ತುಂಬಾ ಫೇಮಸ್ ಆಗ್ಬೇಕು ಅಂತಾ ಪಾಪಿ ಆರೋಪಿ ಫರಾನ್ ಹೀಗಾ ಮಾಡೋದು!?

ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಸಂಬಂಧಿಸಿ ಬಂಧಿತ ಆರೋಪಿ ಫರಾನ್ ಪಾಷಾನನ್ನು 12 ದಿನ ಪೊಲೀಸರ ವಶಕ್ಕೆ ನೀಡಲಾಗಿದೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದ ಪೊಲೀಸರು ಹೆಚ್ಚಿನ ವಿಚಾರಣೆಗೆ 15 ದಿನಗಳ ವಶಕ್ಕೆ ಕೇಳಿದ್ದರು ಆದರೆ 12 ದಿನ ಪೊಲೀಸರ ವಶಕ್ಕೆ ನೀಡಿ ಮೈಸೂರಿನ ಜೆಎಂಎಫ್‌ಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, ತನಿಖೆ ಚುರುಕುಗೊಳಿಸಿರುವ ಪೊಲೀಸರು ಹಲವರ ವಿಚಾರಣೆ ನಡೆಸುತ್ತಿದ್ದಾರೆ. ತುಂಬಾ ಫೇಮಸ್ […]

ತುಂಬಾ ಫೇಮಸ್ ಆಗ್ಬೇಕು ಅಂತಾ ಪಾಪಿ ಆರೋಪಿ ಫರಾನ್ ಹೀಗಾ ಮಾಡೋದು!?
ಸಾಧು ಶ್ರೀನಾಥ್​

Updated on: Nov 19, 2019 | 12:38 PM

ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಸಂಬಂಧಿಸಿ ಬಂಧಿತ ಆರೋಪಿ ಫರಾನ್ ಪಾಷಾನನ್ನು 12 ದಿನ ಪೊಲೀಸರ ವಶಕ್ಕೆ ನೀಡಲಾಗಿದೆ.

ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದ ಪೊಲೀಸರು ಹೆಚ್ಚಿನ ವಿಚಾರಣೆಗೆ 15 ದಿನಗಳ ವಶಕ್ಕೆ ಕೇಳಿದ್ದರು ಆದರೆ 12 ದಿನ ಪೊಲೀಸರ ವಶಕ್ಕೆ ನೀಡಿ ಮೈಸೂರಿನ ಜೆಎಂಎಫ್‌ಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, ತನಿಖೆ ಚುರುಕುಗೊಳಿಸಿರುವ ಪೊಲೀಸರು ಹಲವರ ವಿಚಾರಣೆ ನಡೆಸುತ್ತಿದ್ದಾರೆ.

ತುಂಬಾ ಫೇಮಸ್ ಆಗ್ಬೇಕು ಅಂತಾ ಪಾಪಿ ಹೀಗಾ ಮಾಡೋದು!?
ಇನ್ನು ಯಾಕಪ್ಪಾ ನಿಮ್ಮ ಫ್ರೆಂಡ್ ಫರಾನ್ ಹೀಗೆ ಶಾಸಕ ತನ್ವೀರ್​ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಏನು ಕಾರಣ ಇರಬಹುದು ಅಂತಾ ಹೇಳಿ ಎಂದು ಆರೋಪಿ ಫರಾನ್​ನ ಗೆಳೆಯರನ್ನು ಪೊಲೀಸರು ರುಬ್ಬಿದ್ದಕ್ಕೆ ಗಣ್ಯರನ್ನ ಕೊಲೆ ಮಾಡಿ ಹೆಸರು ಮಾಡ್ತೀನಿ ಅಂತಾ ಹೇಳ್ತಿದ್ನಂತೆ. ಹಾಗಾಗಿ ಹಲ್ಲೆ ಮಾಡಿದ್ದಾನೆ ಎಂದಿದ್ದಾರೆ. ಆರೋಪಿ ಫರಾನ್ ತನ್ನ ಆಸೆಯನ್ನ ಆಪ್ತರು ಹಾಗೂ ಗೆಳೆಯರೊಂದಿಗೆ ಹೇಳಿಕೊಂಡಿದ್ದನಂತೆ.

ಫರಾನ್‌ಗೆ ಇತ್ತಿಚಿಗೆ ಹೆಸರು ಮಾಡುವ ಹುಚ್ಚು ಹಿಡಿದಿತ್ತು. ತುಂಬಾ ಫೇಮಸ್ ಆಗ್ಬೇಕು ಅಂತ ಹೇಳ್ತಿದ್ದ. ನಮ್ಮ‌ ಜೊತೆನು ವಿಐಪಿ ಒಬ್ಬರನ್ನ ಕೊಲೆ ಮಾಡಿ ಫೇಮಸ್ ಆಗ್ತಿನಿ ಅಂತಿದ್ದ. ಆದ್ರೆ ಯಾರು ಆ ವಿಐಪಿ ಯಾವಾಗ ಮಾಡ್ತಾನೆ ಅಂತ ಹೇಳಿರಲಿಲ್ಲ. ಆತ ತಮಾಷೆಗೆ ಹೇಳ್ತಾನೆ ಅಂತ ಅಂದುಕೊಂಡಿದ್ದೆವು ಅಂತಾ ಪೊಲೀಸರಿಗೆ ಗೆಳೆಯರು ಮಾಹಿತಿ ನೀಡಿದ್ದಾರೆ. ತನ್ವೀರ್ ಸೇಠ್ ಮೇಲಿನ ಕೊಲೆ‌ಯತ್ನ ಕಂಡು ಫರಾನ್ ಗೆಳೆಯರು ದಿಗ್ಬ್ರಾಂತರಾಗಿದ್ದಾರೆ.

ಕರ್ತವ್ಯಲೋಪ ಹಿನ್ನೆಲೆ ಸೇಠ್ ಗನ್‌ಮ್ಯಾನ್ ಅಮಾನತು:
ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಕೇಸ್​​ನಲ್ಲಿ ಕರ್ತವ್ಯಲೋಪವೆಸಗಿರುವ ಸೇಠ್ ಗನ್‌ಮ್ಯಾನ್​ ಫಿರೋಜ್ ಖಾನ್​ ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ. ಈ ಸಂಬಂಧ, ಮೈಸೂರು ನಗರ ಪೊಲೀಸ್ ಆಯುಕ್ತರು CAR ಪೊಲೀಸ್ ಪೇದೆಯಾಗಿರುವ ಫಿರೋಜ್ ಅವರನ್ನು ಅಮಾನತು ಮಾಡಿ ಆದೇಶ ನೀಡಿದ್ದಾರೆ.

Published On - 9:06 am, Tue, 19 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us