ಅನಾರೋಗ್ಯದಿಂದ ತಾಯಿ ಸಾವು, ಯಾರಿಗೂ ಹೇಳದೆ ಮೃತದೇಹದೊಂದಿಗೆ 4 ದಿನ ಕಳೆದ 14 ವರ್ಷದ ಮಗ

ಕೊಳೆತ ವಾಸನೆ ತಾಳಲಾರದೇ ಸ್ಥಳೀಯರು ಹುಡುಕಾಟ ಪ್ರಾರಂಭಿಸಿದ್ದು, ಈ ವೇಳೆ ಪಕ್ಕದ ಮನೆಯಲ್ಲೇ ಮಹಿಳೆಯೊಬ್ಬರು 4 ದಿನಗಳ ಹಿಂದೆ ಸತ್ತಿರುವುದು ಬೆಳಕಿಗೆ ಬಂದಿದೆ. ಸ್ವಂತ ಅಮ್ಮ ಸತ್ತಿದ್ದರೂ ಮಗ ಯಾರಿಗೂ ಏನನ್ನೂ ಹೇಳದೆ ಕಳೆದ ನಾಲ್ಕು ದಿನಗಳಿಂದ ತಾಯಿಯ ಶವದ ಬಳಿಯೇ ಕುಳಿತಿದ್ದುದನ್ನು ಕಂಡು ನೆರೆಹೊರೆಯವರು ಶಾಕ್​​ ಆಗಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅನಾರೋಗ್ಯದಿಂದ ತಾಯಿ ಸಾವು, ಯಾರಿಗೂ ಹೇಳದೆ ಮೃತದೇಹದೊಂದಿಗೆ 4 ದಿನ ಕಳೆದ 14 ವರ್ಷದ ಮಗ
Follow us
ಅಕ್ಷತಾ ವರ್ಕಾಡಿ
|

Updated on:Aug 02, 2024 | 6:41 PM

ಮಹಾರಾಷ್ಟ್ರ: ತಾಯಿ ಸಾವನ್ನಪ್ಪಿದರೂ ಯಾರಿಗೂ ಹೇಳದೆ ತಾಯಿಯ ಮೃತದೇಹದೊಂದಿಗೆ ನಾಲ್ಕು ದಿನಗಳ ವರೆಗೆ 14 ವರ್ಷದ ಬಾಲಕ ಕಾಲ ಕಳೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ನೆರೆಹೊರೆಯಲ್ಲಿ ವಾಸಿಸುವ ಜನರಿಗೆ ದುರ್ವಾಸನೆ ಬರಲು ಪ್ರಾರಂಭವಾಗಿದ್ದು, ಹುಡುಕಾಟ ನಡೆಸಿದಾಗ ಪಕ್ಕದ ಮನೆಯಲ್ಲಿ 4ದಿನಗಳಿಂದ ಶವವೊಂದು ಕೊಳೆಯುತ್ತಿರುವುದು ಬೆಳಕಿಗೆ ಬಂದಿದೆ. ಬಾಗಿಲು ತೆರೆದಾಗ ಒಳಗಿನ ದೃಶ್ಯ ಕಂಡು ಸ್ಥಳೀಯರು ಶಾಕ್​​ ಆಗಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

44 ವರ್ಷದ ಮಹಿಳೆ ಸಿಲ್ವಿಯಾ ಡೇನಿಯಲ್ ಮತ್ತು ಆಕೆಯ 14 ವರ್ಷದ ಮಗ ಓಲ್ವಿನ್ ಡೇನಿಯಲ್ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಮಹಿಳೆ ಯಾವುದೋ ಕಾಯಿಲೆಯಿಂದ ಸಾವನ್ನಪ್ಪಿದ್ದಳು. ಇದಾದ ನಂತರ ಮಹಿಳೆಯ ಮಗ ಯಾರಿಗೂ ಏನನ್ನೂ ಹೇಳದೆ ಕಳೆದ ನಾಲ್ಕು ದಿನಗಳಿಂದ ತಾಯಿಯ ಶವದ ಬಳಿಯೇ ಕುಳಿತಿದ್ದ. ಇದಾದ ಬಳಿಕ ಕಟ್ಟಡದ ಕಾವಲುಗಾರ ಹಾಗೂ ನೆರೆಹೊರೆಯವರು ಗೇಟ್ ತೆರೆದಾಗ ಫ್ಲಾಟ್ ಒಳಗಿನಿಂದ ಭಯಾನಕ ವಾಸನೆ ಬಂದಿದೆ. ಮಹಿಳೆಯ ಶವವನ್ನು ನೋಡಿ ಎಲ್ಲರೂ ಬೆಚ್ಚಿಬಿದ್ದು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಬಳಿಕ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: 25 ಲಕ್ಷ ರೂ. ಸಂಬಳದ ಕೆಲಸ ಬಿಟ್ಟು UPSC ಗೆ ತಯಾರಿ ನಡೆಸುತ್ತಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆ

ತಾಯಿ ಯಾವುದೋ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಮೃತ ಮಹಿಳೆಯ ಪುತ್ರ ಓಲ್ವಿನ್ ಡೇನಿಯಲ್ ಪೊಲೀಸರಿಗೆ ತಿಳಿಸಿದ್ದಾರೆ. ಮಗನ ಹೇಳಿಕೆ ಆಧರಿಸಿ ಪೊಲೀಸರು ಮಹಿಳೆ ಸಾವಿನ ವರದಿ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಮಹಿಳೆಯ ಪತಿಯ ಬಗ್ಗೆ ಯಾವುದೇ ಮಾಹಿತಿಯಾಗಲಿ ಅಥವಾ ಇನ್ನಾವುದೇ ಅಕ್ರಮಗಳು ಬಹಿರಂಗವಾಗಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:41 pm, Fri, 2 August 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ