ರೋಹ್ಟಕ್: ಆಘಾತಕಾರಿ ಘಟನೆಯಲ್ಲಿ ಜುಲೈ 30ರಂದು ಹರಿಯಾಣದ ರೋಹ್ಟಕ್‌ನಲ್ಲಿ ತನ್ನ ಮೊಬೈಲ್ ಹಾಟ್‌ಸ್ಪಾಟ್ ಅನ್ನು ಆನ್ ಮಾಡಲು ನಿರಾಕರಿಸಿದ ಹೆಂಡತಿಯನ್ನು ವ್ಯಕ್ತಿಯೊಬ್ಬ ಹರಿತವಾದ ಆಯುಧದಿಂದ ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಹರಿಯಾಣದ ರೋಹ್ಟಕ್‌ನಲ್ಲಿ ತನ್ನ ಹೆಂಡತಿಯನ್ನು ಗಂಡ ಹರಿತವಾದ ಆಯುಧದಿಂದ ಕೊಂಡಿದ್ದಾನೆ. ವರದಿಗಳ ಪ್ರಕಾರ, ಕೌಟುಂಬಿಕ ವೈಷಮ್ಯದಿಂದ ಕೊಲೆಯಾದ ಬಗ್ಗೆ ಪೊಲೀಸರು ಮಾಹಿತಿ ಪಡೆದ ತಕ್ಷಣ, ಅವರು ಅಪರಾಧ ನಡೆದ ಸ್ಥಳಕ್ಕೆ ತಲುಪಿ ಮಹಿಳೆಯ ಶವವನ್ನು ವಶಕ್ಕೆ ತೆಗೆದುಕೊಂಡರು.
ತನಿಖೆ ವೇಳೆ ಮದೀನ ಗ್ರಾಮದ ನಿವಾಸಿ ಅಜಯ್ ಕುಮಾರ್ ಹಾಗೂ ಆತನ ಪತ್ನಿ ರೇಖಾ ಮನೆಯಲ್ಲಿ ಮೊಬೈಲ್ ಬಳಸುತ್ತಿರುವುದು ಪತ್ತೆಯಾಗಿದೆ. ಈ ಸಮಯದಲ್ಲಿ, ಅಜಯ್ ಅವರ ಮೊಬೈಲ್ ಡೇಟಾ ಖಾಲಿಯಾದಾಗ ತನ್ನ ಹೆಂಡತಿ ರೇಖಾ ಬಳಿ ಮೊಬೈಲ್‌ನ ವೈ-ಫೈ ಹಾಟ್‌ಸ್ಪಾಟ್ ಅನ್ನು ಆನ್ ಮಾಡಲು ಕೇಳಿದ್ದಾನೆ. ಆದರೆ, ಇಬ್ಬರ ನಡುವೆ ಜಗಳವಾಗಿದ್ದರಿಂದ ಆಕೆ ವೈಫೈ ಆನ್ ಮಾಡಲು ಒಪ್ಪಿಲ್ಲ.
ಇದನ್ನೂ ಓದಿ: Crime News: ಹಾಸಿಗೆ ಹಿಡಿದಿದ್ದ 80 ವರ್ಷದ ವೃದ್ಧೆ ಮೇಲೆ ಅತ್ಯಾಚಾರ; ಅಪರಾಧಿಗೆ 12 ವರ್ಷ ಜೈಲು ಶಿಕ್ಷೆ
ಇದೇ ಕಾರಣಕ್ಕೆ ಮತ್ತೆ ಜಗಳವಾಗಿದೆ. ಪೊಲೀಸರ ಪ್ರಕಾರ, ಅಜಯ್ ಅವರ ಪತ್ನಿ ಹಾಟ್‌ಸ್ಪಾಟ್ ಅನ್ನು ಆನ್ ಮಾಡಲು ನಿರಾಕರಿಸಿದರು. ನನ್ನ ಮೊಬೈಲ್‌ನಲ್ಲಿ ಕಡಿಮೆ ಡೇಟಾ ಉಳಿದಿದೆ, ಹೀಗಾಗಿ ವೈಫೈ ಆನ್ ಮಾಡುವುದಿಲ್ಲ ಎಂದು ಆಕೆ ಹೇಳಿದರು. ಇದರಿಂದ ಕೋಪಗೊಂಡ ಅಜಯ್ ಪತ್ನಿಯನ್ನು ಹರಿತವಾದ ಆಯುಧದಿಂದ ಕೊಂದು ಪರಾರಿಯಾಗಿದ್ದಾನೆ.
ರೇಖಾ ಕುಟುಂಬದವರ ಹೇಳಿಕೆ ಆಧರಿಸಿ ಆರೋಪಿ ಅಜಯ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಕೆಲ ಗಂಟೆಗಳ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ಕೊಲೆಗೆ ಬಳಸಿದ್ದ ಆಯುಧವನ್ನೂ ವಶಪಡಿಸಿಕೊಳ್ಳಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ