Government Employees DA: ಮೂಲವೇತನದ ಮೇಲೆ ಮಾತ್ರ ಡಿಎ ಹೆಚ್ಚಳ; ವೇತನ ಲೆಕ್ಕಾಚಾರ ತಿಳಿಯಿರಿ
ಮೂಲವೇತನದ ಮೇಲೆ ಮಾತ್ರ ಡಿಎ ಲೆಕ್ಕಾಚಾರ ಹಾಕಲಾಗುವುದು ಎಂದು ತಿಳಿಸಲಾಗಿದೆ. ಹಾಗಿದ್ದರೆ ವೇತನ ಲೆಕ್ಕಾಚಾರ ಹೇಗೆ ಎಂಬ ವಿವರ ಇಲ್ಲಿದೆ.
ಕೇಂದ್ರ ಸರ್ಕಾರಿ ನೌಕರರು (Central Government Employees) ಮತ್ತು ಪಿಂಚಣಿದಾರರಿಗೆ ನಿರಾಳ ಆಗುವಂತೆ ಈಚೆಗೆ ಕೇಂದ್ರ ಸರ್ಕಾರದಿಂದ ಡಿಯರ್ನೆಸ್ ಅಲೋವೆನ್ಸ್ ಮತ್ತು ಡಿಯರ್ನೆಸ್ ರಿಲೀಫ್ ಕ್ರಮವಾಗಿ ಹೆಚ್ಚಳ ಮಾಡಲಾಯಿತು. ಈಚಿನ ಘೋಷಣೆ ಪ್ರಕಾರ, ಡಿಎ ಮತ್ತು ಡಿಆರ್ ಅನ್ನು ವೇತನದಾರರಿಗೆ ಶೇ 34ರಷ್ಟು ನೀಡಲಾಗುತ್ತದೆ. ಈ ಹಿಂದೆ ಆ ಪ್ರಮಾಣ ಶೇ 31ರಷ್ಟಿತ್ತು ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿದೆ. ಜನವರಿ 1, 2022ರಿಂದ ಪೂರ್ವಾನ್ವಯ ಆಗುವಂತೆ ಡಿಎ ಶೇ 3ರಷ್ಟು ಹೆಚ್ಚಳ ಆಗಲಿದೆ. ಈ ನಡೆಯಿಂದ 47.68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ನಿವೃತ್ತದಾರರಿಗೆ ಪರಿಣಾಮ ಆಗುತ್ತದೆ. ಇಂಧನ ಬೆಲೆ, ತೈಲ ಬೆಲೆಗಳು ಮತ್ತು ಸಾಮಾನ್ಯವಾಗಿ ಹಣದುಬ್ಬರ ಏರಿಕೆ ಮಧ್ಯೆ ಈ ಬೆಳವಣಿಗೆ ಆಗಿದೆ.
ಆದರೆ, ಡಿಎ ಲೆಕ್ಕಾಚಾರವನ್ನು ಉದ್ಯೋಗಿಯ ಮೂಲವೇತನದ ಮೇಲೆ ಲೆಕ್ಕ ಹಾಕಲಾಗುತ್ತದೆ ಮತ್ತು ಇದನ್ನು ಲೆಕ್ಕ ಹಾಕಲು ಬೇರೆ ಯಾವ ಭತ್ಯೆಯೂ ಲೆಕ್ಕ ಹಾಕುವುದಿಲ್ಲ. ಇದರರ್ಥ ಏನೆಂದರೆ, ಕೇದ್ರ ಸರ್ಕಾರಿ ನೌಕರರು ಡಿಎ ಪರಿಷ್ಕರಣೆ ನಂತರ ಮಾರ್ಚ್ನಲ್ಲಿ ವೇತನ ಪಡೆಯುವವರು ಮೂಲ ವೇತನದ ಮೇಲೆ ಲೆಕ್ಕ ಹಾಕಿ ನೀಡಲಾದ ಡಿಎ ಪಡೆಯುತ್ತಾರೆ. ಏಳನೇ ವೇತನ ಆಯೋಗದ ಅಡಿಯಲ್ಲಿ ಡಿಎ ಹೆಚ್ಚಳ ಮಾಡಿದ ನಂತರ ಮಾರ್ಚ್ 31ನೇ ತಾರೀಕಿನಂದು ಸ್ಪಷ್ಟತೆ ನೀಡಲಾಗಿದೆ.
ಸರ್ಕಾರಿ ಕಚೇರಿಯಿಂದ ಡಿಎ ಹೆಚ್ಚಳ ಮತ್ತು ಅದರ ಪಾವತಿಗೆ ಸಂಬಂಧಿಸಿದಂತೆ ಹೊರಡಿಸಲಾದ ಕಚೇರಿ ಸುತ್ತೋಲೆಯ ಪ್ರಮುಖಾಂಶಗಳು ಇಲ್ಲಿವೆ: -ಪರಿಷ್ಕೃತ ವೇತನ ರಚನೆಯಲ್ಲಿ ಮೂಲವೇತನ ಅಂದರೆ ನಿರ್ದಿಷ್ಟ ಮಟ್ಟದಲ್ಲಿ ಡ್ತಾ ಮಾಡಲು ಏಳನೇ ವೇತನ ಆಯೋಗದ ಅಡಿಯಲ್ಲಿ ಶಿಫಾರಸು ಕಳಿಸಿ, ಸರ್ಕಾರದಿಂದ ಒಪ್ಪಿಕೊಳ್ಳಲಾಗಿದೆ. ಆದರೆ ಅದರಲ್ಲಿ ಮಿಕ್ಕಂತೆ ಬೇರೆ ವೇತನಗಳಾದ ವಿಶೇಷ ಭತ್ಯೆ ಮುಂತಾವ ಸೇರಿಸಲ್ಲ.
-ಡಿಯರ್ನೆಸ್ ಅಲೋವೆನ್ಸ್ ಪಾವತಿ ಧನದ ವಿಶಿಷ್ಟ ಅಂಶವಾಗಿರುತ್ತದೆ ಮತ್ತು ಇದನ್ನು FR9(21) ವ್ಯಾಪ್ತಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕಚೇರಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
-ಡಿಯರ್ನೆಸ್ ಅಲೋವೆನ್ಸ್ ಬಾಕಿ 50 ಪೈಸೆ ಅಥವಾ ಅದಕ್ಕಿಂತ ಹೆಚ್ಚು ಇದ್ದಲ್ಲಿ ಅದನ್ನು ಮುಂದಿನ ರೂಪಾಯಿಗೆ ರೌಂಡ್ ಆಫ್ ಮಾಡಲಾಗುತ್ತದೆ. 50 ಪೈಸೆ ಒಳಗೆ ಇದ್ದಲ್ಲಿ ಅದನ್ನು ಕೈ ಬಿಡಲಾಗುತ್ತದೆ.
-2022ರ ಮಾರ್ಚ್ ವೇತನ ಬಟವಾಡೆಗೂ ಮುಂಚೆ ಡಿಯರ್ನೆಸ್ ಅಲೋವೆನ್ಸ್ ಬಾಕಿಯನ್ನು ಪಾವತಿ ಮಾಡುವುದಿಲ್ಲ.
ಏಳನೇ ವೇತನ ಆಯೋಗ ಡಿಎ ಹೆಚ್ಚಳ: ವೇತನ ಲೆಕ್ಕಾಚಾರ ವೆಚ್ಚ ಇಲಾಖೆಯ ನೋಟಿಸ್ನ ಪ್ರಕಾರ, ಉದ್ಯೋಗಿಯ ಮೂಲವೇತನ 18 ಸಾವಿರ ರೂಪಾಯಿ. ಇದರಲ್ಲಿ ಈಚಿನ ಹೆಚ್ಚಳದ ನಂತರ ಡಿಎ 6120 ರೂಪಾಯಿ ದೊರೆಯುತ್ತದೆ. ಈ ಹಿಂದೆ ಶೇ 31ರ ಲೆಕ್ಕಾಚಾರದಲ್ಲಿ 5580 ರೂಪಾಯಿ ಸಿಗುತ್ತಿತ್ತು. ಇದರ್ಥ ಏನೆಂದರೆ, ಈಚಿನ ಡಿಎ ಹೆಚ್ಚಳದ ನಂತರ 540 ರೂಪಾಯಿ ಏರಿಕೆ ಆಗುತ್ತದೆ.
ಇದನ್ನೂ ಓದಿ: Good News: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ: ಸಿಎಂ ಬೊಮ್ಮಾಯಿ