ಮುಖ್ಯಪೇದೆಯಾಗಿ ಕೆಲಸ ಮಾಡುತ್ತಲೇ ಗಾಯನದ ಪ್ರತಿಭೆ ಮೂಲಕ ಗುರುತಿಸಿಕೊಂಡಿದ್ದ ಸುಬ್ರಮಣಿ ಅವರ ಪತ್ನಿ ಜ್ಯೋತಿ ಕೊರೊನಾದಿಂದ ನಿಧನರಾಗಿದ್ದಾರೆ ಎಂಬ ಮಾಹಿತಿ ಸೋಮವಾರ (ಮೇ 10) ಹಬ್ಬಿತ್ತು. ಆದರೆ ಆ ಘಟನೆಗೆ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಸುಬ್ರಮಣಿ ಪತ್ನಿ ಜ್ಯೋತಿ ಸಾವಿಗೆ ಕೊರೊನಾ ವೈರಸ್ ಕಾರಣವಲ್ಲ. ಅವರು ಆತ್ಮಹತ್ಯೆಯಿಂದ ಅಸುನೀಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಜ್ಯೋತಿ ಅವರಿಗೆ 33 ವರ್ಷ ವಯಸ್ಸಾಗಿತ್ತು.
ಉತ್ತಮ ಗಾಯಕನಾಗಿರುವ ಸುಬ್ರಮಣಿ ಅವರು ಸರಿಗಮಪ ವೇದಿಕೆಯಲ್ಲಿ ಹಾಡುವ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು. ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದರು. ಅವರ ಪತ್ನಿ ಜ್ಯೋತಿ ಕೋಲಾರದ ಧರ್ಮರಾಯ ನಗರದಲ್ಲಿ ಇರುವ ನಿವಾಸದಲ್ಲಿ ಮೇ 7ರಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಕೂಡಲೇ ಕೋಲಾರದ ಸ್ಥಳೀಯ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಯಿತು. ಆ ಸಂದರ್ಭದಲ್ಲಿ ಜ್ಯೋತಿ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಯಿತು. ವೆಂಟಿಲೇಟರ್ ಬೆಡ್ ಸಿಗದೇ ಪರದಾಡುವ ಪರಿಸ್ಥಿತಿ ಎದುರಾಯಿತು. ಬಳಿಕ ಹೊಸಕೋಟೆ ಹೊರವಲಯದ ಆಸ್ಪತ್ರೆಗೆ ಅವರನ್ನು ಸಂಬಂಧಿಕರು ಕರೆದುಕೊಂಡು ಬಂದರು. ಚಿಕಿತ್ಸೆ ಫಲಕಾರಿ ಆಗದೇ ಜ್ಯೋತಿ ಮೃತರಾದರು ಎಂಬ ಮಾಹಿತಿ ಲಭ್ಯವಾಗಿದೆ.
ಜ್ಯೋತಿ ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ಹೇಳಲಾಗುತ್ತಿದೆ. ಕೆ.ಆರ್. ಪುರ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿ ಸುಮ್ರಮಣಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ಅವರು ಕರ್ತವ್ಯಕ್ಕೆ ಗೈರಾಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ:
ಭಾವಿ ಪತ್ನಿ 3 ದಿನದಿಂದ ಫೋನ್ ಮಾಡಿಲ್ಲ ಎಂದು ಕಾನ್ಸ್ಟೇಬಲ್ ಆತ್ಮಹತ್ಯೆ
Published On - 5:16 pm, Tue, 11 May 21