ಚೆನ್ನೈ: ಕೆಲಸ ಮುಗಿಸಿ ವಾಪಸಾಗುತ್ತಿದ್ದ ರೈತ ಕುಟುಂಬದ ಮೇಲೆ ಮಾನಸಿಕ ಅಸ್ವಸ್ಥನೊಬ್ಬ ದಾಳಿ ನಡೆಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥ ರೈತನೊಬ್ಬನ ತಲೆ ಕತ್ತರಿಸುವುದರ ಜತೆಗೆ ರೈತನ ಮಗನ ಮೇಲೂ ಹಲ್ಲೆ ನಡೆಸಿದ್ದಾನೆ. ತಮಿಳುನಾಡಿನ ತಿರುಚ್ಚಿಯಲ್ಲಿ ಈ ಘಟನೆ ನಡೆದಿದೆ.
ಘಟನೆ ನಡೆದಾಗ ಹತ್ಯೆಗೀಡಾದ ವ್ಯಕ್ತಿಯ ಪತ್ನಿ ಕೂಡ ಸ್ಥಳದಲ್ಲಿದ್ದರು. ಮೂರು ಮಂದಿಯು ಹೊಲದಲ್ಲಿ ಕೆಲಸ ಮುಗಿಸಿ ಹಿಂದಿರುಗುತ್ತಿದ್ದಾಗ ಆರೋಪಿ ಚೆನ್ನದೊರೈ(52) ಎಂಬಾತ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ಮಚ್ಚಿನಿಂದ ರೈತ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾನೆ, ಪೋಷಕರ ಎದುರು 34 ವರ್ಷದ ಮಗನ ಮೇಲೆ ದಾಳಿ ನಡೆಸಿದ್ದ, ಬಳಿಕ ಅವರ ತಂದೆ ದುರೌರಾಜ್ ಅವರ ಕತ್ತು ಸೀಳಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉತ್ತಂದಂಪಟ್ಟಿಯ ಗೌಂಡರ್ ಸ್ಟ್ರೀಟ್ನಲ್ಲಿ ರೈತನ ತುಂಡರಿಸಿದ ತಲೆಯು ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ, ಹಲ್ಲೆ ಪೂರ್ವ ನಿಯೋಜಿತವಲ್ಲ ಎಂದು ಸಾಬೀತಾಯಿತು ಚೆಲ್ಲದುರೈ ಮಾನಸಿಕ ಅಸ್ವಸ್ಥರಾಗಿದ್ದರು ಎಂದು ಪತ್ರಿಕೆಗಳು ವರದಿ ಮಾಡಿವೆ.
ಚೆಲ್ಲದುರೈ ಕೈಗಳಿಗೆ ಗಾಯಗಳಾಗಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ