದ ಹಲ್ಲೆ ಪ್ರಕರಣ: ಆರೋಪಿಗಳಿಗೆ ಪೊಲೀಸ್​ ಗುಂಡೇಟು
ಆರೋಪಿಗಳು
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ Edited By: ವಿವೇಕ ಬಿರಾದಾರ

Updated on: Jul 28, 2024 | 11:45 AM

ರಾಮನಗರ, ಜುಲೈ 28: ಮಹಿಳೆ ಸೇರಿ ಏಳು ಜನರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ ಆರೋಪಿಗಳಿಗೆ ಪೊಲೀಸರು (Police) ಗುಂಡೇಟಿನ ರುಚಿ ತೋರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಹರ್ಷ ಅಲಿಯಾಸ್ ಕೈಮಾ (36), ಕರುಣೇಶ್ ಅಲಿಯಾಸ್ ಖಣಿ (26) ಕಾಲಿಗೆ ಗುಂಡೇಟು. ಆರೋಪಿಗಳು ಬೆಂಗಳೂರು (Bengaluru) ಹೊರವಲಯದ ಕಗ್ಗಲೀಪುರದಲ್ಲಿ ಅಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಖಚಿತ ಮಾಹಿತಿ ಮೇರೆಗೆ ಕನಕಪುರ ಟೌನ್ ಪೊಲೀಸ್ ಠಾಣೆ ಪೊಲೀಸರು ಇಂದು (ಜು.28) ಬೆಳ್ಳಂ ಬೆಳಿಗ್ಗೆ ಆರೋಪಿಗಳನ್ನು ವಶಕ್ಕೆ ಪಡೆಯಲು ಹೋಗಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದರು.

ಆತ್ಮರಕ್ಷಣೆಗಾಗಿ ಪಿಎಸ್​ಐಗಳಾದ ಕೃಷ್ಣಪ್ಪ, ಮನೋಹರ್ ಅವರು ಆರೋಪಿಗಳ ಕಾಲಿಗೆ ಗುಂಡು ಹೊಡೆದು, ವಶಕ್ಕೆ ಪಡೆದುಕೊಂಡರು. ಘಟನೆಯಲ್ಲಿ ಪೊಲೀಸ್​ ಸಿಬ್ಬಂದಿ ರಾಜಶೇಖರ್, ಶಿವಶಂಕರ್ ಎಂಬುವರಿಗೆ ಗಾಯಗಳಾಗಿವೆ. ಆರೋಪಿಗಳು ಮತ್ತು ಪೊಲೀಸ್​ ಸಿಬ್ಬಂದಿಯನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಎರಡನೇ ಪತ್ನಿಗೆ ಮತಾಂತರವಾಗುವಂತೆ ಕಿರುಕುಳ ನೀಡಿದ ಮುಜಾಹಿದ್ ಖಾನ್ ವಿರುದ್ಧ ದೂರು ದಾಖಲು

ಏನಿದು ಪ್ರಕರಣ

ಕಳೆದ ಸೋಮವಾರ ಕನಕಪುರ ತಾಲೂಕಿನ ಮಾಳಗಾಳು ಗ್ರಾಮಕ್ಕೆ ರೌಡಿಶೀಟರ್ ಹರ್ಷ ಆ್ಯಂಡ್​ ಗ್ಯಾಂಗ್ ನುಗ್ಗಿ ಮಾರಕಾಸ್ತ್ರಗಳಿಂದ ಮಹಿಳೆಯರು ಸೇರಿದಂತೆ‌ 7 ಜನರ ಮೇಲೆ ಹಲ್ಲೆ ಮಾಡಿತ್ತು. ಘಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷನ ಕೈ ಕಟ್ ಆಗಿತ್ತು. ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 11:44 am, Sun, 28 July 24

ಸೈಯ್ಯದ್​ ನಿಜಾಮುದ್ದೀನ್​, ರಾಮನಗರ

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Loading...
Unable to load recommendations.
Follow Us