ಪಿಜ್ಜಾ ವಿಚಾರಕ್ಕೆ ಮಹಿಳೆ ಮೇಲೆ ಅತ್ತಿಗೆಯ ಅಣ್ಣನಿಂದ ಗುಂಡಿನ ದಾಳಿ

ದೆಹಲಿಯ ಸೀಲಂಪುರದಲ್ಲಿ ಪಿಜ್ಜಾ ತಿನ್ನುವ ಕುರಿತು ಗಲಾಟೆ ಉಂಟಾಗಿ ಮಹಿಳೆಯ ಅತ್ತಿಗೆಯ ಅಣ್ಣ ಗುಂಡು ಹಾರಿಸಿದ್ದಾನೆ. ಆ ಗುಂಡಿನಿಂದ ಮಹಿಳೆಗೆ ಗಂಭೀರವಾಗಿ ಗಾಯಗಳಾಗಿವೆ. ಮನೆಗೆ ತಂದಿದ್ದ ಪಿಜ್ಜಾ ವಿತರಣೆ ವಿಚಾರವಾಗಿ ನಡೆದ ಜಗಳದಲ್ಲಿ ಮಹಿಳೆಯೊಬ್ಬರ ಹೊಟ್ಟೆಗೆ ಗುಂಡು ತಗುಲಿದೆ. ಅತ್ತಿಗೆ- ನಾದಿನಿಯರ ನಡುವಿನ ಜಗಳ, ಗುಂಡಿನ ದಾಳಿಗೆ ಕಾರಣವಾಯಿತು.

ಪಿಜ್ಜಾ ವಿಚಾರಕ್ಕೆ ಮಹಿಳೆ ಮೇಲೆ ಅತ್ತಿಗೆಯ ಅಣ್ಣನಿಂದ ಗುಂಡಿನ ದಾಳಿ
ಪಿಜ್ಜಾ

Updated on: Oct 17, 2024 | 9:46 PM

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಸೀಲಂಪುರ್ ಪ್ರದೇಶದಲ್ಲಿ ಪಿಜ್ಜಾ ವಿಚಾರಕ್ಕೆ ಒಂದೇ ಕುಟುಂಬದ ಇಬ್ಬರು ಮಹಿಳೆಯರ ನಡುವೆ ಮಾರಾಮಾರಿ ನಡೆದಿದೆ. ಈ ಆಘಾತಕಾರಿ ಘಟನೆಯಲ್ಲಿ ಮಹಿಳೆಯ ಮೇಲೆ ಗುಂಡು ಹಾರಿಸಲಾಗಿದೆ. ಪಿಜ್ಜಾ ವಿತರಣೆ ವಿಚಾರವಾಗಿ ನಡೆದ ಜಗಳದಲ್ಲಿ ಓರ್ವ ಮಹಿಳೆಯ ಹೊಟ್ಟೆಗೆ ಗುಂಡು ತಗುಲಿದೆ.

ಬುಧವಾರ (ಅಕ್ಟೋಬರ್ 16) ರಾತ್ರಿ ಸೀಲಾಂಪುರ ಪ್ರದೇಶದಲ್ಲಿ ಪಿಜ್ಜಾ ತಿನ್ನುವ ವಿಚಾರಕ್ಕೆ ಜಗಳ ಸಂಭವಿಸಿದೆ ಮತ್ತು ಗುಂಡುಗಳನ್ನು ಹಾರಿಸಲಾಗಿದೆ. ಅತ್ತಿಗೆ ಮತ್ತು ನಾದಿನಿಯ ನಡುವೆ ಅವರ ಅತ್ತೆಯ ಮನೆಯಲ್ಲಿ ಜಗಳ ನಡೆದ ನಂತರ ಅತ್ತಿಗೆ ತನ್ನ ಅಣ್ಣನನ್ನು ಕರೆದರು. ಆಗ ಅವರೆಲ್ಲರ ನಡುವೆ ವಾಗ್ವಾದ ನಡೆದಿದೆ. ಜೀಶಾನ್ ಎಂಬ ಅಣ್ಣ ತನ್ನ ಮನೆಯಲ್ಲಿ ಪಿಜ್ಜಾ ತಂದು ತಮ್ಮ ಮತ್ತು ಅವನ ಕುಟುಂಬಕ್ಕೆ ವಿತರಿಸಲು ಪ್ರಾರಂಭಿಸಿದನು.


ಇದನ್ನೂ ಓದಿ: ಓವರ್‌ಟೇಕ್ ಮಾಡಿದ್ದಕ್ಕೆ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ಅಮ್ಮ!

ಜೀಶಾನ್ ಪಿಜ್ಜಾ ಹಂಚಿದ್ದಕ್ಕೆ ಆತನ ಪತ್ನಿ ಕೋಪಗೊಂಡರು. ಇದೇ ವಿಚಾರಕ್ಕೆ ಜಗಳ ಉಂಟಾಯಿತು. ಕೊನೆಗೆ ಆಕೆಯ ಅತ್ತಿಗೆ ತನ್ನ ಅಣ್ಣನನ್ನು ಮನೆಗೆ ಕರೆದರು. ಆಗ ಆತನೂ ಬಂದು ಜಗಳವಾಡಿ, ಕೋಪದಿಂದ ಜೀಶಾನ್​ನ ಹೆಂಡತಿಯ ಮೇಲೆ ಗುಂಡು ಹಾರಿಸಿದ್ದಾನೆ. ಆಕೆಗೆ ಗಂಭೀರ ಗಾಯಗಳಾಗಿವೆ. ಮಹಿಳೆಯ ಹೊಟ್ಟೆಗೆ ಗುಂಡು ಹಾರಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಗಾಯಗೊಂಡಿರುವ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವರದಿಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ