ರಾಯಚೂರು: ಪ್ರಿಯಕರನ ಸಾವಿನಿಂದ ಮನನೊಂದು ಡೆತ್ ನೋಟ್ ಬರೆದಿಟ್ಟು ಆರ್ಟಿಪಿಎಸ್ (RTPS) ಮಹಿಳಾ ಪಾರ್ವತಿ ಆತ್ಮಹತ್ಯೆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಾಲ್ಲೂಕಿನ ಶಕ್ತಿನಗರದಲ್ಲಿ ನಿನ್ನೆ ಘಟನೆ ನಡೆದಿದೆ. ತನ್ನ ಜೊತೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸೋಮನಾಥ ಜೊತೆ ಸ್ನೇಹ ಮಾಡಿದ್ದಳು. ಪಾರ್ವತಿ-ಸೋಮನಾಥನ ವಿಚಾರ ತಿಳಿದಿದ್ದ ಸೋಮನಾಥನ ಪತ್ನಿ ವೇದಾ, ಜನವರಿ 14 ರಂದು ಶಕ್ತಿನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಘಟನೆ ಬಳಿಕ ಪತ್ನಿ ಸಾವಿನಿಂದ ಮನನೊಂದು ಪತಿ ಸೋಮನಾಥ ಕೂಡ ಬಾಗಲಕೋಟೆಯಲ್ಲಿ ಜನವರಿ 21ರಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಸೋಮನಾಥ ಸಾವಿನ ಬಳಿಕ ಪಾರ್ವತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅದೃಷ್ಟವಶಾತ್ ಬದುಕುಳಿದ್ದಳು. ಇದಾದ ಬಳಿಕ ನಿನ್ನೆ ಡೆತ್ ನೋಟ್ ಬರೆದಿಟ್ಟು ಆರ್ಟಿಪಿಎಸ್ ಕ್ವಾಟರ್ಸ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಸಾವಿಗೆ ಯಾರೂ ಕಾರಣರಲ್ಲ. ಯಾರನ್ನೂ ತನಿಖೆ ಮಾಡೋ ಅಗತ್ಯವಿಲ್ಲ. ಇದಕ್ಕೆಲ್ಲಾ ಯಾರನ್ನೂ ದೂಷಿಸುವ ಅಗತ್ಯವಿಲ್ಲ ಎಂದು ಡೆತ್ ನೋಟ್ನಲ್ಲಿ ಬರೆಯಲಾಗಿದೆ. ಘಟನೆ ಬಳಿಕ ಪಾರ್ವತಿ ತಾಯಿ ನಾಗಮ್ಮ ಟಿವಿ9 ಗೆ ಹೇಳಿಕೆ ನೀಡಿದ್ದು, ನನ್ನ ಮಗಳದ್ದು ತಪ್ಪಿಲ್ಲ, ಜನ ಕೆಟ್ಟದಾಗಿ ಮಾತನಾಡುತ್ತಾರೆ. ಹೀಗಂತ ಆಕೆ ಹೇಳಿಕೊಂಡಿದ್ಲು ಅಂತ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂಟಿಯಾಗಿ ಮನೆಯಲ್ಲಿ ವಾಸವಿದ್ದ ಮಹಿಳೆಯ ಕೊಲೆ:
ಮಂಡ್ಯ: ಒಂಟಿಯಾಗಿ ಮನೆಯಲ್ಲಿ ವಾಸವಿದ್ದ ಮಹಿಳೆಯನ್ನು ಕೊಲೆಗೈದು ದುಷ್ಕರ್ಮಿಗಳು ಪರಿಯಾಗಿರುವಂತಹ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಘಟನೆ ನಡೆದಿದೆ. ಸುಮಾ (40) ಕೊಲೆಯಾದ ಮಹಿಳೆ. ಪರಿಚಯಸ್ಥರಿಂದಲೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಮಧ್ಯ ರಾತ್ರಿ ಕೊಲೆಯಾಗಿದ್ದು, ಇಂದು ಮಧ್ಯಾಹ್ನ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ಫೋನ್ ಮೂಲಕ ಮಾಹಿತಿ ನೀಡದ ಬಳಿಕ ಪೊಲೀಸರು ಸ್ಥಳಕ್ಕೆ ಬಂದಿದ್ದು, ಬೆರಳಚ್ಚು ತಜ್ಞರು, ಶ್ವಾನ ದಳದಿಂದಲೂ ಪರಿಶೀಲನೆ ಮಾಡಲಾಗಿದೆ. ಊರಿನ ಮಧ್ಯ ಭಾಗದ ಮನೆಯಲ್ಲಿ ಕೃತ್ಯ ನಡೆದರೂ ಗ್ರಾಮಸ್ಥರು ಮಾಹಿತಿ ನೀಡಿಲ್ಲ. ತಮಗೇನು ಗೊತ್ತಿಲ್ಲ ಎಂದು ಅಕ್ಕಪಕ್ಕದ ಮನೆಯವರು ಹೇಳುತ್ತಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ಆರಂಭಿಸಿದ್ದು, ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಡರ್ ಹಾರಿ ವಾಹನಗಳಿಗೆ ಬಿಎಂಡಬ್ಲ್ಯು ಕಾರು ಡಿಕ್ಕಿ; ಓರ್ವ ಮಹಿಳೆಗೆ ಗಾಯ;
ಮಂಗಳೂರು: ಬಲ್ಲಾಳ್ ಬಾಗ್ನಲ್ಲಿ ಬಿ.ಎಮ್.ಡಬ್ಲ್ಯೂ ಕಾರು ಸರಣಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. BMW HR26B9454 ನಂಬರ್ ಕಾರಿದ್ದಾಗಿದ್ದು, ಚಾಲಕ ಶ್ರವಣ್ ಕುಮಾರ್ (30)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂಟಿರಿಯರ್ ಡಕೋರೇಟರ್ ನಿರಂಜನ್ ಎಮ್.ಎನ್, ಮಣ್ಣಗುಡ್ಡ ನಿವಾಸಿ ಶ್ರವಣ್ ಕುಮಾರ್. ಎರಡು ಕಾರು ಮತ್ತು ಎರಡು ಬೈಕ್ ಡಿಕ್ಕಿ ಹೊಡೆದು ಸ್ಕೂಟರ್ ಚಾಲಕಿ ಪ್ರೀತಿ ಮನೋಜ್(47) ಗಂಭೀರಗೊಂಡಿದ್ದು, ಕಾರ್ನಲ್ಲಿದ್ದ ಅಮನ್ ಜಯದೇವನ್ (7) ಗೆ ಗಾಯವಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, IPC ಸಕ್ಷನ್ 279, 338 ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಮಂಗಳೂರು ಪಶ್ಚಿಮ ಸಂಚಾರಿ ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಡರ್ ಹಾರಿ ವಾಹನಗಳಿಗೆ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದಿರುವಂತಹ ಘಟನೆ ನಗರದ ಬಳ್ಳಾಲ್ ಬಾಗ್ ಬಳಿ ನಡೆದಿತ್ತು. ರಸ್ತೆಯ ಇನ್ನೊಂದು ಬದಿಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಮತ್ತು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಡಿವೈಡರ್ ಪಕ್ಕ ನಿಂತಿದ್ದ ಮಹಿಳೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ನಶೆ ಏರಿಸಿಕೊಂಡು ಕಾರು ಚಲಾಯಿಸಿರುವ ಬಗ್ಗೆ ಅನುಮಾನ ಮೂಡಿದೆ. ಅಪಘಾತ ಆದ ತಕ್ಷಣ ಚಾಲಕನಿಗೆ ಸಾರ್ವಜನಿಕರಿಂದ ಧರ್ಮದೇಟು ನೀಡಿದ್ದಾರೆ. ಡ್ರಗ್ ಸೇವಿಸಿ ಚಲಾಯಿಸುತ್ತಿದ್ದೀಯಾ ಅಂತಾ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:
ಕಂಪನಿಯ ಇಂಜಿನಿಯರ್ಗಳು ತಪಾಸಣೆ ಮಾಡಿ ಓಕೆ ಅಂದ ಬಳಿಕವೂ ಬಿಎಂಟಿಸಿ ಬಸ್ಸಲ್ಲಿ ಬೆಂಕಿ ಕಾಣಿಸಿಕೊಂಡಿದೆ!
Published On - 5:47 pm, Sat, 9 April 22