Shocking News: ಮಕ್ಕಳ ಮೇಲೆ ಫೋರ್ಕ್‌ನಿಂದ ಹಲ್ಲೆ ನಡೆಸಿ, ಗುಪ್ತಾಂಗ ಸುಟ್ಟ ಮಲತಾಯಿ
ನೆರೆಯ ರಾಜ್ಯವಾದ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ತನ್ನ ಮಲಮಕ್ಕಳ ಮೇಲೆ ಫೋರ್ಕ್‌ನಿಂದ ಹಲ್ಲೆ ನಡೆಸಿರುವ ತಾಯಿ ಆ ಮಕ್ಕಳ ಮರ್ಮಾಂಗವನ್ನು ಸುಟ್ಟಿದ್ದಾಳೆ.
ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ ಅಪ್ರಾಪ್ತ ವಯಸ್ಸಿನ ಮಲಮಕ್ಕಳ ಮೇಲೆ ಫೋರ್ಕ್ಸ್ ತೆಗೆದುಕೊಂಡು ಹಲ್ಲೆ ನಡೆಸಿದ್ದಾಳೆ. ಕೊನೆಗೆ ಅವರ ಗುಪ್ತಾಂಗವನ್ನು ಸುಡುವ ಮೂಲಕ ಹಲ್ಲೆ ಮಾಡಿದ ಅಮಾನವೀಯ ಘಟನೆ ವರದಿಯಾಗಿದೆ. ತನ್ನ ಗಂಡನ ಮೊದಲ ಹೆಂಡತಿಯ ಮಕ್ಕಳಾದ 7 ಮತ್ತು 8 ವರ್ಷ ವಯಸ್ಸಿನ ಇಬ್ಬರು ಗಂಡುಮಕ್ಕಳಿಗೆ ದಿನವೂ ಮನೆಯಲ್ಲಿ ಚಿತ್ರಹಿಂಸೆ ನೀಡುತ್ತಿದ್ದ ಆ ಮಹಿಳೆ ಯಾವಾಗಲೂ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಳು.
ಅವರಿಬ್ಬರಿಗೂ ನಿಯಮಿತವಾಗಿ ಚಿತ್ರಹಿಂಸೆ ಕೊಡುತ್ತಿದ್ದ ಆಕೆ ಇದೀಗ ಅವರ ಮೈ, ಗುಪ್ತಾಂಗವನ್ನು ಸುಟ್ಟು ಹಿಂಸೆ ನೀಡಿದ್ದಾಳೆ. ಆ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನಿನ್ನ ಅವಳು ದೊಡ್ಡ ಹುಡುಗನ ಮೇಲೆ ಫೋರ್ಕ್‌ನಿಂದ ಹಲ್ಲೆ ಮಾಡಿದ್ದಾಳೆ ಮತ್ತು ಸಣ್ಣ ಹುಡುಗನ ಖಾಸಗಿ ಭಾಗಗಳನ್ನು ಸುಟ್ಟು ಗಾಯಗಳನ್ನು ಮಾಡಿದ್ದಾಳೆ. ನಂತರ ರೋಲಿಂಗ್ ಪಿನ್‌ನಿಂದ ಹೊಡೆದಿದ್ದಾಳೆ.
ಇದನ್ನೂ ಓದಿ: Crime News: ಪಿಯುಸಿ ವಿದ್ಯಾರ್ಥಿನಿ ಮೇಲೆ ಶಾಲಾ ಬಸ್ ಚಾಲಕನಿಂದ ನಿರಂತರ ಅತ್ಯಾಚಾರ
ದೂರಿನ ಆಧಾರದ ಮೇಲೆ, ಆ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆ ಅಪ್ರಾಪ್ತ ಬಾಲಕರು ತಮ್ಮ ತಂದೆ ಮತ್ತು ಮಲತಾಯಿಯೊಂದಿಗೆ ವಾಸಿಸುತ್ತಿದ್ದರು. ಅವರ ಮಲತಾಯಿ ಅವರಿಗೆ ನಿಯಮಿತವಾಗಿ ಹೊಡೆಯುತ್ತಿದ್ದರು ಮತ್ತು ನಿಂದಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ