Kannada News Crime Shraddha Walkar Murder: Shraddha skull mobile phone murder weapon still missing 10 clues cops have against Aftab
Shraddha Walkar Murder: ಇನ್ನೂ ಪತ್ತೆಯಾಗಿಲ್ಲ ಶ್ರದ್ಧಾಳ ತಲೆ, ಮೊಬೈಲ್; ಅಫ್ತಾಬ್ ವಿರುದ್ಧ ಪೊಲೀಸರಿಗೆ ಸಿಕ್ಕಿರುವ ಸಾಕ್ಷಿಗಳಿವು
Delhi Murder Case: ಶ್ರದ್ಧಾಳನ್ನು ಕೊಂದ ನಂತರ, ಅಫ್ತಾಬ್ ಆಕೆಯ ಬ್ಯಾಂಕ್ ಖಾತೆಯ ಆ್ಯಪ್ ಅನ್ನು ಆಪರೇಟ್ ಮಾಡಿ 54,000 ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಆ ಹಣದಲ್ಲಿ ಅಫ್ತಾಬ್ ದೊಡ್ಡ ಫ್ರಿಡ್ಜ್ ಖರೀದಿಸಿದ್ದ ಎನ್ನಲಾಗಿದೆ.
ಅಫ್ತಾಬ್- ಶ್ರದ್ಧಾ
Follow us on
ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಕರ್ ಹತ್ಯೆ ನಡೆದು 6 ತಿಂಗಳು ಕಳೆದಿವೆ. ಹೀಗಾಗಿ, ಈ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಮೇ 18ರಂದು ನಡೆದ ಜಗಳದ ನಂತರ ಅಫ್ತಾಬ್ ತನ್ನ ಲಿವ್ ಇನ್ ಪಾರ್ಟನರ್ ಶ್ರದ್ಧಾಳ ಕತ್ತು ಹಿಸುಕಿ ಕೊಂದಿದ್ದ. ಇದೀಗ ಪೊಲೀಸರು ಅಫ್ತಾಬ್ ಅಮೀನ್ ಪೂನಾವಾಲಾನ ತನಿಖೆ ನಡೆಸುತ್ತಿದ್ದು, ಆತ ತುಂಡು ಮಾಡಿ ಬಿಸಾಡಿರುವ ಶ್ರದ್ಧಾಳ ದೇಹದ 35 ಭಾಗಗಳ ಪೈಕಿ ಕೆಲವು ಮಾತ್ರ ಪತ್ತೆಯಾಗಿವೆ. ಆಕೆಯ ತಲೆಬುರುಡೆ ಸಿಗದೆ ಈ ಪ್ರಕರಣದ ತನಿಖೆ ಮುಂದುವರೆಯುವುದು ಅಸಾಧ್ಯವಾಗಿರುವುದರಿಂದ ಅಫ್ತಾಬ್ ವಿರುದ್ಧದ ಪ್ರಬಲ ಸಾಕ್ಷಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಲೇ ಇದ್ದಾರೆ. ಅಫ್ತಾಬ್ನಿಗೆ ಕೊಲೆಗಾರ ಎಂದು ಶಿಕ್ಷೆ ನೀಡಬೇಕಾದರೆ ಶ್ರದ್ಧಾಳ ತಲೆಬುರುಡೆ, ಆಕೆಯ ಮೊಬೈಲ್, ಆಕೆಯನ್ನು ಕೊಂದ ಆಯುಧ ಸಿಗಲೇಬೇಕಾದ ಅನಿವಾರ್ಯತೆಯಿದೆ. ಹಾಗಾದರೆ, ಪೊಲೀಸರಿಗೆ ಅಫ್ತಾಬ್ ವಿರುದ್ಧ ಸಿಕ್ಕಿರುವ ಪ್ರಬಲ ಸಾಕ್ಷಿಗಳು ಯಾವುವು? ಎಂಬ ಮಾಹಿತಿ ಇಲ್ಲಿದೆ.
ಪೋಲೀಸರಿಗೆ ಶ್ರದ್ಧಾಳ ದೇಹವನ್ನು ಬಿಸಾಡಿದ್ದ ಕಾಡಿನಲ್ಲಿ 10-13 ಮೂಳೆಗಳು ಸಿಕ್ಕಿವೆ. ಶ್ರದ್ಧಾಳನ್ನು ಕೊಂದ ನಂತರ ಅಫ್ತಾಬ್ ಆಕೆಯ ದೇಹದ 35 ತುಂಡುಗಳನ್ನು ವಿಲೇವಾರಿ ಮಾಡಿದ್ದಾಗಿ ಹೇಳಿದ್ದಾನೆ. ಆದರೆ, ಆಕೆಯ ತಲೆ ಇನ್ನೂ ಪತ್ತೆಯಾಗಿಲ್ಲ.
ಕಾಡಿನಲ್ಲಿ ಸಿಕ್ಕಿರುವ ಮೂಳೆಗಳು ಮನುಷ್ಯರದ್ದೇ ಎನ್ನಲಾಗಿದ್ದು, ಈ ಕುರಿತು ನಿಖರತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಛತ್ತರ್ಪುರ್ ಪ್ರದೇಶದಲ್ಲಿ ಅಫ್ತಾಬ್- ಶ್ರದ್ಧಾ ವಾಸವಾಗಿದ್ದ ಫ್ಲಾಟ್ನ ಅಡುಗೆ ಮನೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಅದರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಮನೆಯಲ್ಲಿ ಸಿಕ್ಕ ರಕ್ತ ಮತ್ತು ಕಾಡಿನಲ್ಲಿ ಸಿಕ್ಕ ದೇಹದ ಭಾಗಗಳು ಯಾರದೆಂದು ಪತ್ತೆ ಮಾಡಲು ಶ್ರದ್ಧಾಳ ತಂದೆಯ DNA ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ
ಅಫ್ತಾಬ್‌ನ ಫ್ಲಾಟ್‌ನಲ್ಲಿ ವಿಪರೀತ ನೀರಿನ ಬಿಲ್ ಬಂದಿರುವುದು ಪೊಲೀಸರಲ್ಲಿ ಅನುಮಾನ ಹುಟ್ಟಿಸಿದೆ. ಬಹುಶಃ ಶ್ರದ್ಧಾಳನ್ನು ಕೊಂದ ಬಳಿಕ ಮನೆಯನ್ನು ಕ್ಲೀನ್ ಮಾಡಲು ಅಫ್ತಾಬ್ ಅಪಾರ ಪ್ರಮಾಣದ ನೀರನ್ನು ಬಳಸಿದ್ದಾನೆ ಎಂದು ಊಹಿಸಲಾಗಿದೆ.
ತನಿಖಾಧಿಕಾರಿಗಳು ಅಫ್ತಾಬ್ ವಾಸವಾಗಿದ್ದ ಫ್ಲಾಟ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪಡೆದಿದ್ದಾರೆ. ಹೆಚ್ಚಿನ ಸಿಸಿಟಿವಿಗಳು 15 ದಿನಗಳ ದಾಖಲೆಗಳನ್ನು ಸೆರೆಹಿಡಿಯುವುದರಿಂದ 6 ತಿಂಗಳ ಹಿಂದಿನ ದೃಶ್ಯಾವಳಿಗಳನ್ನು ಕಲೆಹಾಕುವುದು ಪೊಲೀಸರಿಗೆ ಸವಾಲಾಗಿದೆ.
ಶ್ರದ್ಧಾ ಅವರ ವಸ್ತುಗಳಿದ್ದ ಬ್ಯಾಗ್ ಪತ್ತೆಯಾಗಿದೆ. ಆದರೆ ಅದನ್ನು ಕುಟುಂಬದವರು ಇನ್ನೂ ಗುರುತಿಸಿಲ್ಲ.
ದೆಹಲಿ ಪೊಲೀಸರು ಅಫ್ತಾಬ್‌ನ ಮಂಪರು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಆತ ಸತ್ಯವನ್ನು ಹೇಳುತ್ತಿದ್ದಾನೆಯೇ ಅಥವಾ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆಯೇ ಎಂಬುದನ್ನು ಸಾಬೀತುಪಡಿಸಲು ಈ ಪರೀಕ್ಷೆಗೆ ಅವಕಾಶ ಕೇಳಲಾಗಿದೆ.
ಶ್ರದ್ಧಾಳ ದೇಹವನ್ನು ಪೀಸ್ ಮಾಡಿದ ನಂತರ ಅಫ್ತಾಬ್‌ನ ಕೈಗೂ ಚಾಕುವಿನಿಂದ ಗಾಯಗಳಾಗಿತ್ತು. ಆ ಗಾಯದ ಚಿಕಿತ್ಸೆಗಾಗಿ ಅಫ್ತಾಬ್ ಮೇ ತಿಂಗಳಲ್ಲಿ ವೈದ್ಯರನ್ನು ಭೇಟಿ ಮಾಡಿದ್ದ. ವೈದ್ಯರು ಅಫ್ತಾಬ್ ಬಹಳ ಚಡಪಡಿಸುತ್ತಿದ್ದ, ಹಣ್ಣುಗಳನ್ನು ಕತ್ತರಿಸುವಾಗ ಕೈಗೆ ಗಾಯವಾಗಿತ್ತು ಎಂದು ಹೇಳಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಶ್ರದ್ಧಾಳನ್ನು ಕೊಂದ ನಂತರ, ಅಫ್ತಾಬ್ ಆಕೆಯ ಬ್ಯಾಂಕ್ ಖಾತೆಯ ಆ್ಯಪ್ ಅನ್ನು ಆಪರೇಟ್ ಮಾಡಿ 54,000 ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಆ ಹಣದಲ್ಲಿ ಅಫ್ತಾಬ್ ದೊಡ್ಡ ಫ್ರಿಡ್ಜ್ ಖರೀದಿಸಿದ್ದ ಎನ್ನಲಾಗಿದೆ. ಆ ಫ್ರಿಡ್ಜ್ನ ಬಿಲ್ ಕೂಡ ಪತ್ತೆಯಾಗಿದೆ.