ಹಲ್ಲು ನೋವೆಂದು ಆಸ್ಪತ್ರೆಗೆ ಬಂದ ಕಳ್ಳರು: ವೈದ್ಯೆಯೊಂದಿಗೆ ಮಾತನಾಡುತ್ತ ಚಿನ್ನದ ಸರ ಕದ್ದು ಪರಾರಿ
ಜುಲೈ 30ರಂದು ವಿಜಯಪುರದ ಕಾಳಿಕಾನಗರದ ಪಾಟೀಲ್ ಕ್ಲಿನಿಕ್ನಲ್ಲಿ ರೋಗಿ ನೆಪದಲ್ಲಿ ಆಸ್ಪತ್ರೆಗೆ ಬಂದು ವೈದ್ಯೆಯ 11 ಗ್ರಾಂ ಚಿನ್ನದ ಮಾಂಗಲ್ಯ ಸರ ಎಗರಿಸಿ ಖದೀಮರು ಪರಾರಿಯಾಗಿರುವಂತಹ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವಿಜಯಪುರ, ಆಗಸ್ಟ್ 2: ರೋಗಿ ವೇಶದಲ್ಲಿ ಆಸ್ಪತ್ರೆಗೆ ತೆರಳಿ ವೈದ್ಯೆಯ (doctor) ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಹೊಂಡು ಖದೀಮರು (Thieves) ಪರಾರಿ ಆಗಿರುವಂತಹ ಘಟನೆ ಕಳೆದ ಜುಲೈ 30 ರಂದು ಕಾಳಿಕಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ. ಆ ಮೂಲಕ ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ಶುರುವಾಗಿದೆ. ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರ ಪತ್ತೆಗೆ ಬಲೆ ಬಿಸಿದ್ದಾರೆ.
ಜುಲೈ 30 ರಂದು ಇಬ್ಬರು ಖದೀಮರು ಬೈಕ್ ಮೇಲೆ ಆಸ್ಪತ್ರೆಯ ಬಳಿ ಬಂದಿದ್ದು, ಇಬ್ಬರ ಪೈಕಿ ಓರ್ವನು ಆಸ್ಪತ್ರೆಯೊಳಗೆ ಹೋದರೆ ಮತ್ತೋರ್ವ ಬೈಕ್ ಮೇಲೆ ಕಾಯುತ್ತಾ ನಿಂತಿದ್ದ. ಹಲ್ಲು ನೋವು ಎಂದು ರೋಗಿಯ ಸೋಗಿನಲ್ಲಿ ಖದೀಮ ಎಂಟ್ರಿ ಕೊಟ್ಟಿದ್ದು, ಇಂಗ್ಲಿಷ್ನಲ್ಲಿ ಮಾತನಾಡುತ್ತ ಪಾಟೀಲ್ ಕ್ಲಿನಿಕ್ ವೈದ್ಯೆ ಡಾ.ಸರೋಜಿನಿ ಪಾಟೀಲ್ ಎಂಬುವರ 11 ಗ್ರಾಂ ಚಿನ್ನದ ಸರ ಕಸಿದು ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಪತ್ನಿಯಿಂದಲೇ ಪತಿಯ ಭೀಕರ ಹತ್ಯೆ; ಕಾರಣವೇನು ಗೊತ್ತಾ?
ವೈದ್ಯೆಯ ಸರ ಕಿತ್ತುಕೊಂಡು ಓಡಿದ ಓರ್ವ ಕಳ್ಳತನನ್ನು ಮತ್ತೋರ್ವ ಆತನನ್ನು ಬೈಕ್ನಲ್ಲಿ ಪಿಕ್ಅಪ್ ಮಾಡಿಕೊಂಡು ಪರಾರಿ ಆಗಿದ್ದಾರೆ. ವೈದ್ಯೆ ಸರೋಜಿನಿ ಕೂಗುತ್ತಾ ಹೊರಗಡೆ ಬರುವಷ್ಟರಲ್ಲಿ ಇಬ್ಬರು ಪರಾರಿ ಆಗಿದ್ದರು.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ಆಟೋ ಕದ್ದೊಯ್ದ ಕಳ್ಳರು
ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪ್ರಗತಿನಗರ 7ನೇ ಕ್ರಾಸ್ ನಿವಾಸಿ ಪುಟ್ಟರಾಜು ಎಂಬುವವರು ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಆಟೋ ಬೆಳಗಾಗುವುದರೊಳಗೆ ಮಾಯವಾಗಿತ್ತು. ಸಮೀಪದ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ನಡೆಸಿದಾಗ ಕಳ್ಳರ ಕೈಚಳಕ ಪತ್ತೆಯಾಗಿತ್ತು.
ಇದನ್ನೂ ಓದಿ: ಗಂಡನ ಮೇಲಿನ ಸಿಟ್ಟಿಗೆ ಸ್ನೇಹಿತನ ಜತೆ ಸೇರಿ ಸ್ವಂತ ಮಗನನ್ನೇ ಕಿಡ್ನ್ಯಾಪ್ ಮಾಡಿದ ತಾಯಿ
ಬಾಡಿಗೆಗೆ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದೆ. ಇದೀಗ ಜೀವನಕ್ಕೆ ಆಧಾರವಾಗಿದ್ದ ಆಟೋ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಪೊಲೀಸರ ಆದಷ್ಟು ಬೇಗ ಹುಡುಕಿ ಕೊಟ್ಟರೆ ಜೀವನಕ್ಕೆ ನೆರವಾಗುತ್ತದೆ ಎಂದು ಆಟೋ ಕಳೆದುಕೊಂಡ ಪುಟ್ಟರಾಜು ತನ್ನ ಅಳಲು ತೋಡಿಕೊಂಡಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:18 pm, Fri, 2 August 24