ಕಲಬುರಗಿ ಬಾಲಕಿಯನ್ನು ರೇಪ್‌ ಮಾಡಿ ಕೊಲೆ: 24 ಗಂಟೆಗಳಲ್ಲೇ ಆರೋಪಿಯನ್ನು ಬಂಧಿಸಿದ ಖಾಕಿಗೆ 1 ಲಕ್ಷ ರೂ. ಬಹುಮಾನ

15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಲಬುರಗಿ ಬಾಲಕಿಯನ್ನು ರೇಪ್‌ ಮಾಡಿ ಕೊಲೆ: 24 ಗಂಟೆಗಳಲ್ಲೇ ಆರೋಪಿಯನ್ನು ಬಂಧಿಸಿದ ಖಾಕಿಗೆ 1 ಲಕ್ಷ ರೂ. ಬಹುಮಾನ
Four people died due to electrocution when they went to install the pump motor in the dam kannada National News
Follow us
TV9 Web
| Updated By: ವಿವೇಕ ಬಿರಾದಾರ

Updated on:Nov 02, 2022 | 10:52 PM

ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗ್ರಾಮವೊಂದರಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ನಂತರ ಕೊಲೆ ಮಾಡಿದ ಪ್ರಕರಣವನ್ನು ಆಳಂದ ಪೊಲೀಸರು 24 ಗಂಟೆಗಳಲ್ಲಿ ಭೇದಿಸಿದ್ದಾರೆ. ನಿನ್ನೆ (ನ.1) ಮಧ್ಯಾಹ್ನ ಘಟನೆ ನಡೆದಿದೆ. ಪ್ರಕರಣವನ್ನು ಭೇದಿಸಲು ಕಲಬುರಗಿ ಎಸ್ಪಿ ಇಶಾ ಪಂತ್ ವಿಶೇಷ ತಂಡವನ್ನು ರಚಿಸಿದರು. ಈ ವಿಶೇಷ ತಂಡ ಕೆಲ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಬಾಲಕಿ ವಾಸವಿದ್ದ ಗ್ರಾಮದ 16 ವರ್ಷದ ಬಾಲಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ. ಸದ್ಯ ಕೃತ್ಯ ನಡೆಸಿದ ಆರೋಪಿಯನ್ನು ಆಳಂದ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪೊಲೀಸರು ಪ್ರಕರಣ ನಡೆದು 24 ಗಂಟೆ ಒಳಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಟಿವಿ9ನೊಂದಿಗೆ ಮಾತಾನಡಿದ ಎಸ್​​ಪಿ ಇಶಾ ಪಂತ್ ಪ್ರಕರಣ ಭೇದಿಸಿದ ಸಿಬ್ಬಂದಿಗೆ 1ರೂ ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನೂ ಶೀಘ್ರದಲ್ಲೇ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಜನರು ಫಿದಾ ಆಗಿದ್ದು, ಅಭಿನಂದನೆ ತಿಳಿಸುತ್ತಿದ್ದಾರೆ.

ಘಟನೆ ಹಿನ್ನೆಲೆ

ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗ್ರಾಮವೊಂದರಲ್ಲಿ ಇದೇ ನವಂಬರ್ 1 ರಂದು, 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಆಳಂದ ತಾಲೂಕಿನ ಗ್ರಾಮವೊದರಲ್ಲಿ ಸಂಬಂಧಿಗಳ ಮನೆಯಲ್ಲಿದ್ದ ಬಾಲಕಿ, ಗ್ರಾಮದಲ್ಲಿರುವ ಪ್ರೌಢಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದಳು. ಇದೇ ನವಂಬರ್ 1 ರಂದು, ಮಧ್ಯಾಹ್ನ 3 ಗಂಟೆ ಸಮಯದಲ್ಲಿ, ಬಹಿರ್ದೆಸೆಗೆ ಅಂತ ಗ್ರಾಮದ ಹೊರವಲಯಯಕ್ಕೆ ಬಾಲಕಿ ಹೋಗಿದ್ದಳು. ಈ ಸಂದರ್ಭದಲ್ಲಿ ಬಾಲಕಿಯನ್ನು ಕಬ್ಬಿನ ಗದ್ದೆಗೆ ಕರೆದಕೊಂಡು ಹೋಗಿ, ಬಾಲಕಿ ಮೇಲೆ ಅತ್ಯಾಚಾರ ಮಾಡಿ ನಂತರ ಆಕೆಯದ್ದೇ ವೇಲ್ ನಿಂದ ಕತ್ತು ಬಿಗಿದು ಕೊಲೆ ಮಾಡಲಾಗಿತ್ತು. ಇನ್ನು ಬಹಳ ಹೊತ್ತಾದರೂ, ಬಾಲಕಿ ಮನೆಗೆ ಬಾರದೇ ಇದ್ದಾಗ, ಬಾಲಕಿಯನ್ನು ಕುಟುಂಬದವರು ಹುಡುಕಾಡಿದ್ದಾರೆ. ಬಾಲಕಿಯ ಚಪ್ಪಲಿಗಳು ಕಬ್ಬಿನ ಗದ್ದೆಯಲ್ಲಿ ಬಿದ್ದಿರೋದನ್ನು ನೋಡಿ, ಕಬ್ಬಿನ ಗದ್ದೆಯಲ್ಲಿ ಹುಡುಕಾಡಿದಾಗ, ನಿನ್ನೆ ರಾತ್ರಿ 7 ಗಂಟೆ ಸಮಯದಲ್ಲಿ, ಬಾಲಕಿಯ ಶವ ಪತ್ತೆಯಾಗಿತ್ತು.

ಬಾಲಕಿಯ ದೇಹದ ವಿವಿಧಡೆ ತೆರಚಿದ ಗಾಯಗಳಾಗಿದ್ದು, ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ನಂತರ ಕೊಲೆ ಮಾಡಿರೋದು ಗೊತ್ತಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಆಳಂದ ಠಾಣೆಯ ಪೊಲೀಸರು, ಘಟನೆ ನೆಡದ 24 ಗಂಟೆಯಲ್ಲಿಯೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುರ್ದೈವದ ಸಂಗತಿಯಂದ್ರೆ, ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು ಕೂಡಾ ಓರ್ವ ಬಾಲಕನೆ.

ಬಾಲಕಿಯ ಗ್ರಾಮದಲ್ಲಿಯೇ ಇದ್ದ 17 ವರ್ಷದ ಬಾಲಕನೇ, ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ. ನಿನ್ನೆ ಮಧ್ಯಾಹ್ನ ಬಾಲಕಿ ಬಹಿರ್ದೆಸೆಗೆ ಹೋಗೋದನ್ನು ನೋಡಿದ್ದ ಬಾಲಕ, ಬಾಲಕಿಯನ್ನು ಪಾಲೋ ಮಾಡಿಕೊಂಡು ಹೋಗಿದ್ದ. ನಂತರ ಕಬ್ಬಿನ ಗದ್ದೆಗೆ ಕರೆದಕೊಂಡು ಹೋಗಿ, ಬಲವಂತವಾಗಿ ಅತ್ಯಾಚಾರ ಮಾಡಿದ್ದ. ಈ ವಿಷಯವನ್ನು ಬಾಲಕಿ, ಕುಟುಂಬದವರಿಗೆ ಹೇಳ್ತಾಳೆ ಅಂತ ತಿಳಿದು, ಕಲ್ಲಿನಿಂದ ಬಾಲಕಿಯ ಕತ್ತಿಗೆ ಗುದ್ದಿ, ನಂತರ ಬಾಲಕಿಯ ವೇಲ್ ನಿಂದಲೇ ಬಾಲಕಿಯ ಕತ್ತು ಬಿಗಿದು ಕೊಲೆ ಮಾಡಿದ್ದನು. ನಂತರ ತನ್ನ ಪಾಡಿಗೆ ತಾನು ಮನೆಗೆ ಬಂದು ಸುಮ್ಮನಾಗಿದ್ದ.

ಅಶ್ಲೀಲ ವಿಡಿಯೋ ನೋಡುತ್ತಿದ್ದ ಬಾಲಕ

ಅಪ್ರಾಪ್ತ ಬಾಲಕ ಕೂಡಾ ಐಟಿಐ ಓದುತ್ತಿದ್ದನಂತೆ. ಅಪ್ರಾಪ್ತ ಬಾಲಕನಿಗೆ ಮೊಬೈಲ್​ಗೀಳು ಹೊಂದಿದ್ದನಂತೆ. ಮೊಬೈಕ್​ನಲ್ಲಿ ಅಶ್ಲೀಲವಾದ ವಿಡಿಯೋಗಳನ್ನು ನೋಡುತ್ತಿದ್ದನಂತೆ. ಸದಾ ಅಶ್ಲೀಲ ವಿಡಿಯೋ ನೋಡುತ್ತಿದ್ದ ಬಾಲಕ, ನಿನ್ನೆ ಅಪ್ರಾಪ್ತ ಬಾಲಕಿ ಒಬ್ಬಳೆ ಹೋಗೋದನ್ನು ನೋಡಿ, ಪಾಲೋ ಮಾಡಿಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದನು.

ಸಂಜಯ್.ಟಿವಿ9 ಕಲಬುರಗಿ

Published On - 9:03 pm, Wed, 2 November 22

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ