AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೂಟ್ಯೂಬ್ ನೋಡಿ ಗಂಡನ ಕಿವಿಗೆ ವಿಷ ಸುರಿದು ಕೊಂದ ಹೆಂಡತಿ!

ತೆಲಂಗಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹೆಂಡತಿಯೊಬ್ಬಳು ತನ್ನ ಗಂಡನ ಕಿವಿಗೆ ವಿಷ ಸುರಿದು ಕೊಂದಿದ್ದಾಳೆ. ತಿನ್ನುವ ಆಹಾರದಲ್ಲಿ ವಿಷ ಹಾಕಿ ಕೊಲ್ಲುವುದು ಗೊತ್ತಿದೆ, ಬಲವಂತವಾಗಿ ವಿಷ ಕುಡಿಸಿ ಕೊಂದಿದ್ದೂ ಗೊತ್ತಿದೆ. ಆದರೆ, ಕಿವಿಗೆ ವಿಷ ಹಾಕಿದರೂ ಸಾಯುತ್ತಾರಾ? ಎಂದು ನಿಮಗೆ ಆಶ್ಚರ್ಯವಾಗಿರಬಹುದು. ಆದರೆ, ಆಕೆ ಯೂಟ್ಯೂಬ್ ನೋಡಿ ಚೆನ್ನಾಗಿ ಪ್ಲಾನ್ ಮಾಡಿ ಹೊಸ ರೀತಿಯಲ್ಲಿ ಕೊಲೆಗೆ ಸಂಚು ರೂಪಿಸಿದ್ದಳು.

ಯೂಟ್ಯೂಬ್ ನೋಡಿ ಗಂಡನ ಕಿವಿಗೆ ವಿಷ ಸುರಿದು ಕೊಂದ ಹೆಂಡತಿ!
Husband Wife Fight
ಸುಷ್ಮಾ ಚಕ್ರೆ
|

Updated on: Aug 07, 2025 | 10:39 PM

Share

ತೆಲಂಗಾಣ, ಆಗಸ್ಟ್ 7: ತೆಲಂಗಾಣದಲ್ಲಿ (Telangana) ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ (Shocking News) ಬೆಳಕಿಗೆ ಬಂದಿದೆ. ಈ ಕೊಲೆಗೆ ಎಷ್ಟು ಚೆನ್ನಾಗಿ ಸಂಚು ರೂಪಿಸಲಾಗಿತ್ತೆಂದರೆ, ಅದನ್ನು ಕಾರ್ಯಗತಗೊಳಿಸಲು ಆ ಮಹಿಳೆ ಯೂಟ್ಯೂಬ್ ನಿಂದ ಸಲಹೆಗಳನ್ನು ಪಡೆದಿದ್ದಳು. ಯಾರಿಗೂ ಅನುಮಾನ ಬರಬಾರದು, ಗಂಡನ ದೇಹದಲ್ಲಿ ವಿಷದ ಅಂಶ ಸಿಗಬಾರದು ಎಂದು ಆಕೆ ಆತನ ಕಿವಿಗೆ ವಿಷ ಸುರಿದು ಕೊಲೆ ಮಾಡಿದ್ದಳು. ಮೃತನನ್ನು ಸಂಪತ್ ಎಂದು ಗುರುತಿಸಲಾಗಿದೆ.

ಸಂಪತ್ ಗ್ರಂಥಾಲಯದಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಪತ್ ಮದ್ಯಪಾನದ ವ್ಯಸನಿಯಾಗಿದ್ದ. ಯಾವಾಗಲೂ ಕುಡಿದು ಮನೆಗೆ ಬರುತ್ತಿದ್ದ ಆತ ಕುಡಿದ ಅಮಲಿನಲ್ಲಿ ತನ್ನ ಪತ್ನಿ ರಮಾದೇವಿಯೊಂದಿಗೆ ಜಗಳವಾಡುತ್ತಿದ್ದ. ಅವರಿಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ. ತಿಂಡಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಮಾದೇವಿ ಅದೇ ಹಣದಿಂದ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು. ಆಕೆ ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ರಮಾದೇವಿಗೆ 50 ವರ್ಷದ ಕರಣ್ ರಾಜಯ್ಯ ಎಂಬಾತನ ಭೇಟಿಯಾಗಿತ್ತು. ನಂತರ ಅವರಿಬ್ಬರ ನಡುವೆ ಅಕ್ರಮ ಸಂಬಂಧ ಬೆಳೆಯಿತು.

ಇದನ್ನೂ ಓದಿ: ಮಧ್ಯಪ್ರದೇಶ: ಯುವತಿ ಮದುವೆಯಾಗಬೇಕಿದ್ದ ಹುಡುಗನನ್ನು ಥಳಿಸಿ ಆಕೆಯ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ

ಪೊಲೀಸ್ ತನಿಖೆಯಲ್ಲಿ ರಮಾದೇವಿ ತನ್ನ ಗಂಡನನ್ನು ಕೊಲ್ಲಲು ಸಂಚು ಮಾಡಿದ್ದಾಳೆಂದು ತಿಳಿದುಬಂದಿದೆ. ಇದಕ್ಕಾಗಿ, ಅವಳು ಯೂಟ್ಯೂಬ್‌ನಲ್ಲಿ ಕಿವಿಗೆ ಕೀಟನಾಶಕ ಸುರಿದು ಕೊಲ್ಲುವ ವಿಧಾನವನ್ನು ವಿವರಿಸುವ ವೀಡಿಯೊವನ್ನು ನೋಡಿದ್ದಳು. ರಮಾದೇವಿ ತನ್ನ ಪ್ರಿಯಕರ ರಾಜಯ್ಯನಿಗೆ ಈ ಭಯಾನಕ ಪ್ಲಾನ್ ಬಗ್ಗೆ ಹೇಳಿದ್ದಳು. ಆತ ಆಕೆಗೆ ಕೀಟನಾಶಕ ತಂದುಕೊಟ್ಟಿದ್ದ. ಅವರಿಬ್ಬರೂ ಕೊಲೆಯನ್ನು ಪ್ಲಾನ್ ಮಾಡಿದ್ದರು.

ಇದನ್ನೂ ಓದಿ: ಅಡುಗೆ ಮಾಡೋ ಬಾಣಲೆಯಿಂದ ಹೊಡೆದು ಅಪ್ಪನನ್ನು ಕೊಂದ ಮಗಳು!

ಸಂಪತ್ ರಮಾದೇವಿಯ ಪ್ರಿಯಕರ ಮತ್ತು ಸ್ನೇಹಿತನಿಂದ ಕುಡಿದಿದ್ದ. ಸಂಪತ್ ತನ್ನ ಪ್ರಜ್ಞೆಯನ್ನು ಕಳೆದುಕೊಂಡು ಕುಡಿದು ನಿದ್ರಿಸಿದಾಗ, ರಮಾದೇವಿಯ ಪ್ರಿಯಕರ ರಾಜಯ್ಯ ಅವನ ಕಿವಿಗೆ ಕೀಟನಾಶಕ ಹಾಕಿದನು. ಇದರಿಂದ ಸಂಪತ್ ಸ್ಥಳದಲ್ಲೇ ಸಾವನ್ನಪ್ಪಿದನು. ಮರುದಿನ, ರಮಾದೇವಿ ತನ್ನ ಗಂಡನ ಬಗ್ಗೆ ಪೊಲೀಸ್ ಠಾಣೆಯಲ್ಲಿ ನಾಪತ್ತೆಯ ದೂರು ದಾಖಲಿಸಿದಳು. ಆಗಸ್ಟ್ 1ರಂದು ಸಂಪತ್ ಅವರ ಶವ ಪತ್ತೆಯಾಗಿದ್ದು, ರಮಾದೇವಿ ಮತ್ತು ರಾಜಯ್ಯ ಅವರ ಮರಣೋತ್ತರ ಪರೀಕ್ಷೆ ಮಾಡದಂತೆ ಕೇಳಿಕೊಂಡಿದ್ದರು. ಇದರಿಂದ ಪೊಲೀಸರಿಗೆ ಅನುಮಾನ ಬಂದಿತ್ತು. ಆದರೆ ರಮಾದೇವಿಯ ಮಗ ತನ್ನ ತಂದೆಯ ಸಾವನ್ನು ಅನುಮಾನಿಸಿ, ಪೊಲೀಸರಿಂದ ತನಿಖೆಗೆ ಒತ್ತಾಯಿಸಿದ್ದ. ಕೊನೆಗೆ ತನಿಖೆ ನಡೆಸಿದಾಗ ನಿಜಾಂಶ ಬಯಲಿಗೆ ಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ