ಕುಡಿದ ಮತ್ತಿನಲ್ಲಿ ಪ್ರೇಯಸಿನ್ನು ಕೊಲೆ ಮಾಡಿದ ಪ್ರಿಯಕರ; ವಿಜಯಪುರಕ್ಕೆ ಶವ ಸಾಗಿಸುವಾಗ ಪ್ರಿಯಕರ ಅರೇಸ್ಟ್
ಪ್ರೇಯಸಿಯನ್ನು ಕೊಲೆ ಮಾಡಿ ಮೃತ ದೇಹವನ್ನು ಆಂಬ್ಯುಲೆನ್ಸ್ನಲ್ಲಿ ಸಾಗಿಸುತ್ತಿದ್ದ ಆರೋಪಿಯನ್ನು ಮಹಾರಾಷ್ಟ್ರದ ಭಿವಂಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ: ಪ್ರೇಯಸಿಯನ್ನು ಕೊಲೆ ಮಾಡಿ ಮೃತ ದೇಹವನ್ನು ಆಂಬ್ಯುಲೆನ್ಸ್ನಲ್ಲಿ (Ambulance) ಸಾಗಿಸುತ್ತಿದ್ದ ಆರೋಪಿಯನ್ನು ಮಹಾರಾಷ್ಟ್ರದ (Maharashtra) ಭಿವಂಡಿ ನಗರ ಪೊಲೀಸರು ಬಂಧಿಸಿದ್ದಾರೆ. ಸದ್ದಾಂ ಸಯ್ಯದ್ (30) ಕೊಲೆ ಆರೋಪಿ. ಕವಿತಾ ಮಾದರ (24) ಮೃತ ಮಹಿಳೆ. ಕವಿತಾ ಮಾದರ ಮಹಾರಾಷ್ಟ್ರದ ಭಿವಂಡಿಯಲ್ಲಿ ತನ್ನ ಸ್ನೇಹಿತೆಯರೊಂದಿಗೆ ವಾಸವಾಗಿದ್ದಳು. ಜೀವನಕ್ಕಾಗಿ ಸಣ್ಣ ಕೆಲಸಗಳನ್ನು ಮಾಡುತ್ತಿದ್ದು ಜೊತೆಗೆ ವೇಶ್ಯವೃತ್ತಿಯನ್ನು ಮಾಡುತ್ತಿದ್ದಳು. ಆದರೆ ಇತ್ತೀಚಿಗೆ ಅದರಿಂದ ಹೊರಬಂದು ಉತ್ತಮ ಜೀವನ ನಡೆಸಲು ಮುಂದಾಗಿದ್ದಳು.
ಕವಿತಾ ವಿಜಯಪುರ ಮೂಲದವಳಾಗಿದ್ದು, ವಿಜಯಪುರದಲ್ಲಿ ಕವಿತಾಳ ಅಜ್ಜಿ ವಾಸವಿರುತ್ತಾರೆ. ಭಿವಂಡಿಯ ಹೊಟೇಲ್ವೊಂದರಲ್ಲಿ ಕವಿತಾಳಿಗೆ ಸದ್ದಾಂ ಸಯ್ಯದ್ ಪರಿಚಯವಾಗುತ್ತಾನೆ. ಮುಂದೆ ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ. ಮುಂದೆ ಇವರು ಮದುವೆಯಾಗಲು ನಿಶ್ಚಯಿಸಿ, ಲಿವಿಂಗ್ಟುಗೆದರ್ನಲ್ಲಿ ಇರುತ್ತಾರೆ. ಈ ವಿಷಯ ತಿಳಿದು ಸಯ್ಯದ್ ಕುಟುಂಬ ವಿರೋಧಿಸುತ್ತಿರುತ್ತಾರೆ.
ಈ ವಿಚಾರವಾಗಿ ಸಯ್ಯದ್ ಮತ್ತು ಕವಿತಾ ನಡುವೆ ಜಗಳವಾಡುತ್ತಿದ್ದರು. ಸಯ್ಯದ್ ಮದ್ಯ ವ್ಯಸನಿಯಾಗಿದ್ದು, ಶುಕ್ರವಾರ (ಸೆ. 23) ಮಧ್ಯಾಹ್ನ ಕುಡಿದು ಬಂದು ಕವಿತಾಳೊಂದಿಗೆ ಜಗಳವಾಡುತ್ತಿದ್ದನು.ಜಗಳ ತಾರಕಕ್ಕೆ ಏರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಕವಿತಾ ಅಪಘಾತದಲ್ಲಿ ಮೃತಪಟ್ಟಿದ್ದಾಳೆ ಎಂದು ಸುಳ್ಳು ಹೇಳಿ ಆಂಬ್ಯುಲೆನ್ಸ್ ಕರೆಸಿ ಆಂಬ್ಯುಲೆನ್ಸ್ನಲ್ಲಿ ಶವವನ್ನು ವಿಜಯಪುರಕ್ಕೆ ತರಲು ಮುಂದಾಗಿದ್ದಾನೆ.
ನಂತರ ಸಯ್ಯದ್ ಕವಿತಾಳ ಅಜ್ಜಿಗೆ ಕರೆ ಮಾಡಿ, ಕವಿತಾ ಅಪಘಾತದಲ್ಲಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾನೆ. ಆಗ ಅಜ್ಜಿ ಕವಿತಾಳ ಸ್ನೇಹಿತೆಯರಿಗೆ ಕರೆ ಮಾಡಿ ಹೇಳಿದ್ದಾಳೆ. ಕೂಡಲೆ ಸ್ನೇಹಿತೆಯರು ಮಹರಾಷ್ಟ್ರದ ಮನೆಗೆ ಬಂದು ನೋಡಿದಾಗ ಆರೋಪಿಯು ಮನೆಯಲ್ಲಿ ಇರಲಿಲ್ಲ ಮತ್ತು ಕವಿತಾನು ಇರಲಿಲ್ಲ. ಕೂಡಲೆ ಸ್ನೇಹಿತೆಯರು ಪೊಲೀಸರಿಗೆ ವಿಷಯ ತಿಳಸಿದ್ದಾರೆ. ಪೊಲೀಸರು ಪುಣೆ ಬಳಿ ವಾಹನವನ್ನು ತಡೆದು ಶವದೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ