Shocking News: ದೆಹಲಿಯಲ್ಲಿ 12 ವರ್ಷದ ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ; ಗುಪ್ತಾಂಗಕ್ಕೆ ರಾಡ್ ಹಾಕಿದ ಗೆಳೆಯರು!

| Updated By: Digi Tech Desk

Updated on: Sep 26, 2022 | 1:19 PM

Crime News: ದೆಹಲಿಯಲ್ಲಿ ಹುಡುಗರಿಗೆ ಕೂಡ ಸುರಕ್ಷತೆಯಿಲ್ಲ. 12 ವರ್ಷದ ಬಾಲಕನ ಮೇಲೆ ನಾಲ್ವರು ಅಮಾನುಷವಾಗಿ ಅತ್ಯಾಚಾರ ಮಾಡಿದ್ದಾರೆ ಮತ್ತು ಕೋಲುಗಳಿಂದ ಹೊಡೆದಿದ್ದಾರೆ. ನಂತರ ಆತನ ಗುಪ್ತಾಂಗಗಳಿಗೆ ರಾಡ್ ಹಾಕಿ ಹಿಂಸೆ ನೀಡಲಾಗಿದೆ.

Shocking News: ದೆಹಲಿಯಲ್ಲಿ 12 ವರ್ಷದ ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ; ಗುಪ್ತಾಂಗಕ್ಕೆ ರಾಡ್ ಹಾಕಿದ ಗೆಳೆಯರು!
ಅತ್ಯಾಚಾರ
Follow us on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಸೀಲಾಂಪುರ ಪ್ರದೇಶದಲ್ಲಿ 12 ವರ್ಷದ ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ (Gang Rape) ವಿಚಿತ್ರವಾದ ಮತ್ತು ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಆ ಬಾಲಕನ ಮೇಲೆ ಅತ್ಯಾಚಾರವೆಸಗಿರುವುದು ಮಾತ್ರವಲ್ಲದೆ ಆತನ ಗೆಳೆಯರೇ ಆತನ ಖಾಸಗಿ ಅಂಗಗಳಿಗೆ ರಾಡ್‌ ಹಾಕಿ ಗಾಯಗೊಳಿಸಿದ್ದಾರೆ. ಆ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆಯ ಮಾಹಿತಿ ತಿಳಿದು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್, “ದೆಹಲಿಯಲ್ಲಿ ಹುಡುಗರಿಗೆ ಕೂಡ ಸುರಕ್ಷತೆಯಿಲ್ಲ” ಎಂದು ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸ್ವಾತಿ ಮಲಿವಾಲ್, “12 ವರ್ಷದ ಬಾಲಕನ ಮೇಲೆ ನಾಲ್ವರು ಅಮಾನುಷವಾಗಿ ಅತ್ಯಾಚಾರ ಮಾಡಿದ್ದಾರೆ ಮತ್ತು ಕೋಲುಗಳಿಂದ ಹೊಡೆದಿದ್ದಾರೆ. ನಂತರ ಆತನ ಗುಪ್ತಾಂಗಗಳಿಗೆ ರಾಡ್ ಹಾಕಿ ಹಿಂಸೆ ನೀಡಲಾಗಿದೆ. ಇದರಿಂದ ಆ ಬಾಲಕ ಪ್ರಜ್ಞಾಹೀನನಾಗಿದ್ದಾನೆ” ಎಂದಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿನ್ನು ಅತ್ಯಾಚಾರ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಗಲ್ಲ; ಹೊಸ ಮಸೂದೆಗೆ ಅಂಗೀಕಾರ

ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳಲ್ಲಿ ಒಬ್ಬರನ್ನು ಬಂಧಿಸಿದ್ದಾರೆ. ಆದರೆ ಅವರಲ್ಲಿ ಮೂವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ನಾಲ್ವರು ಸೇರಿ ಅಪ್ರಾಪ್ತ ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಮತ್ತು ಆತನ ಖಾಸಗಿ ಭಾಗಗಳಲ್ಲಿ ರಾಡ್ ಕೂಡ ಹಾಕಿದ್ದಾರೆ. ಸೆಪ್ಟೆಂಬರ್ 22ರಂದು ಆ ಬಾಲಕ ತನ್ನ ಪೋಷಕರಿಗೆ ಈ ಘಟನೆಯ ಬಗ್ಗೆ ತಿಳಿಸಿದನು. ವರದಿಗಳ ಪ್ರಕಾರ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆಯ ದೂರು ನೀಡಿ 6 ದಿನಗಳ ನಂತರ ಎಫ್​ಐಆರ್​ ದಾಖಲಾಗಿರುವುದು ಅನುಮಾನಕ್ಕೂ ಕಾರಣವಾಗಿದೆ. ಮಗ ತಮಗೆ ಈ ವಿಷಯ ತಿಳಿಸಿದ ನಂತರ ಹುಡುಗನ ತಾಯಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ತಮ್ಮ ಮನೆಯ ಬಳಿ ತನ್ನ ಮಗನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅವರು ದೂರು ನೀಡಿದ್ದರು. ಆ ಬಾಲಕನಿಗೆ ಖಾಸಗಿ ಅಂಗಗಳಲ್ಲಿ ತೀವ್ರ ಗಾಯಗಳಾಗಿದ್ದು, ಸ್ಥಳೀಯರು ಆತನನ್ನು ಮನೆಗೆ ಕರೆತಂದಿದ್ದರು. ಏನಾಯಿತೆಂದು ತೀವ್ರ ವಿಚಾರಣೆ ನಡೆಸಿದಾಗ ಆತ ನಡೆದ ವಿಚಾರವನ್ನು ಅಪ್ಪ-ಅಮ್ಮನ ಬಳಿ ಹೇಳಿಕೊಂಡಿದ್ದ.

ಇದನ್ನೂ ಓದಿ: Shocking News: ಸಾಮೂಹಿಕ ಅತ್ಯಾಚಾರ, ತೀವ್ರ ರಕ್ತಸ್ರಾವ; ಬಚಾವಾಗಲು ಬೆತ್ತಲೆಯಾಗಿ ಓಡಿದ ಬಾಲಕಿಯ ವಿಡಿಯೋ ವೈರಲ್

ಎಲ್ಲಾ ಆರೋಪಿಗಳು ಆ ಬಾಲಕನ ಮನೆಯ ಸಮೀಪ ವಾಸಿಸುತ್ತಿದ್ದಾರೆ. ಅವರ ಮಧ್ಯೆ ನಡೆದ ಸಣ್ಣ ವಿಷಯಕ್ಕಾಗಿ ಜಗಳವಾಡಿದ ನಂತರ ಅವನಿಗೆ ಪಾಠ ಕಲಿಸಲು ಅವರು ಈ ರೀತಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ. ಉಳಿದ ಮೂವರನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ. ಹಲ್ಲೆಗೊಳಗಾದ ಬಾಲಕ ಇನ್ನೂ ವೈದ್ಯಕೀಯ ನಿಗಾದಲ್ಲಿದ್ದಾರೆ. ಅವನ ಹೇಳಿಕೆಯನ್ನು ನಂತರ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Mon, 26 September 22