ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಮೃತನ ತಂದೆಗೆ ಹಾಸ್ಟೆಲ್ ವಾರ್ಡನ್ ಕರೆ ಮಾಡಿ ಹೇಳಿದ್ದೇನು? ಇಲ್ಲಿದೆ ಆಡಿಯೋ ಸಂಭಾಷಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 22, 2024 | 7:36 PM

ಹಾಸನದ ಉದಯಗಿರಿ ಬಡಾವಣೆಯಲ್ಲಿರೋ ಹಾಸನದ ಪ್ರತಿಷ್ಠಿತ ಮಾಸ್ಟರ್ ಪಿಯು ಕಾಲೇಜಿನ ಹಾಸ್ಟಲ್ ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿಕಾಸ್ ಸಾವಿಗೀಡಾಗಿದ್ದು ಇದೊಂದು ಕೊಲೆ ಎಂದು ಸಂಬಂದಿಕರು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವಿಕಾಸ್ ತಂದೆ ಸುರೇಶ್‌ಗೆ ಹಾಸ್ಟೆಲ್ ವಾರ್ಡನ್ ಕರೆ ಮಾಡಿದ್ದ ಆಡಿಯೋ ರೆಕಾರ್ಡ್ ಲಭ್ಯವಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಮೃತನ ತಂದೆಗೆ ಹಾಸ್ಟೆಲ್ ವಾರ್ಡನ್ ಕರೆ ಮಾಡಿ ಹೇಳಿದ್ದೇನು? ಇಲ್ಲಿದೆ ಆಡಿಯೋ ಸಂಭಾಷಣೆ
ಪ್ರಾತಿನಿಧಿಕ ಚಿತ್ರ, ಮೃತ ವಿದ್ಯಾರ್ಥಿ ವಿಕಾಸ್
Follow us on

ಹಾಸನ, ಫೆಬ್ರವರಿ 22: ನಗರದ ಉದಯಗಿರಿಯಲ್ಲಿರುವ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು (death) ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವಿಕಾಸ್ ತಂದೆ ಸುರೇಶ್‌ಗೆ ಹಾಸ್ಟೆಲ್ ವಾರ್ಡನ್ ಕರೆ ಮಾಡಿದ್ದ ಆಡಿಯೋ ರೆಕಾರ್ಡ್ ಲಭ್ಯವಾಗಿದೆ. ನಿಮ್ಮ ಮಗನಿಗೆ ಅನಾರೋಗ್ಯ ಬನ್ನಿ ಎಂದು ವಾರ್ಡನ್​ ಕರೆ ಮಾಡಿದ್ದು, ಆತಂಕದಿಂದಲೇ ಪೋಷಕರು ಬಂದಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ವಿಕಾಸ್ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಾರ್ಡನ್‌ ಹಾಗೂ ವಿಕಾಸ್ ತಂದೆ ಮಾತನಾಡಿರು ಆಡಿಯೋ ಸಂಭಾಷಣೆ ಹೀಗಿದೆ 

ಹಾಸ್ಟೆಲ್ ವಾರ್ಡನ್‌ ಹೇಮಂತ್: ಸರ್ ಅರ್ಜೆಂಟ್ ನೀವು ನಿಮ್ಮ ಮನೆಯವರು ಹಾಸ್ಟೆಲ್ ಹತ್ತಿರ ಬನ್ನಿ ಸರ್.
ವಿಕಾಸ್ ತಂದೆ ಸುರೇಶ್: ಯಾಕೆ ಸರ್?
ಹಾಸ್ಟೆಲ್ ವಾರ್ಡನ್‌ ಹೇಮಂತ್: ಒಂಚೂರು ಹುಷಾರಿಲ್ಲ ಅನ್ನುತ್ತಿದ್ದಾರೆ.
ವಿಕಾಸ್ ತಂದೆ ಸುರೇಶ್: ಏನ್ ಸರ್ ಹಿಂಗನ್ನುತ್ತೀರಾ
ಹಾಸ್ಟೆಲ್ ವಾರ್ಡನ್‌ ಹೇಮಂತ್: ಬನ್ನಿ ಸರ್ ಸ್ವಲ್ಪ ಬೇಗ, ತಕ್ಷಣ ಈ ಕ್ಷಣದಲ್ಲೇ ಇಮಿಡಿಯಟ್ಲಿ ಬನ್ನಿ ಸರ್.
ವಿಕಾಸ್ ತಂದೆ ಸುರೇಶ್: ತುಂಬಾ ಏನು ಅಷ್ಟೊಂದು ಸೀರಿಯಸ್ ಆಗಿದೆಯಾ?
ಹಾಸ್ಟೆಲ್ ವಾರ್ಡನ್‌ ಹೇಮಂತ್: ಹಾ ಹೌದು ಸರ್.
ವಿಕಾಸ್ ತಂದೆ ಸುರೇಶ್: ಇದೇನು ಸರ್ ಏನಾದರೂ ತಗೊಂಡಿದಿನಾ ಸರ್.
ಹಾಸ್ಟೆಲ್ ವಾರ್ಡನ್‌ ಹೇಮಂತ್: ಬನ್ನಿ, ಬನ್ನಿ ಸರ್ ಬೇಗ ಬನ್ನಿ ಹೇಳುತ್ತೇನೆ.
ವಿಕಾಸ್ ತಂದೆ ಸುರೇಶ್: ಏನಾದರೂ ತಗೊಂಡಿದ್ದಾನೆ ಹೆಂಗೆ?
ಹಾಸ್ಟೆಲ್ ವಾರ್ಡನ್‌ ಹೇಮಂತ್: ಇಲ್ಲ, ಇಲ್ಲ ಸರ್ ನೀವು ಧೈರ್ಯವಾಗಿ ಬನ್ನಿ ಸರ್.
ವಿಕಾಸ್ ತಂದೆ ಸುರೇಶ್: ಭಯ ಅದಕ್ಕೆ
ಹಾಸ್ಟೆಲ್ ವಾರ್ಡನ್‌ ಹೇಮಂತ್: ಹೌದು ಸರ್ ಬನ್ನಿ, ಬನ್ನಿ
ವಿಕಾಸ್ ತಂದೆ ಸುರೇಶ್: ಯಾವ ಹಾಸ್ಪಿಟಲ್‌ಗೆ ಹಾಕಿದಿರಾ ಹೇಳಿ.
ಹಾಸ್ಟೆಲ್ ವಾರ್ಡನ್‌ ಹೇಮಂತ್: ಇಲ್ಲಾ ಇಲ್ಲಾ ನಮ್ಮ‌ ಹಾಸ್ಟೆಲ್‌ನಲ್ಲೇ ಇದ್ದಾನೆ, ಬನ್ನಿ ಬನ್ನಿ ಬೇಗ ಬನ್ನಿ, ನಿಮ್ಮ ಮಗ ಫೋನ್ ಮಾಡಿದ್ನಾ?
ವಿಕಾಸ್ ತಂದೆ ಸುರೇಶ್: ಹೂ ಈಗ ಮಾಡಿದ್ದ.

ಇದನ್ನೂ ಓದಿ: ಹಾಸ್ಟೆಲ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ, ಪೀಠೋಪಕರಣ ಧ್ವಂಸ ಮಾಡಿ ಪೋಷಕರ ಆಕ್ರೋಶ

ಹಾಸ್ಟೆಲ್ ವಾರ್ಡನ್‌ ಹೇಮಂತ್: ಏನ್​ ಹೇಳಿದ ಸರ್?
ವಿಕಾಸ್ ತಂದೆ ಸುರೇಶ್: ಅವನು ಏನು ಹೇಳಿಲ್ಲ. ಒಟ್ಟಿನಲ್ಲಿ ಅಳುತ್ತಿದ್ದ ಏಕೆ ಅಳುತ್ತಿದ್ದ?
ಹಾಸ್ಟೆಲ್ ವಾರ್ಡನ್‌ ಹೇಮಂತ್: ಗೊತ್ತಿಲ್ಲ ಸರ್ ಏನು ಅಂತ ಹೇಳಿ.
ವಿಕಾಸ್ ತಂದೆ ಸುರೇಶ್: ಥೂ ತರಿಕೆ ಅಷ್ಟೆಲ್ಲಾ ಹೇಳಿದಿನಿ.
ಹಾಸ್ಟೆಲ್ ವಾರ್ಡನ್‌ ಹೇಮಂತ್: ಓ ಬನ್ನಿ ಸರ್ ನಾನು ಬೆಳಿಗ್ಗೆ ತಿಂಡಿ ತಿನ್ನಕೆ ಅಂತ ಹೋಗಿದಿನಿ ಸರ್, ಸ್ವಲ್ಪ ಬೇಗ ಬನ್ನಿ.
ವಿಕಾಸ್ ತಂದೆ ಸುರೇಶ್: ಯಾರಾದರೂ ಹೊಡೆದಾಡಿಕೊಂಡರಾ ಹೆಂಗೆ ಸರ್​?
ಹಾಸ್ಟೆಲ್ ವಾರ್ಡನ್‌ ಹೇಮಂತ್: ಇಲ್ಲ ಇಲ್ಲ ಸರ್. ಆ ತರ ಏನು ಇಲ್ಲಾ ಸರ್, ನಾನು ಇಲ್ಲೇ ಇದ್ದೀನಿ.
ವಿಕಾಸ್ ತಂದೆ ಸುರೇಶ್: ಅಲ್ಲಾ ಔಷಧಿ ಏನಾದರೂ ತಗೊಂಡಿದ್ದಾನಾ ಹೆಂಗೆ?
ಹಾಸ್ಟೆಲ್ ವಾರ್ಡನ್‌ ಹೇಮಂತ್: ಇಲ್ಲ ಸರ್ ಸ್ವಲ್ಪ ಬೇಗ ಬನ್ನಿ ಸರ್.
ವಿಕಾಸ್ ತಂದೆ ಸುರೇಶ್: ಅಲ್ಲ ನಮ್ಮ‌ಅಣ್ಣವರಿಗೆ ಹೇಳಬೇಕು ಅದಕ್ಕೆ.
ಹಾಸ್ಟೆಲ್ ವಾರ್ಡನ್‌ ಹೇಮಂತ್: ಅಣ್ಣನು ಬರಕೆ ಹೇಳಿ ಸರ್ ಒಂದು ನಿಮಿಷ ಇಲ್ಲಿಗೆ
ವಿಕಾಸ್ ತಂದೆ ಸುರೇಶ್: ಅಯ್ಯೋ ಶಿವನೇ
ಹಾಸ್ಟೆಲ್ ವಾರ್ಡನ್‌ ಹೇಮಂತ್: ಎಲ್ಲಿ ಇದ್ದರೂ ಬರಲು ಹೇಳಿ ಸರ್ ಇಮಿಡಿಯಟ್ಲಿ.
ವಿಕಾಸ್ ತಂದೆ ಸುರೇಶ್: ಅಲ್ಲ ಸರ್ ಸೀರಿಯಸ್ಸಾ ಹೆಂಗೆ ಸರ್?
ಹಾಸ್ಟೆಲ್ ವಾರ್ಡನ್‌ ಹೇಮಂತ್: ಹೌದು ಸರ್, ಸೀರಿಯಸ್ಸೇ ಬನ್ನಿ.
ವಿಕಾಸ್ ತಂದೆ ಸುರೇಶ್: ಇದೇನ್ ಸರ್ ಹಿಂಗ್ ಅಂತಿರಾ?
ಹಾಸ್ಟೆಲ್ ವಾರ್ಡನ್‌ ಹೇಮಂತ್: ಹೌದು ಸರ್, ಹೌದು ಸರ್ ಹೌದು.
ವಿಕಾಸ್ ತಂದೆ ಸುರೇಶ್: ಸರ್ ನಮ್ಮ ದಮ್ಮಯ್ಯ ಅಂತಿನಿ ಎಲ್ಲಿಗಾದರೂ ದೊಡ್ಡ ಹಾಸ್ಪಿಟಲ್‌ಗೆ ಕರೆದುಕೊಂಡು ಹೋಗಿ ಸರ್.

ಇದನ್ನೂ ಓದಿ: ಕಲಬುರಗಿ: ಸಿನಿಮೀಯ ರೀತಿಯಲ್ಲಿ ಅಪ್ರಾಪ್ತೆಯ ಕತ್ತು ಕೊಯ್ದ ಯುವಕರು‌; ಆಸ್ಪತ್ರೆಗೆ ದಾಖಲು

ಹಾಸ್ಟೆಲ್ ವಾರ್ಡನ್‌ ಹೇಮಂತ್: ಅಯ್ಯೋ ಸರ್ ದಯವಿಟ್ಟು ಬನ್ನಿ ನನಗೆ ಮಾತನಾಡಲು ಶಕ್ತಿ ಇಲ್ಲ. ದಯವಿಟ್ಟು ಬನ್ನಿ ಸರ್.
ವಿಕಾಸ್ ತಂದೆ ಸುರೇಶ್: ಅಲ್ಲಿ ಯಾರೂ ಹುಡುಗರು ಇಲ್ವಾ?
ಹಾಸ್ಟೆಲ್ ವಾರ್ಡನ್‌ ಹೇಮಂತ್: ಎಲ್ಲಾ ಇದೇ ಸರ್ ಬನ್ನಿ ಸರ್.
ವಿಕಾಸ್ ತಂದೆ ಸುರೇಶ್: ಹಲೋ ಯಾವುದಾದರೂ ಹಾಸ್ಟೆಟಲ್‌ಗೆ ದಮ್ಮಯ್ಯ ಅಂತೀನಿ ಕರ್ಕಂಡು ಹೋಗಿ ಸರ್.
ಹಾಸ್ಟೆಲ್ ವಾರ್ಡನ್‌ ಹೇಮಂತ್: ಅಯ್ಯೋ ನಿಮ್ಮ ದಮ್ಮಯ್ಯ ಅನ್ಬೇಡಿ ಸರ್ ಬನ್ನಿ.
ವಿಕಾಸ್ ತಂದೆ ಸುರೇಶ್: ತುಂಬಾ ಸಿರೀಯಸ್ಸಾ ಹೆಂಗೆ ಸರ್?
ಹಾಸ್ಟೆಲ್ ವಾರ್ಡನ್‌ ಹೇಮಂತ್: ಹೌದು ಸರ್ ಹೌದು ಬನ್ನಿ ಸರ್.
ವಿಕಾಸ್ ತಂದೆ ಸುರೇಶ್: ಸರ್ ನಿಮ್ಮ‌ ದಮ್ಮಯ್ಯ ಅಂತೀನಿ ಸರ್, ನನ್‌ ತಲೆ ಮೇಲೆ ಕಲ್ಲು ಹಾಕಬೇಡಿ ಸರ್ ಏನಾದರೂ ಸತ್ತು ಗಿತ್ತು ಹೋಗಿದನಾ ಸರ್?
ಹಾಸ್ಟೆಲ್ ವಾರ್ಡನ್‌ ಹೇಮಂತ್: ಹೌದು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:30 pm, Thu, 22 February 24